Advertisement
ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಸುಧಾರಿತ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ, ಜಗತ್ತಿನ ಅತಿವೇಗದ ಕಾರ್ಯಾಚರಣೆ ವ್ಯವಸ್ಥೆ ಹೊಂದಿದೆ. ಕ್ಷಿಪಣಿ ವ್ಯವಸ್ಥೆಯ ವ್ಯಾಪ್ತಿಯನ್ನು ಡಿಆರ್‌ಡಿಒ ಇತ್ತೀಚೆಗಷ್ಟೇ 298 ಕಿ.ಮೀ.ನಿಂದ 450 ಕಿ.ಮೀ.ಗೆ ವಿಸ್ತರಿಸಿತ್ತು. ನವೆಂಬರ್ ಕೊನೆಯ ವಾರದಲ್ಲಿ ಹಿಂದೂ ಮಹಾಸಾಗರ ಸಮುದ್ರ ವ್ಯಾಪ್ತಿಯ ವಿವಿಧ ಗುರಿಗಳನ್ನು ಉಡಾಯಿಸುವ ಮೂಲಕ ಪರೀಕ್ಷೆಗಳು ನಡೆಯಲಿವೆ. ಕಳೆದ 2 ತಿಂಗಳಿನಲ್ಲಿ ಡಿಆರ್‌ಡಿಒ ಶೌರ್ಯ ಕ್ಷಿಪಣಿ ಸೇರಿದಂತೆ, ಹೊಸ ಮತ್ತು ಅಸ್ತಿತ್ವದಲ್ಲಿರುವ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. “ಪ್ರಸ್ತುತ ಬ್ರಹ್ಮೋಸ್ ಪರೀಕ್ಷೆಯು ಕ್ಷಿಪಣಿ ವ್ಯವಸ್ಥೆಯಲ್ಲಿ ಭದ್ರತಾ ಸೇವೆಗಳ ಗುಣಮಟ್ಟ ಸುಧಾರಿಸಲು ನೆರವಾಗಲಿವೆ’ ಎಂದು ಸರ್ಕಾರಿ ಮೂಲಗಳು “ಎಎನ್‌ಐ’ಗೆ ತಿಳಿಸಿವೆ. Advertisement
ಶೀಘ್ರವೇ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಉಡಾವಣೆ
11:37 PM Nov 15, 2020 | mahesh |