Advertisement

ಶೀಘ್ರದಲ್ಲಿ “ಅಂದವಾದ’ತೆರೆಗೆ

09:15 AM Sep 26, 2019 | Team Udayavani |

ಈಗಾಗಲೇ ಪೋಸ್ಟರ್‌, ಸಾಂಗ್‌ ಮತ್ತು ಟೀಸರ್‌ ಮೂಲಕ ಗಮನಸೆಳೆದಿರುವ “ಅಂದವಾದ’ ಇಷ್ಟರಲ್ಲೇ ಪ್ರೇಕ್ಷಕರ ಎದುರು ಬರಲು ಸಜ್ಜಾಗುತ್ತಿದೆ. ಚಿತ್ರದ ಜೈ ಹಾಗೂ ಅನುಷಾ ನಾಯಕ, ನಾಯಕಿಯಾಗಿ ನಟಿಸಿದ್ದು, ಚಿತ್ರವನ್ನು ಚಲಪತಿ ನಿರ್ದೇಶನ ಮಾಡಿದ್ದಾರೆ. ಕಥೆ, ಚಿತ್ರಕಥೆ ಜವಾಬ್ದಾರಿಯನ್ನೂ ವಹಿಸಿಕೊಂಡಿರುವ ಚಲಪತಿ ಅವರಿಗೆ ಸಿನಿಮಾದ ಹಾಡುಗಳಿಗೆ ಹಾಗು ಟೀಸರ್‌ಗೆ ಸಿಕ್ಕ ಪ್ರತಿಕ್ರಿಯೆ ಇನ್ನಷ್ಟು ಭರವಸೆ ಮೂಡಿಸಿದೆ.

Advertisement

ಇದೊಂದು ಲವ್‌ಸ್ಟೋರಿ ಹಿನ್ನೆಲೆಯಲ್ಲಿ ಸಾಗುವ ಚಿತ್ರವಾಗಿದ್ದು, ಮಾನ್ಸೂನ್‌ ಫೀಲ್‌ನಲ್ಲೇ ಇಡೀ ಚಿತ್ರವನ್ನು ಕಟ್ಟಿಕೊಡಲಾಗಿದೆ. ಹಾಗಾಗಿ, ಚಿತ್ರ ಹಾಡು ಮತ್ತು ಟೀಸರ್‌ ಕೂಡ ಮಾನ್ಸೂನ್‌ನಲ್ಲೇ ಹೊರತಂದ ಖುಷಿ ಚಿತ್ರತಂಡದ್ದು. ವಿಕ್ರಮ್‌ ವರ್ಮನ್‌ ಸಂಗೀತದಲ್ಲಿ ಯೋಗರಾಜ್‌ ಭಟ್‌, ಜಯಂತ್‌ ಕಾಯ್ಕಿಣಿ, ಹೃದಯ ಶಿವ ಗೀತೆಗಳನ್ನು ರಚಿಸಿದ್ದಾರೆ. ವಿಜಯ ಪ್ರಕಾಶ್‌, ಸೋನು ನಿಗಮ್‌, ಆಲಾ ಬಿ. ಬಾಲಾ ಸೇರಿದಂತೆ ಇತರೆ ಗಾಯಕರು ಹಾಡಿದ್ದಾರೆ.

ಚಿತ್ರದ ಇನ್ನೊಂದು ವಿಶೇಷವೆಂದರೆ, ಗುರುಕಿರಣ್‌ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಮಧುಶ್ರೀ ಗೋಲ್ಡನ್‌ ಫ್ರೇಮ್ಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಡಿ.ಆರ್‌. ಮಧು ಜಿ. ರಾಜ್‌ ಹಾಗೂ ಹೆಚ್‌.ಸಿ. ಜಯಕುಮಾರ್‌ ಅವರು ನಿರ್ಮಾಪಕರು. ಸಕಲೇಶಪುರ, ಬಿಸಿಲೆ ಘಾಟ್‌, ಚಿಕ್ಕಮಗಳೂರು ಹಾಗು ಅಂಡಮಾನ್‌ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಇಷ್ಟರಲ್ಲೇ ಚಿತ್ರವನ್ನು ಬಿಡುಗಡೆ ಮಾಡಲು ಜೋರು ತಯಾರಿ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next