ಸೊರಬ: ಗಾಳಿ ಮಳೆಗೆ ಮನೆ ಮೇಲೆ ಮರಗಳು ಉರುಳಿದ ಪರಿಣಾಮ ತಾಯಿ ಮತ್ತು ಮಗ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಚಂದ್ರಗುತ್ತಿ ಸಮೀಪದ ಕತವಾಯಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಗ್ರಾಮದ ಕಾಮಾಕ್ಷಮ್ಮ ತಿಮ್ಮಪ್ಪ (60) ಹಾಗೂ ಅವರ ಪುತ್ರ ದೇವರಾಜ ತಿಮ್ಮಪ್ಪ (31) ಗಾಯಗೊಂಡವರು.
ಮನೆಯಲ್ಲಿ ಬೆಳಗ್ಗೆ ಉಪಹಾರ ಸೇವಿಸುವ ವೇಳೆಯಲ್ಲಿ ಗಾಳಿ ಮಳೆಗೆ ಬೃಹತ್ ಗಾತ್ರದ ಹುಣಸೆಮರ ಹಾಗೂ ಎರಡು ತೆಂಗಿನ ಮರಗಳು ಮನೆಯ ಮೇಲ್ಛಾವಣಿಯ ಮೇಲೆ ಬಿದ್ದಿವೆ. ಪರಿಣಾಮ ತಾಯಿ ಮತ್ತು ಮಗ ಗಾಯಗೊಂಡಿದ್ದಾರೆ. ಜೊತೆಗೆ ಮನೆ, ಕೊಟ್ಟಿಗೆ ಮತ್ತು ಶೌಚಗೃಹಕ್ಕೂ ಸಾಕಷ್ಟು ಹಾನಿಯಾಗಿದೆ. ಗಾಯಾಳುಗಳಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಆಲ್ಟ್ ನ್ಯೂಸ್ ಸಹಸಂಸ್ಥಾಪಕ ಜುಬೇರ್ ಮೊಹಮ್ಮದ್ ಗೆ ಜಾಮೀನು; ದೇಶವನ್ನು ತೊರೆಯುವಂತಿಲ್ಲ
ಸ್ಥಳಕ್ಕೆ ಪ್ರಭಾರ ಉಪತಹಶೀಲ್ದಾರ್ ಶಿವಪ್ರಸಾದ್, ಗ್ರಾಪಂ ಪಿಡಿಒ ನಾಗೇಂದ್ರ, ಗ್ರಾಪಂ ಅಧ್ಯಕ್ಷ ಎಂ.ಪಿ. ರತ್ನಾಕರ, ಸದಸ್ಯ ರೇಣುಕಾ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.