Advertisement

ಶೀಘ್ರದಲ್ಲೇ ವೈಯಕ್ತಿಕ ಆದಾತ ತೆರಿಗೆ ಕಡಿತಗೊಳ್ಳುತ್ತದೆ : ವಿತ್ತ ಸಚಿವೆ

08:52 AM Dec 08, 2019 | Team Udayavani |

ಹೊಸದಿಲ್ಲಿ: ಸದ್ಯ ದೇಶ ಎದುರಿಸುತ್ತಿರುವ ಆರ್ಥಿಕ ಹಿಂಜರಿತಕ್ಕೆ ಬೇಡಿಕೆ ಕಡಿಮೆಯಾಗಿ ಉತ್ಪಾದನಾ ವಲಯದ ಕುಸಿತವೇ ಕಾರಣ ಎಂದು ಹೇಳಲಾಗುತ್ತಿದೆ. ಜನರು ಹೆಚ್ಚು ಹೆಚ್ಚು ಉತ್ಪನ್ನಗಳನ್ನು ಕೊಂಡುಕೊಂಡರೇ ಮಾತ್ರ ಉತ್ಪಾದನಾ ವಲಯಕ್ಕೆ ಬೇಡಿಕೆ ಬಂದು ಹೆಚ್ಚು ಉತ್ಪನ್ನಗಳು ಮಾರಾಟವಾಗುತ್ತದೆ. ಆದರೆ ಈ ಜನರಿಂದ ನಿರೀಕ್ಷಿತ ಪ್ರಮಾಣದಲ್ಲಿ ಬೇಡಿಕೆ ವ್ಯಕ್ತ ವಾಗದೇ ಇರುವುದರಿಂದ ಬೇಡಿಕೆ ಹೆಚ್ಚಿಸಲು ಸರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

Advertisement

ಆಂಗ್ಲ ಭಾಷಾ ಜಾಲತಾಣವೊಂದರ ಸಮಾವೇಶದಲ್ಲಿ ಭಾಗಿಯಾದ ಸಚಿವರು ವೈಯಕ್ತಿಕ ಆದಾಯ ತೆರಿಗೆ ದರ ಕಡಿತಗೊಳಿಸುವ ಬಗ್ಗೆ ಸುಳಿವು ನೀಡಿದ್ದಾರೆ.ಆದಾಯ ತೆರಿಗೆ ಇಳಿಕೆಯಾಗುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ಮುಂಬರುವ ಬಜೆಟ್‌ ವರೆಗೂ ಕಾಯಬೇಕು ಎಂದಿದ್ದಾರೆ. ಈ ಮೂಲಕ ಪರೋಕ್ಷವಾಗಿ ಮುಂಬರುವ ಬಜೆಟ್‌ನಲ್ಲಿ ಆದಾಯ ತೆರಿಗೆ ಇಳಿಕೆಯಾಗುವ ಸಾಧ್ಯತೆಯ ಸುಳಿವನ್ನು ನೀಡಿದ್ದಾರೆ.

ಈ ವರ್ಷದ ಫೆಬ್ರವರಿಯಲ್ಲಿ ಮುಂಬರುವ 2021ನೇ ಸಾಲಿನ ಕೇಂದ್ರ ಮುಂಗಡ ಪತ್ರ ಮಂಡನೆಯಾಗಲಿದೆ(ಬಜೆಟ್‌). ವೈಯಕ್ತಿಕ ಆದಾಯ ತೆರಿಗೆ ಇಳಿಸಿ, ಜನರನ್ನು ಖರೀದಿಯಲ್ಲಿ ತೊಡಗುವಂತೆ ಮಾಡುವುದು ಹಾಗೂ ಖಾಸಗಿ ಹೂಡಿಕೆಯನ್ನು ಉತ್ತೇಜಿಸುವುದು ಸರಕಾರದ ಮುಂದಿನ ಯೋಜನೆಯಾಗಿದೆ.
ಇಳಿಯುತ್ತಿರುವ ಜಿಡಿಪಿ ಈ ತ್ತೈಮಾಸಿಕದಲ್ಲಿ ಶೇ 4.5ಕ್ಕೆ ಕುಸಿಯುವ ಸಾಧ್ಯತೆ ಇದೆ. ಕಾರ್ಪೊರೇಟ್‌ ತೆರಿಗೆ ಕಡಿತಗೊಳಿಸುವ ನಿಟ್ಟಿನಲ್ಲಿ ಮಸೂದೆಗೆ ತಿದ್ದುಪಡಿಯ ಮೆಲಿನ ಚರ್ಚೆಯ ವೇಳೆ ಲೋಕಸಭೆಯಲ್ಲಿ ಟಿಎಂಸಿಯ ಸೌಗತ ರಾಯ್‌ ಅವರು ಆದಾಯ ತೆರಿಗೆ ಕುರಿತು ಪ್ರಶ್ನೆ ಎತ್ತಿದ್ದರು. ಅದಕ್ಕೆ ಉತ್ತರವಾಗಿ ಸೀತಾರಾಮನ್‌ ಆದಾರ ತೆರಿಗೆ ಕಡಿತದ ಕುರಿತು ಸುಳಿವು ನೀಡಿದ್ದು, ನೆರೆಹೊರೆಯ ರಾಷ್ಟ್ರಗಳ ಆರ್ಥಿಕ ನಿಯಮವನ್ನು ಉದಾಹರಣೆ ನೀಡುವ ಮೂಲಕ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಎರಡನೇ ತ್ತೈಮಾಸಿಕದಲ್ಲಿ ದೇಶದ ಆರ್ಥಿಕ ವೃದ್ಧಿ ದರವು ಕಳೆದ ಆರು ವರ್ಷಗಳಲ್ಲಿ ಕನಿಷ್ಠ ಶೇ.4.5ಕ್ಕೆ ಕುಸಿತಗೊಂಡಿದ್ದು, ಆರ್ಥಿಕತೆ ಉತ್ತೇಜನಕ್ಕಾಗಿ ಸರಕಾರ ಕಳೆದ ನಾಲ್ಕು ತಿಂಗಳಿಂದ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ.

ಈ ಹಿಂದೆ ಸೆಪ್ಟೆಂಬರ್‌ನಲ್ಲಿ, ಕೇಂದ್ರ ಸರಕಾರ ಮಂದಗತಿಯಲ್ಲಿ ಸಾಗುತ್ತಿದ್ದ ಆರ್ಥಿಕ ವಲಯಕ್ಕೆ ಕಾರ್ಪೊರೇಟ್‌ ತೆರಿಗೆಯನ್ನು ಕಡಿತಗೊಳಿಸುವ ಮೂಲಕ ಉತ್ತೇಜನೆ ನೀಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next