Advertisement

ಗಾಜಿನಮನೆ ಅಂಗಳದಲ್ಲಿ ಅತ್ಯಾಧುನಿಕ ಕಾರಂಜಿ

07:04 PM Jul 19, 2021 | Team Udayavani |

ಶಿವಶಂಕರ ಕಂಠಿ

Advertisement

ಹುಬ್ಬಳ್ಳಿ: ಸ್ಮಾರ್ಟ್‌ ಸಿಟಿ ಯೋಜನೆಯಿಂದಾಗಿ ಇಲ್ಲಿನ ಮಹಾತ್ಮ ಗಾಂಧಿ ಉದ್ಯಾನವನ ಆವರಣದ ಸೌಂದರ್ಯ ಹೆಚ್ಚಾಗುತ್ತಿದ್ದು, ಇಲ್ಲಿ ನಿರ್ಮಿಸಲಾದ ಕಾರಂಜಿ ಮೈಸೂರಿನ ಕೃಷ್ಣ ರಾಜ ಸಾಗರ (ಕೆಆರ್‌ಎಸ್‌) ಕ್ಕಿಂತಲೂ ಅತ್ಯಾಧುನಿಕತೆಯಿಂದ ಕೂಡಿದೆ.

ಸೆಪ್ಟೆಂಬರ್‌ ಮೊದಲ ವಾರದಲ್ಲಿ ಇದು ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗಲಿದೆ. ಅಂದಾಜು 4.62 ಕೋಟಿ ರೂ. ವೆಚ್ಚದಲ್ಲಿ ಐದು ವರ್ಷಗಳ ನಿರ್ವಹಣೆಯೊಂದಿಗೆ ಬೆಂಗಳೂರಿನ ಬಿಎನ್‌ಎ ಟೆಕ್ನಾಲಜಿಯವರು ಕೆಆರ್‌ಎಸ್‌ಗಿಂತ ಉನ್ನತೀಕರಣ ಹೊಂದಿದ ಕಾರಂಜಿ ನಿರ್ಮಿಸಿದ್ದಾರೆ. ಈಗಾಗಲೇ ಕಾರಂಜಿಗೆ ಅವಶ್ಯವಾದ ಉಪಕರಣ, ಪಂಪ್ಸ್‌, ಕೇಬಲ್‌, ಫಿಶರ್, ರೋಟೇಟರ್‌ ಅಳವಡಿಸಿ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಪಾರ್ಕ್‌ ಪ್ರದೇಶ ಸೇರಿದಂತೆ ಇನ್ನಿತರೆ ಶೇ.20 ಸಣ್ಣಪುಟ್ಟ ಕೆಲಸ ಬಾಕಿ ಉಳಿದಿದ್ದು, ಆಗಸ್ಟ್‌ ಅಂತ್ಯದೊಳಗೆ ಇದು ಸಹ ಪೂರ್ಣಗೊಂಡು ಕಾರಂಜಿಯು ಪ್ರದರ್ಶನಕ್ಕೆ ಸಿದ್ಧಗೊಳ್ಳಲಿದೆ. ಆಗ ಕೆಆರ್‌ಎಸ್‌ ಬಿಟ್ಟರೆ ಇಷ್ಟು ದೊಡ್ಡ ಪ್ರಮಾಣದಲ್ಲಿ 3ಡಿ ಆಡಿಯೋ/ವಿಡಿಯೋ, ಲೇಜರ್‌ ಶೋ ಹೊಂದಿದ ಕಾರಂಜಿ ಎಂಬ ಪಾತ್ರಕ್ಕೊಳಗಾಗಲಿದೆ.

ವಿಶೇಷತೆ ಏನು?

ಕೆಆರ್‌ಎಸ್‌ಗಿಂತ ಅಪ್‌ ಗ್ರೇಡೆಡ್‌ ಉಪಕರಣಗಳಾದ ಪಂಪ್ಸ್‌, ಪಿಕ್ಚರ್, 3ಡಿ ಆಡಿಯೋ/ವಿಡಿಯೋ ವಿಜುವಲೈಜೇಶನ್‌ (ದೃಶಿಕರಣ), ಮ್ಯೂಸಿಕಲ್‌ ಫೌಂಟೇನ್‌ (ಸಂಗೀತ ಕಾರಂಜಿ), ವಾಟರ್‌ ಕರ್ಟನ್‌ (ನೀರಿನ ಪರದೆ) ಅಳವಡಿಸಲಾಗಿದೆ. ನೀರಿನ ಪರದೆಯಲ್ಲಿ ನೀರು ಕಾರಂಜಿ ಪೂರ್ಣ ಹರಡಿ ಅದರ ಮೇಲೆ ಲೇಸರ್‌ ಮೂಲಕ ಆಯಾ ಹಾಡಿನ ದೃಶಿಕರಣ ಪ್ರದರ್ಶನಗೊಳ್ಳುತ್ತದೆ. ವಿನೂತನ ತಂತ್ರಜ್ಞಾನದ ಪಂಪ್ಸ್‌ ಗಳೇ ವಿಶೇಷತೆಯಾಗಿದೆ.

Advertisement

ಟೈಲ್ಸ್‌ಗಳಿಂದ ಆವರಣ ಶೃಂಗಾರ

ಮಹಾತ್ಮಾ ಗಾಂಧಿ ಉದ್ಯಾನವನ ಆವರಣದಲ್ಲಿ ಮಣ್ಣು ಹರಡಿದ್ದರಿಂದ ಮಳೆಗಾಲದ ಸಂದರ್ಭದಲ್ಲಿ ಕೆಸರು ಗದ್ದೆ ಆಗಿರುತ್ತಿತ್ತು. ಹೀಗಾಗಿ ಜನರ ಓಡಾಟ ಜಾಗ, ವಾಹನಗಳ ಸಂಚಾರ ಮಾರ್ಗಗಳಿಗೆ ಪ್ರತ್ಯೇಕವಾಗಿ ವಿವಿಧ ಬಗೆಯ ಪೇವರ್ಗಳಿಂದ ಶೃಂಗರಿಸಲಾಗಿದೆ. ಅಂದಾಜು 70 ಲಕ್ಷ ರೂ. ವೆಚ್ಚದಲ್ಲಿ ಪಾಬಲ್‌ ಸ್ಟೋನ್‌, ವೆಟ್ರಿಫೈಯ್ಡ ಟೈಲ್ಸ್‌, ಸಿರಾಮಿಕ್‌ ಟೈಲ್ಸ್‌, ಜನರ ಓಡಾಟ ಜಾಗದಲ್ಲಿ ಕಾಲು ಜಾರದಂತೆ ಎಂಟಿ ಸ್ಕಿಡ್‌ ಟೈಲ್ಸ್‌, ವಾಹನಗಳ ಪಾರ್ಕಿಂಗ್‌ ಹಾಗೂ ಸಂಚಾರದ ಸ್ಥಳಗಳಲ್ಲಿ ಇಂಟರ್‌ ಲಾಕಿಂಗ್‌ ಪೇವರ್, ಪ್ರವೇಶ ದ್ವಾರದಲ್ಲಿ ಸಾದರಹಳ್ಳಿ ಗ್ರೆನೆಟ್ಸ್‌, ಶಾಬಾದಿ ಟೈಲ್ಸ್‌ಗಳನ್ನು ಜೋಡಿಸಲಾಗಿದೆ. ವಾಹನಗಳ ಪಾರ್ಕಿಂಗ್‌ ಜಾಗದಲ್ಲಿ ಶೇ.10 ಮಾತ್ರ ಪೇವರ್ಗಳನ್ನು ಅಳವಡಿಸುವುದು ಬಾಕಿ ಇದೆ.

Advertisement

Udayavani is now on Telegram. Click here to join our channel and stay updated with the latest news.

Next