Advertisement

Vande Bharat: ಶೀಘ್ರವೇ ವಂದೇ ಭಾರತ್‌ ಸ್ಲೀಪರ್‌, ಮೆಟ್ರೋ ರೈಲು

09:49 PM Sep 16, 2023 | Team Udayavani |

ಹೊಸದಿಲ್ಲಿ: ಮುಂದಿನ ವರ್ಷ ಭಾರತೀಯ ರೈಲ್ವೇಯು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಸ್ಲೀಪರ್‌ ಆವೃತ್ತಿ ಮತ್ತು ವಂದೇ ಮೆಟ್ರೋ ರೈಲುಗಳನ್ನು ಪರಿಚಯಿಸಲಿದೆ. ದೂರದ ಪ್ರಯಾಣಕ್ಕಾಗಿ ಸ್ಲೀಪರ್‌ ಮತ್ತು ಕಡಿಮೆ ಅಂತರದ ಪ್ರಯಾಣಕ್ಕಾಗಿ ವಂದೇ ಮೆಟ್ರೋ ರೈಲುಗಳು ಹಳಿಗೆ ಇಳಿಯಲಿವೆ.

Advertisement

2024ರ ಮಾರ್ಚ್‌ ವೇಳೆಗೆ ಸ್ಲೀಪರ್‌ ಕೋಚ್‌ಗಳು, 2024ರ ಜನವರಿ ವೇಳೆಗೆ ವಂದೇ ಮೆಟ್ರೋ ರೈಲುಗಳು ಕಾರ್ಯಾಚರಿಸಲಿವೆ. ಇವೆರಡನ್ನೂ ಚೆನ್ನೈಯಲ್ಲಿರುವ ಭಾರತೀಯ ರೈಲ್ವೇಯ ಇಂಟೆಗ್ರಲ್‌ ಕೋಚ್‌ ಫ್ಯಾಕ್ಟರಿ (ಐಸಿಎಫ್)ಯಲ್ಲಿ ನಿರ್ಮಿಸಲಾಗುತ್ತಿದೆ.

ತಾಸಿಗೆ 200 ಕಿ.ಮೀ. ವೇಗ
ವಂದೇ ಭಾರತ್‌ ಸ್ಲೀಪರ್‌ ರೈಲುಗಳು ತಾಸಿಗೆ 200 ಕಿ.ಮೀ. ಗರಿಷ್ಠ ವೇಗದಲ್ಲಿ ಚಲಿಸಲಿವೆ. ರಾಜಧಾನಿ ಎಕ್ಸ್‌ಪ್ರೆಸ್‌ ರೈಲುಗಳಿಗೆ ಪರ್ಯಾಯವಾಗಿ ವಂದೇ ಭಾರತ್‌ ಸ್ಲೀಪರ್‌ ರೈಲುಗಳು ಹಾಗೂ ಶತಾಬ್ದಿ ರೈಲುಗಳಿಗೆ ಪರ್ಯಾಯವಾಗಿ ವಂದೇ ಭಾರತ್‌ ಚೇರ್‌ ಕಾರ್‌ ಆವೃತ್ತಿಯ ರೈಲುಗಳು ಸೇವೆ ನೀಡಲಿವೆ.

ಸ್ಲೀ400 ವಂದೇ ಭಾರತ್‌ ಕೋಚ್‌ಗಳ ನಿರ್ಮಾಣಕ್ಕೆ ರೈಲ್ವೇ ಇಲಾಖೆ ಟೆಂಡರ್‌ ಕರೆದಿದೆ. ಈ ಪೈಕಿ 200 ಕೋಚ್‌ಗಳನ್ನು ಉಕ್ಕಿನಿಂದ ನಿರ್ಮಿಸಲು ನಿರ್ಧರಿಸಲಾಗಿದ್ದು, ಇದರಲ್ಲಿ ಶತಾಬ್ದಿ ಎಕ್ಸ್‌ಪ್ರೆಸ್‌ ರೀತಿಯ ಆಸನ ವ್ಯವಸ್ಥೆ ಇರಲಿದೆ. ಉಳಿದ 200 ಸ್ಲಿàಪರ್‌ ಕೋಚ್‌ಗಳನ್ನು ಅಲ್ಯೂಮಿನಿಯಂನಿಂದ ನಿರ್ಮಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಲಾ 12 ಕೋಚ್‌ಗಳು
ವಂದೇ ಭಾರತ್‌ ಸ್ಲೀಪರ್‌ ರೈಲುಗಳ ಕಾರ್ಯಾಚರಣೆಗೂ ಮುನ್ನ ದಿಲ್ಲಿ-ಮುಂಬಯಿ ಮತ್ತು ದಿಲ್ಲಿ-ಕೋಲ್ಕತಾ ಮಾರ್ಗದ ರೈಲು ಹಳಿಗಳನ್ನು ದುರಸ್ತಿಪಡಿಸಲಾಗುವುದು. ಈ ಮಾರ್ಗಗಳಲ್ಲಿ ಸಿಗ್ನಲ್‌ ವ್ಯವಸ್ಥೆ, ಸೇತುವೆಗಳು ಹಾಗೂ ಬೇಲಿ ನಿರ್ಮಾಣ ಮಾಡಲಾಗುವುದು. ಕಡಿಮೆ ದೂರದ ಮಾರ್ಗಗಳಲ್ಲಿ ಸಂಚರಿಸುವ ವಂದೇ ಮೆಟ್ರೊ ರೈಲುಗಳು ತಲಾ 12 ಕೋಚ್‌ಗಳನ್ನು ಹೊಂದಿರಲಿವೆ ಎಂದು ತಿಳಿಸಿದ್ದಾರೆ.

Advertisement

ಈಗಾಗಲೇ ಸಂಚಾರ ನಡೆಸುತ್ತಿರುವ ವಂದೇ ಭಾರತ್‌ ರೈಲುಗಳಿಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಇದರ ವಿವರಗಳು ಹೀಗಿವೆ:
ಚಾಲನೆ – ಫೆಬ್ರವರಿ 15, 2019, ಹೊಸದಿಲ್ಲಿ ರೈಲು ನಿಲ್ದಾಣ
ಮಾರ್ಗ: ಹೊಸದಿಲ್ಲಿ – ವಾರಾಣಸಿ
ಒಟ್ಟು ವಂದೇ ಭಾರತ್‌ ರೈಲುಗಳು: 25

2019: 2 ರೈಲು ಆರಂಭ
2022: 5 ರೈಲು ಸಂಚಾರ
2023: 18 ರೈಲುಗಳ ಸೇವೆ ಆರಂಭ
9: ಇಷ್ಟು ಹೊಸ ವಂದೇ ಭಾರತ್‌ ರೈಲು ಶೀಘ್ರ ಆರಂಭ
24: ಇಷ್ಟು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಂದೇ ಭಾರತ್‌ ರೈಲು ಸಂಚಾರ

ಆದಾಯ, ಪ್ರಯಾಣ ವಿವರ
92 ಕೋ.ರೂ.: 2019ರಲ್ಲಿ ಆರಂಭಿಸಲಾದ ಹೊಸದಿಲ್ಲಿ-ವಾರಾಣಸಿ ಮಾರ್ಗದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನಿಂದ ಇಲಾಖೆಗೆ ಆದಾಯ.
1.17 ಕೋ.ರೂ.: ತಿರುವನಂತಪುರ- ಕಾಸರಗೋಡು ವಂದೇ ಭಾರತ್‌ ರೈಲಿನಿಂದ ಆದಾಯ.
* ಈ ವರ್ಷದ ಆ. 15ರಿಂದ ಸೆ. 8ರ ವರೆಗೆ 1.22 ಲಕ್ಷ ಜನರು ವಂದೇ ಭಾರತ್‌ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸಿದ್ದು, 10.72 ಕೋಟಿ ರೂ. ಆದಾಯವನ್ನು ಇಲಾಖೆ ಗಳಿಸಿದೆ.
* 2022ರ ಎಪ್ರಿಲ್‌- 2023ರ ಫೆಬ್ರವರಿವರೆಗಿನ ಅಂಕಿಅಂಶದ ಪ್ರಕಾರ ವಂದೇ ಭಾರತ್‌ ರೈಲುಗಳಲ್ಲಿ ಶೇ. 99ರಷ್ಟು ಆಸನಗಳು ಭರ್ತಿಯಾಗುತ್ತಿವೆ.

 

Advertisement

Udayavani is now on Telegram. Click here to join our channel and stay updated with the latest news.

Next