Advertisement
ಪ್ರಮುಖ ಕಾರಣಗಳು-– ಸ್ನಾನದ ಸಾಬೂನು, ಚರ್ಮಕ್ಕೆ ಹಚ್ಚುವ ಮಾಯಿಶ್ಚರೈಸರ್‌ಗಳನ್ನು ಆಗಾಗ ಬದಲಾಯಿಸುವುದರಿಂದ ಚರ್ಮದ ಸಮಸ್ಯೆ ಕಾಡಬಹುದು.
– ಅತಿಯಾದ ಧೂಳು, ಮಾಲಿನ್ಯ ಪ್ರದೇಶಗಳಲ್ಲಿ ಓಡಾಡುವುದರಿಂದ.
– ಅನಿಮಿಯತ, ಅಕಾಲಿಕ ಹಾಗೂ ವಿರುದ್ಧ ಆಹಾರ ಸೇವನಾ ಕ್ರಮದಿಂದ.
– ಅನುವಂಶೀಯತೆಯಿಂದಲೂ ಈ ರೋಗ ಬರುವ ಸಾಧ್ಯತೆಯಿದೆ.
-ಸೋರಿಯಾಸಿಸ್ ಸಾಂಕ್ರಾಮಿಕ ರೋಗವಲ್ಲದಿದ್ದರೂ, ಅದು ಯಾರಿಗೆ ಇದೆಯೋ, ಅವರ ದೇಹದಲ್ಲಿ ಅದು ಹರಡುತ್ತಾ ಹೋಗುತ್ತದೆ.
-ಇದು ದೇಹದ ಯಾವ ಭಾಗದಲ್ಲೂ ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ತಲೆ, ಕಾಲುಗಳು, ಬೆನ್ನು, ಹೊಟ್ಟೆ, ಮೊಣಕೈ, ಕೈ ಬೆರಳುಗಳ ಸಂದುಗಳಲ್ಲಿ ಕಂಡುಬರುತ್ತದೆ.
– ಸಣ್ಣ ಗಾಯ ಅಥವಾ ಬಿರುಕು ಬಿಟ್ಟಂತೆ ಪ್ರಾರಂಭವಾಗಿ ಕ್ರಮೇಣ ಇಡೀ ದೇಹದ ಮೇಲೆ ಹಬ್ಬುತ್ತದೆ. ಜೊತೆಗೆ ತುರಿಕೆಯೂ ಇರುತ್ತದೆ.
– ಕೆಲವೊಮ್ಮೆ ಅದರಿಂದ ಹುಡಿ ಉದುರಬಹುದು. ಕಡೆಗಣಿಸಿದರೆ, ಅದು ದೇಹದಲೆಲ್ಲಾ ಹಬ್ಬಬಹುದು.
ಆದ್ದರಿಂದ ಈ ಲಕ್ಷಣಗಳು ಕಂಡುಬಂದ ತಕ್ಷಣವೇ ಚಿಕಿತ್ಸೆ ಪಡೆದುಕೊಳ್ಳಿ. ಚಿಕಿತ್ಸೆಯ ಜೊತೆಗೆ, ಆಹಾರದಲ್ಲಿ ಪಥ್ಯ ಮಾಡಬೇಕು. ಯಾವುದನ್ನು ತಿನ್ನಬಾರದು?
– ಅತಿಯಾದ ಮಾಂಸಾಹಾರ ಸೇವನೆ, ಎಣ್ಣೆಯಲ್ಲಿ ಕರಿದ ಪದಾರ್ಥಗಳು.
– ಅತಿಯಾದ ಮಸಾಲೆ ಸೇವನೆ, ಬೇಕರಿ ತಿನಿಸುಗಳು, ಉಪ್ಪು.
-ಬದನೆ, ಆಲೂಗಡ್ಡೆ, ಮೂಲಂಗಿಯಂಥ ನಂಜಿನ ತರಕಾರಿಗಳು.
– ರಾತ್ರಿ ಸಮಯದಲ್ಲಿ ಕಫ ವೃದ್ಧಿಸುವಂಥ ಮೊಸರು, ಬೆಣ್ಣೆ, ಉದ್ದು, ತಂಪಾದ ಪಾನೀಯಗಳು.
Related Articles
– ಹೊತ್ತೂತ್ತಿಗೆ ಸರಿಯಾಗಿ, ಹಿತಮಿತವಾಗಿ ಆಹಾರ ಸೇವಿಸಿ.
– ಅತಿಯಾಗಿ ತಿನ್ನುವುದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗಿ ಆಹಾರ ವಿಷವಸ್ತುವಾಗಿ ಪರಿಣಮಿಸುತ್ತದೆ.
– ವಾರದಲ್ಲಿ ಒಂದು ಬಾರಿಯಾದರೂ ಉಪವಾಸ ಮಾಡಿದರೆ ಒಳ್ಳೆಯದು.
– ತಾಜಾ ಹಣ್ಣು-ತರಕಾರಿಗಳು, ಒಂದೆಲಗ, ಸಾಂಬ್ರಾಣಿ ಸೊಪ್ಪು ಮುಂತಾದ ಸೊಪ್ಪಿನ ಸೇವನೆಯಿಂದ ದೇಹದ ವಿಷಕಾರಿ ಅಂಶಗಳು ಹೊರ ಹೋಗುತ್ತವೆ.
– ಆಹಾರದಲ್ಲಿ ತೆಂಗಿನೆಣ್ಣೆಯ ಬಳಕೆ ಉತ್ತಮ.
– ಗೋಧಿ, ಹೆಸರುಕಾಳು ಮುಂತಾದ ಕಾಳುಗಳು ಹಾಗೂ ಬೀಜಗಳ ಸೇವನೆ ಒಳ್ಳೆಯದು.
– ಅರಿಶಿನ, ಬೆಳ್ಳುಳ್ಳಿ, ಜೇನುತುಪ್ಪ ಚರ್ಮವ್ಯಾಧಿಗಳಿಗೆ ಪರಿಹಾರ ನೀಡುವುದು.
Advertisement
ಜೀವನಶೈಲಿ ಹೀಗಿರಲಿ– ಸ್ನಾನದ ನೀರಿಗೆ ಬೇವಿನ ಸೊಪ್ಪನ್ನು ಹಾಕಿ, ಬೇವಿನೆಣ್ಣೆ ಹಚ್ಚಿ ಸ್ನಾನ ಮಾಡಬಹುದು.
– ಬಿಸಿಲಿನಲ್ಲಿ ಹೆಚ್ಚಾಗಿ ಅಡ್ಡಾಡಬೇಡಿ.
– ದಿನವೂ ಮೈಗೆ ತೈಲ ಅಥವಾ ಚಂದನವನ್ನು ಲೇಪಿಸುವುದರಿಂದ ಚರ್ಮ ಆರೋಗ್ಯವಾಗಿರುತ್ತದೆ.
-ವಾರಕ್ಕೊಮ್ಮೆ ಅಭ್ಯಂಗ ಸ್ನಾನ ಹಾಗೂ ಹಬೆ ಸ್ನಾನ ಮಾಡಿದರೆ, ಚರ್ಮದ ಮೂಲಕ ವಿಷ ವಸ್ತುಗಳು ದೇಹದಿಂದ ಹೊರ ಹೋಗಲು ಸಾಧ್ಯ. -ಡಾ. ಶ್ರೀಲತಾ ಪದ್ಯಾಣ, ಪ್ರಕೃತಿ ಚಿಕಿತ್ಸಾ ತಜ್ಞೆ