Advertisement
ಕಾಪು ತಾಲೂಕು ಘೋಷಣಾ ಸಂಭ್ರಮಾಚರಣೆ ಮತ್ತು ಸಾರ್ವಜನಿಕ ಆಭಿನಂದನ ಸಮಿತಿ ಆಶ್ರಯದಲ್ಲಿ ಮಾ. 25ರಂದು ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಸಭಾಭವನದಲ್ಲಿ ಹಮ್ಮಿ ಕೊಳ್ಳಲಾಗಿದ್ದ ಸಾರ್ವಜನಿಕ ಅಭಿನಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿ ದರು.
ಕಾಪು ತಾಲೂಕಿಗೆ ಹೋರಾಟ ನಡೆಸುವಾಗ ಪ್ರಾರಂಭದಲ್ಲಿ ಕೈ ಜೋಡಿಸಿ ಮತ್ತೆ ಕೈ ಕೊಟ್ಟ ಕೆಲವರು ಬಳಿಕ ತಾಲೂಕು ಆಗುವುದೇ ಇಲ್ಲ ಎಂದು ಹೇಳುತ್ತಾ ಅಪಪ್ರಚಾರ ಮಾಡಿದ್ದರು. ಈಗ ತಾಲೂಕು ಘೋಷಣೆಯಾದ ಬಳಿಕ ಕಾಪು ತಾಲೂಕು ಘೋಷಣೆಗೆ ಮಾತ್ರ ಸೀಮಿತವಾಗಿರದೇ ಶೀಘ್ರ ಅನುಷ್ಠಾನಗೊಳಿಸಲಿ ಎಂದು ಸವಾಲೆಸೆಯುತ್ತಿದ್ದಾರೆ. ತಾಲೂಕೇ ಬೇಡ ಎಂದವರು ಈಗ ಈ ರೀತಿಯ ಮಾತುಗಳನ್ನಾಡುವುದು ಶೋಭೆಯೇ ಎಂದರು. ಸಮಗ್ರ ಅಭಿವೃದ್ಧಿಗೆ ಒತ್ತು ಘೋಷಿತ ಕಾಪು ತಾಲೂಕು ವ್ಯಾಪ್ತಿಯಲ್ಲಿ 1 ಲಕ್ಷ ಸಸಿ ನೆಡುವಿಕೆ, 6,000 ಮನೆ ನಿವೇಶನ ಸಹಿತ ಮನೆ ನಿರ್ಮಾಣ, ಪುರಸಭಾ ವ್ಯಾಪ್ತಿಯಲ್ಲಿ ವಸತಿ ಬಡಾವಣೆ, ಕೆರೆ, ಪಾರ್ಕ್ ಅಭಿವೃದ್ಧಿಗೆ ಒತ್ತು, 9 ಸೇತುವೆಗಳ ನಿರ್ಮಾಣ, ಪ್ರಮುಖ ರಸ್ತೆಗಳನ್ನು ದ್ವಿಪಥ ರಸ್ತೆಗಳನ್ನಾಗಿ ಪರಿವರ್ತಿಸುವುದು, ಹೆಜಮಾಡಿ ಬಂದರು ಅಭಿವೃದ್ಧಿ, ಬೆಳಪುವಿನ ಸೈಯನ್ಸ್ ಸೆಂಟರ್ ಶೀಘ್ರ ಅನುಷ್ಠಾನ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪೂರಕ ಎಲ್ಲ ಸಿದ್ಧತೆ, ಪ್ರಸ್ತಾವನೆಯನ್ನು ಸರಕಾರದ ಮುಂದಿರಿಸಿದ್ದೇನೆ ಎಂದರು.
Related Articles
Advertisement
ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್‌ನ ಸದಸ್ಯ ವೇ| ಮೂ| ಕೇಂಜ ಶ್ರೀಧರ ತಂತ್ರಿ, ಶಿರ್ವ ಸೈಂಟ್ ಮೆರೀಸ್ಚರ್ಚ್ನ ಧರ್ಮಗುರು ರೆ| ಫಾ| ಸ್ಟಾ éನಿತಾವ್ರೋ, ಕಾಪು ಜುಮ್ಮಾ ಮಸೀದಿ ಧರ್ಮಗುರು ಇರ್ಷಾದ್ ಸಆದಿ ಆಶೀರ್ವಚನ ನೀಡಿದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ, ಶಿಕ್ಷಣ ತಜ್ಞ ಕುದಿ ವಸಂತ ಶೆಟ್ಟಿ ಅಭಿನಂದನ ಭಾಷಣ ಮಾಡಿದರು. ಕಾಪು ಪುರಸಭಾಧ್ಯಕ್ಷೆ ಸೌಮ್ಯಾ, ಉಪಾಧ್ಯಕ್ಷ ಕೆ. ಎಚ್. ಉಸ್ಮಾನ್, ಕಾಪು ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ, ಉಡುಪಿ ಸಾಯಿರಾಧಾ ಗ್ರೂಪ್ಸ್‌ನ ಅಧ್ಯಕ್ಷ ಮನೋಹರ ಶೆಟ್ಟಿ, ಜೆಡಿಎಸ್‌ನ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಕಾಪು ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕೇ¤ಸರ ಮೋಹನ್ ಎಂ. ಬಂಗೇರ, ಗಣ್ಯರಾದ ಸುಧೀರ್ ಹೆಗ್ಡೆ, ಮಾಧವ ಆರ್. ಪಾಲನ್, ಶೇಖರ ಆಚಾರ್ಯ, ನಜೀರ್ ಅಹ್ಮದ್, ಅಶೋಕ್ ಎಂ. ಸುವರ್ಣ, ಮೈರ್ಮಾಡಿ ಸುಧಾಕರ ಶೆಟ್ಟಿ, ವಿಲ್ಸನ್ ರೊಡ್ರಿಗಸ್, ಪ್ರಭಾಕರ ಪೂಜಾರಿ, ನಿತ್ಯಾನಂದ ಶೆಟ್ಟಿ, ಅಮೃತ್ ಶೆಣೈ, ಉದಯ ಶೆಟ್ಟಿ ಮುನಿಯಾಲು, ಗೀತಾ ವಾಗ್ಲೆ ಉಪಸ್ಥಿತರಿದ್ದರು. ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ ಸ್ವಾಗತಿಸಿದರು. ದ.ಕ. ಜಿಲ್ಲಾ ಕೇಂದ್ರ ಸಹಕಾರಿ
ಬ್ಯಾಂಕ್ ನಿರ್ದೇಶಕ ಡಾ| ದೇವಿಪ್ರಸಾದ್ ಶೆಟ್ಟಿ ಪ್ರಸ್ತಾವನೆಗೈದರು. ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ ವಂದಿಸಿದರು. ಟಿ.ವಿ. ನಿರೂಪಕ ನವೀನ್ ಶೆಟ್ಟಿ ಎಡೆ¾àರು ಕಾರ್ಯಕ್ರಮ ನಿರೂಪಿಸಿದರು.