Advertisement

ಕೆಎಫ್‌ಡಿ; ಎಚ್ಚರ ಅಗತ್ಯ

04:25 PM Apr 27, 2020 | Naveen |

ಸೊರಬ: ಕೋವಿಡ್ ಸೋಂಕಿನ ಹಸಿರು ಪಟ್ಟಿಯಲ್ಲಿರುವ ಶಿವಮೊಗ್ಗಕ್ಕೆ ಮಂಗನ ಕಾಯಿಲೆ ಸೋಂಕು ಗಂಭೀರವಾಗಿದ್ದು ಎಚ್ಚರಿಕೆ ವಹಿಸಬೇಕು ಎಂದು ರಾಜ್ಯ ಜೀವವೈವಿಧ್ಯ ಮಂಡಳಿಯ ರಾಜ್ಯಾಧ್ಯಕ್ಷ ಅನಂತ ಹೆಗಡೆ ಅಶಿಸರ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಪಟ್ಟಣದ ಅರಣ್ಯ ಇಲಾಖೆ ಭವನದಲ್ಲಿ ವಿವಿಧ ಇಲಾಖೆ ಅಧಿಕಾರಿ, ಪರಿಸರ ಕಾರ್ಯಕರ್ತರೊಂದಿಗೆ ಮಾತನಾಡಿದ ಅವರು, ಉತ್ತಮ ಮಳೆಯಾಗುವ ತನಕವೂ ಮಂಗನ ಕಾಯಿಲೆಯ ವೈರಾಣು ಜೀವಂತವಾಗಿರುವ ಹಿನ್ನೆಲೆಯಲ್ಲಿ ತಾಲೂಕು ಆಡಳಿತ, ಆರೋಗ್ಯ ಇಲಾಖೆ, ಅರಣ್ಯ ಇಲಾಖೆ ಎಚ್ಚರಿಕೆ ವಹಿಸಬೇಕು ಎಂದರು.

ತಾಲೂಕಿನಲ್ಲಿ ಮಂಗಗಳ ಸಾವಿನ ಕುರಿತು ಬಂದಿರುವ ವೈದ್ಯಕೀಯ ವರದಿಯ ಅಂಕಿ-ಅಂಶ ಒದಗಿಸಿದ ತಾಲೂಕು ವೈದ್ಯಾಧಿಕಾರಿ ಡಾ| ಅಕ್ಷತಾ, ಇಲ್ಲಿಯವರೆಗೆ 18 ಮಂಗಗಳು ಸಾವನ್ನಪ್ಪಿದ್ದು, ಒಂದು ಪಾಸಿಟಿವ್‌ ಬಂದಿದೆ. ಇನ್ನುಳಿದಂತೆ ಬೇರೆ ಬೇರೆ ಕಾರಣಗಳಿಂದ ಅವು ಸಾವನ್ನಪ್ಪಿವೆ. ಚಂದ್ರಗುತ್ತಿ ಭಾಗದಲ್ಲಿ ಓರ್ವ ವ್ಯಕ್ತಿಗೆ ಸೋಂಕು ತಗುಲಿದ್ದು, ಗುಣಮುಖರಾಗಿದ್ದಾರೆ. ಕಾಯಿಲೆ ವ್ಯಾಪಿಸದಂತೆ ಲಸಿಕೆ ನೀಡಲಾಗಿದ್ದು, ಈಚೆಗೆ ತುಸು ಶಂಕೆ ಕಾಣಿಸಿರುವ ಹರೀಶಿ ಭಾಗದಲ್ಲಿ ಪುನಃ ಲಸಿಕೆ ಕಾರ್ಯಕ್ರಮ ನಡೆಸಲಾಗುತ್ತದೆ ಎಂದರು.

ತಹಶೀಲ್ದಾರ್‌ ಪಟ್ಟರಾಜ ಗೌಡ, ವಲಯ ಸಂರಕ್ಷಣಾಧಿ ಕಾರಿ ಮಂಜುನಾಥ್‌, ವಲಯಾರಣ್ಯಾ ಧಿಕಾರಿ ಗಣೇಶ್‌ ಶೆಟ್ಟರ್‌, ಜಾವೀದ್‌ ಅಂಗಡಿ, ಸತ್ಯನಾರಾಯಣ, ಶ್ರೀಪಾದ ಬಿಚ್ಚುಗತ್ತಿ, ಈರೇಶ ಗೌಡ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next