Advertisement
ಸುಮಾರು 5 ಸೆಂಟ್ಸ್ ಸ್ಥಳವನ್ನು ಉಳುಮೆ ಮಾಡಿ ಜೈವಿಕ ಬೇಲಿ ರಚಿಸಲಾಯಿತು. ಬದನೆ, ಬೆಂಡೆ, ಹೀರೆ, ಸುವರ್ಣ, ಸೋರೆ ಗಿಡಗಳನ್ನು ನೆಡಲಾಯಿತು. ಪೋಷಕರು ಸ್ವಯಂಸೇವಕರಾಗಿ ತೋಟವನ್ನು ನಿರ್ಮಿಸಿದರು.ಕುಂದಾಪುರ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎ. ಸಂಜೀವ ನಾಯ್ಕ ಗಿಡ ನೀಡುವುದರ ಮೂಲಕ ಚಾಲನೆ ನೀಡಲಾಯಿತು.
ಪ್ರಕಾಶ್ ಅಲ್ಸೆ ಬೇಲಿ ಸಾಮಗ್ರಿಗಳನ್ನು, ಶೇಖರ್ ನಾಯ್ಕ ಸೆಟ್ಟೊಳ್ಳಿ ಪೈಪ್ ಲೈನ್ ಕೊಡುಗೆ, ಎಸ್‌ಡಿಎಂಸಿ ಅಧ್ಯಕ್ಷ ಬಾಬಣ್ಣ ಸೂರ್ಗೋಳಿ ಮತ್ತು ಸೂರ್ಯ ನಾಯ್ಕ ಸಾಗಾಟ ವೆಚ್ಚ, ಚಂದ್ರ ಶೇಖರ ನಾಯ್ಕ ಗೊಬ್ಬರವನ್ನು ಕೊಡುಗೆಯಾಗಿ ನೀಡಿದರು. ಪೋಷಕರಾದ ಕೃಷ್ಣ ನಾಯ್ಕ, ಸದಾಶಿವ, ಚಂದ್ರ ನಾಯ್ಕ, ನಾರಾಯಣ ನಾಯ್ಕ, ಸತೀಶ್, ಬಾಬಣ್ಣ ನಾಯ್ಕ, ಕೃಷ್ಣ ನಾಯ್ಕ, ಮೋಹನ್ ನಾಯ್ಕ, ವೆಂಕಟೇಶ್ ನಾಯ್ಕ, ಲಕ್ಷ್ಮಣ ನಾಯ್ಕ, ಸಂಜೀವ ನಾಯ್ಕ, ಪುಟ್ಟಯ್ಯ ನಾಯ್ಕ, ಸುರೇಶ್ ನಾಯ್ಕ ಮತ್ತಿತರರು ಭಾಗಿಯಾದರು.
Related Articles
Advertisement