Advertisement

ರೈತರಿಗಾಗಿ ಶೀಘ್ರ ಕೃಷಿಮೇಳ

12:15 PM Dec 12, 2019 | Team Udayavani |

ಕಲಘಟಗಿ: ಈಚೆಗೆ ಪಟ್ಟಣದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ತಾಲೂಕಿನ ಸುಮಾರು 800 ಜನ ನಿರುದ್ಯೋಗಿ ವಿದ್ಯಾವಂತರು ಉದ್ಯೋಗಕ್ಕೆ ಭಾಜನ ರಾಗಿದ್ದಾರೆ. ಅದೇ ರೀತಿ ತಾಲೂಕಿನ ರೈತರಿಗೆ ಅನುಕೂಲವಾಗಲು ಕೃಷಿಮೇಳ ಹಮ್ಮಿಕೊಳ್ಳಲಾಗುವುದು ಎಂದು ಶಾಸಕ ಸಿ.ಎಂ. ನಿಂಬಣ್ಣವರ ಹೇಳಿದರು.

Advertisement

ಮಿಶ್ರಿಕೋಟಿ ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಸಂಗೀತ ರಸಮಂಜರಿ, ಗುರು ವಂದನೆ, ಪ್ರತಿಭಾ ಪುರಸ್ಕಾರ, ಶಾಲಾ ಮಕ್ಕಳಿಗೆ ಸಾಂಸ್ಕೃತಿಕ ಸಂಜೆ ಹಾಗೂ ದಾನಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಕೃಷಿ ಮೇಳದಿಂದ ಮತಕ್ಷೇತ್ರದ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿಯ ಮೈಲಿಗಲ್ಲನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದು, ವೈಜ್ಞಾನಿಕವಾಗಿ ಒಕ್ಕಲುತನ ಮಾಡುವ ಕುರಿತು ರೈತರಿಗೆ ಸಲಹೆ ಮತ್ತು ಸಹಕಾರ ನೀಡಲಾಗುತ್ತದೆ. ತಾಲೂಕಿನ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನದಿಂದ ಬೊಗೇನಾಗರಕೊಪ್ಪದಿಂದ ಮಿಶ್ರಿಕೋಟಿವರೆಗೆ ಸುಮಾರು 1.10 ಕೋಟಿ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಯನ್ನು ಸದ್ಯದಲ್ಲೇ ಆರಂಭಿಸಲಾಗುತ್ತದೆ ಎಂದು ಹೇಳಿದರು.

ಹನ್ನೆರಡು ಮಠದ ರೇವಣಸಿದ್ದ ಶಿವಾಚಾರ್ಯರು ಮಾತನಾಡಿ, ಗುರು ಎಂಬ ಪದಕ್ಕೆ ಅಮೂಲ್ಯವಾದ ಗೌರವವಿದೆ. ಗುರುವಿನ ಸ್ಥಾನದಲ್ಲಿ ನಿಂತು ಈ ನಾಡಿನ ಹಿಂದೂ ಧರ್ಮದ ಕೀರ್ತಿ ಪತಾಕಿಯನ್ನು ಬೆಳೆಸುವಲ್ಲಿ ವೀರಭದ್ರ ದೇವರ ಪಾತ್ರ ಬಹುಮುಖ್ಯ. ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ವೀರಭದ್ರನ ಕೃಪಾಶೀರ್ವಾದ ಇರಲಿ ಎಂದು ಹೇಳಿದರು.

ಶಂಕ್ರಯ್ಯ ಶಂಕರದೇವರಮಠ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ, ಗ್ರಾಪಂ ಅಧ್ಯಕ್ಷ ಸುರೇಶ ಭೋವಿ, ಜಾತ್ರಾ ಸಮಿತಿ ಅಧ್ಯಕ್ಷ ಐ.ವಿ.ಜವಳಿ, ಉಪಾಧ್ಯಕ್ಷ ಶಿವಾನಂದ ಹುರಕಡ್ಲಿ, ಪ್ರಕಾಶ ತುಕ್ಕಪ್ಪನವರ, ಮಂಜುನಾಥ ವಾವಳ್ಳಿ, ಸುರೇಶ ಮುದೇನವರ, ವೈ.ಬಿ. ದಾಸನಕೊಪ್ಪ, ಶಿವರುದ್ರಪ್ಪ ಗೋಕುಲ, ಶಂಕ್ರಯ್ಯ ಶಂಕರದೇವರಮಠ, ಶಿವಲೀಲಾ ಜವಳಿ, ಮಂಜುಳಾ ಚಲವಾದಿ, ಡಾ| ಮಹೇಶ ತಿಪ್ಪಣ್ಣವರ, ಅಶೋಕ ಗೋಕುಲ್‌, ಬಸವರಾಜ ಖಾನಾಪೂರ, ಈರಪ್ಪ ನಾಯ್ಕರ್‌, ಆನಂದ ಪೂಜಾರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next