Advertisement

ಪಾಕ್‌ನಲ್ಲಿ ಶೀಘ್ರ ಸಂಸತ್‌ ಚುನಾವಣೆ

09:41 PM Aug 04, 2023 | Team Udayavani |

ಇಸ್ಲಾಮಾಬಾದ್‌: ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ಪಾಕಿಸ್ತಾನದಲ್ಲಿ ಶೀಘ್ರವೇ ಸಂಸತ್‌ ಚುನಾವಣೆ ನಡೆಯಲಿದೆ. ಅಲ್ಲಿನ ಸಂಸತ್‌ ನ್ಯಾಷನಲ್‌ ಅಸೆಂಬ್ಲಿಯ ಐದು ವರ್ಷದ ಅವಧಿ ಆ.12ಕ್ಕೆ ಮುಕ್ತಾಯವಾಗಲಿದೆ. ಆದರೆ, ಆ.9ರಂದೇ ಪ್ರಧಾನಿ ಶೆಹಬಾಜ್‌ ಷರೀಫ್ ಸಂಸತ್‌ ವಿಸರ್ಜಿಸುವ ನಿರ್ಣಯ ಕೈಗೊಳ್ಳುವ ಸಾಧ್ಯತೆಗಳಿವೆ.

Advertisement

ಈ ಬಗ್ಗೆ ಅವರೇ ಗುರುವಾರ ನಡೆದ ವಿದಾಯ ಔತಣಕೂಟದಲ್ಲಿ ತಿಳಿಸಿದ್ದಾರೆ. ಪ್ರಧಾನಿ ನೇತೃತ್ವದಲ್ಲಿ ಸಂಪುಟ ವಿಸರ್ಜನೆಯ ನಿರ್ಣಯ ಕೈಗೊಂಡ ಬಳಿಕ ಅದನ್ನು ಅಧ್ಯಕ್ಷ ರಶೀದ್‌ ಅಳ್ವಿ ಅವರಿಗೆ ಕಳುಹಿಸಿ ಕೊಡಲಿದ್ದಾರೆ. ಅವರ ಅನುಮೋದನೆ ಬಳಿಕ 60 ದಿನಗಳ ಒಳಗಾಗಿ ಚುನಾವಣಾ ಆಯೋಗ ಚುನಾವಣೆ ನಡೆಸಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next