Advertisement

Soorinje ಗ್ರಾಮ ಪಂಚಾಯತ್ ಗೆ ತ್ಯಾಜ್ಯ ವಿಲೇವಾರಿ ಘಟಕಕ್ಕೆ

02:40 PM Sep 24, 2024 | Team Udayavani |

ಸೂರಿಂಜೆ: ಸೂರಿಂಜೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಸಮರ್ಪಕ ವ್ಯವಸ್ಥೆಯಿಲ್ಲದೆ ಪ್ಲಾಸ್ಟಿಕ್‌, ಮಾಂಸ ತುಂಬಿದ ಚೀಲಗಳು, ಬೇಡದ ವಸ್ತುಗಳು ವಿಲೇವಾರಿ ಮಾಡುವುದೇ ಸಮಸ್ಯೆಯಾಗಿ ಪರಿಣಮಿಸಿದೆ.

Advertisement

ಸ್ವತ್ಛತೆ ಹಾಗೂ ನೈರ್ಮಲ್ಯಕ್ಕೆ ಪ್ರತೀ ಪಂಚಾಯತ್‌ಗೂ 20 ಲಕ್ಷ ರೂ. ಅನುದಾನ ಕಾದಿರಿಸಲಾಗಿದೆ. ಸರಕಾರದ ಮಟ್ಟದಲ್ಲಿ ಪೆರ್ಮುದೆ ಪಂಚಾಯತ್‌ಗೆ ಸಮೀಪದಲ್ಲೇ ಸೂರಿಂಜೆ ಗ್ರಾಮದ ಖಾಲಿ ಸ್ಥಳಾವಕಾಶವಿದ್ದು, ಪಂಚಾಯತ್‌ ಹೆಸರಿನಲ್ಲಿ 44 ಜಾಗ ಸೆಂಟ್ಸ್‌ ಗುರುತಿಸಿ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಮುಂದಾಗುತ್ತಿದ್ದಂತೆ ಸ್ಥಳೀಯ ವ್ಯಕ್ತಿಯೋರ್ವರು ನ್ಯಾಯಾಲಯದಲ್ಲಿ ಮೊಕ್ಕದ್ದಮೆ ಹೂಡಿದ್ದರಿಂದ ಘಟಕ ನಿರ್ಮಾಣ ವಿಳಂಬವಾಗಿದೆ. ಪಂಚಾಯತ್‌ ವತಿಯಿಂದಲೂ ಕೇಸು ತೆರವಿಗೆ ಸತತ ಪ್ರಯತ್ನ ನಡೆದಿದ್ದು, ಬೆಳೆಯುತ್ತಿರುವ ಗ್ರಾಮಕ್ಕೆ ತ್ಯಾಜ್ಯ ವಿಲೇವಾರಿ ಘಟಕದ ಅಗತ್ಯ ಹೆಚ್ಚೇ ಇದೆ ಎನ್ನುತ್ತಾರೆ ಪಂಚಾಯತ್‌ ಸದಸ್ಯ ಅಬ್ದುಲ್‌ ರಝಾಕ್‌.

ಸ್ಥಳಾವಕಾಶದ ಕೊರತೆ
ಇಲ್ಲಿ ಮನೆ ಮನೆ ತ್ಯಾಜ್ಯ ಸಂಗ್ರಹಕ್ಕೆ ಗುತ್ತಿಗೆ ನೀಡಲಾಗಿದೆ. ಆದರೆ ವಿಲೇವಾರಿಗೆ ಸ್ಥಳಾವಕಾಶದ ಕೊರತೆಯಿದೆ. ಕಸ ಹಾಕಲು ತೊಟ್ಟಿಯಿದ್ದರೂ ಕೆಲವು ಬಾರಿ ರಸ್ತೆ ಬದಿ ತ್ಯಾಜ್ಯ ಕಂಡು ಬರುತ್ತದೆ. ಸೂರಿಂಜೆ, ಶಿಬರೂರು, ಕಿನ್ನಿಗೋಳಿ ಸಂಪರ್ಕ ರಸ್ತೆಯ ನಂದಿನಿ ಸೇತುವೆ ಬಳಿ ಬಹುತೇಕ ತ್ಯಾಜ್ಯ ಉಚಿತವಾಗಿ ಬೆಳ್ಳಂಬೆಳಗ್ಗೆ ವಿಲೇವಾರಿಯಾಗುತ್ತದೆ. ಹೆಚ್ಚಿನ ವಸತಿ ಬಡಾವಣೆ, ಅಂಗಡಿ, ಮಾಂಸದ ಅಂಗಡಿಗಳು ಇರುವುದರಿಂದ ನಿತ್ಯ ಕೆ.ಜಿ. ಗಟ್ಟಲೆ ತ್ಯಾಜ್ಯ ಸಂಗ್ರಹವಾಗುತ್ತದೆ. ಪಂಚಾಯತ್‌ನಲ್ಲಿ ಈ ಭಾಗದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಮಾಡಿದಲ್ಲಿ ಪಂಚಾಯತ್‌ ಭಾಗದಲ್ಲಿ ಸ್ವತ್ಛತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next