Advertisement

ಯೋಗದಿಂದ ರೋಗಮುಕ್ತ ಜೀವನ: ಜಡೆಮಠ ಶ್ರೀ

05:31 PM Apr 19, 2019 | Naveen |

ಸೊರಬ: ಯೋಗವನ್ನು ಜೀವನ ಕ್ರಮವನ್ನಾಗಲಿ ರೂಢಿಸಿಕೊಂಡರೆ ರೋಗಮುಕ್ತ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಜಡೆ ಸಂಸ್ಥಾನ ಮಠದ ಡಾ| ಮಹಾಂತ ಮಹಾಸ್ವಾಮಿಗಳು ಹೇಳಿದರು.

Advertisement

ಪಟ್ಟಣದ ಚಾಮರಾಜಪೇಟೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ರೋಟರಿ ಕ್ಲಬ್‌ ವತಿಯಿಂದ ಹಮ್ಮಿಕೊಂಡ ಯೋಗ ಮತ್ತು ಪ್ರಾಣಾಯಾಮ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಬುದ್ಧನ ಉಪನ್ಯಾಸ, ಧ್ಯಾನ ಮತ್ತು ಪತಂಜಲಿ ಮುನಿಗಳ ಯೋಗವು ಪ್ರಪಂಚಕ್ಕೆ ದೊಡ್ಡ ಕೊಡುಗೆಯಾಗಿದೆ. ಯೋಗ ಎಂಬುದು ನಮ್ಮ ಋಷಿಮುನಿಗಳು ಕಂಡುಕೊಂಡ ಜೀವನಶೈಲಿ.
ಭಗವದ್ಗೀತೆಯ ಅಧ್ಯಾಯಗಳು ಯೋಗದಿಂದಲೇ ಪ್ರಾರಂಭವಾಗಿದ್ದು, ಯೋಗಾಭ್ಯಾಸದಿಂದ ನಮ್ಮ ಆರೋಗ್ಯ ವೃದ್ಧಿಸುವ ಜತೆಗೆ ನಮ್ಮಲ್ಲಿರುವ ಅಹಂಕಾರ, ದ್ವೇಷ ಅಸೂಯೆ ದೂರ ಇಡುತ್ತದೆ. ಈ ನಿಟ್ಟಿನ ಕಾರ್ಯಕ್ರಮಗಳನ್ನು ರೋಟರಿ ಸಂಸ್ಥೆ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.

ರೋಟರಿ ಸಂಸ್ಥೆಯ ಅಧ್ಯಕ್ಷ ಡಿ.ಎಸ್‌. ಶಂಕರ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಯೋಗ ಎನ್ನುವುದು ದೇಹ, ಮನಸ್ಸು ಮತ್ತು ಉಸಿರಾಟಕ್ಕೆ ಸಂಬಂ ಧಿಸಿದ್ದು, ಇವು ಮೂರು ಒಂದಾದಾಗ
ಮಾತ್ರ ಯೋಗ ಸಿದ್ಧಿಸುತ್ತದೆ. ಚಿಕ್ಕ ವಯಸ್ಸಿನಲ್ಲಿ ಯೋಗಾಭ್ಯಾಸ ಮಾಡುವುದರಿಂದ ಏಕಾಗ್ರತೆ ಸಾಧಿಸಲು ಸಾಧ್ಯವಾಗುತ್ತದೆ ಎಂದರು.ರೋಟರಿಯ ಸಂಸ್ಥಾಪಕ ಅಧ್ಯಕ್ಷ ಡಾ| ಜ್ಞಾನೇಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬಿ.ಕೆ. ಚೇತನಕ್ಕ, ಶಿಕ್ಷಕಿ ಶಾರದಾ ಹೆಗ್ಡೆ, ನಿಕಟಪೂರ್ವ ಅಧ್ಯಕ್ಷ ನಾಗರಾಜ್‌ ಗುತ್ತಿ, ರಾಜು ಹಿರಿಯಾವಲಿ, ಜಾವಿದ್‌, ರೋಹಿತ್‌, ಕೃಷ್ಣಪ್ಪ, ಸುಜಾತಾ ರವಿಶಂಕರ್‌ ಜೋತಾಡಿ, ಗೌರಮ್ಮ ಭಂಡಾರಿ, ಚಂದ್ರಪ್ಪ, ದುರ್ಗಪ್ಪ, ರವಿಯಣ್ಣ, ರಾಘವೇಂದ್ರ, ರಮೇಶ್‌ ಕಲ್ಲಂಬಿ, ಜಯದೇವ್‌ ನರ್ಸರಿ, ದಾನೇಶ್ವರಿ ಗುತ್ತಿ, ವೀಣಾ ಶಂಕರ್‌
ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next