Advertisement
ಯಾರು ಮುದ್ರಿಸುತ್ತಾರೆ ?ಈ ಒಂದು ರೂ. ಮುಖ ಬೆಲೆಯ ನೋಟುಗಳನ್ನು ಮುದ್ರಿಸುವುದು ಆರ್‌ಬಿಐಯ ಜವಾಬ್ದಾರಿ ಅಲ್ಲ. ಕೇಂದ್ರ ಸರಕಾರದ ವಿತ್ತ ಸಚಿವಾಲಯ ಈ ನೋಟುಗಳನ್ನು ಮುದ್ರಿಸುತ್ತದೆ. ಆರ್‌ಬಿಐ 1 ರೂ. ಮುಖ ಬೆಲೆಯ ನೋಟುಗಳನ್ನು ಹೊರತುಪಡಿಸಿ ಉಳಿದೆಲ್ಲ ನೋಟುಗಳನ್ನು ಮುದ್ರಿಸುತ್ತದೆ. ಈ ಕಾರಣಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಂದು ಬರೆದಿರುತ್ತದೆ.
ನೂತನ 1 ರೂ. ಕರೆನ್ಸಿಯ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಬದಲು ಗವರ್ನ್ಮೆಂಟ್ ಆಫ್ ಇಂಡಿಯಾ ಎಂದು ಬರೆದಿರಲಿದೆ. ಅದರ ಮೇಲೆ ಹಿಂದಿಯಲ್ಲಿ ಭಾರತ ಸರಕಾರ ಎಂದು ಮುದ್ರಣವಾಗಿರಲಿದೆ. ವೈಶಿಷ್ಟéಷತೆ
– ಹೊಸ ನೋಟಿನಲ್ಲಿ ಆರ್‌ಬಿಐ ಗವರ್ನರ ಸಹಿ ಬದಲು ಕೇಂದ್ರ ಸರಕಾರದ ಹಣಕಾಸು ಸಚಿವಾಲಯದ ಕಾರ್ಯದರ್ಶಿ ಅಟಾನು ಚಕ್ರಬೋರ್ತಿ ಅವರ ಸಹಿ ಇರಲಿದೆ.
– ಇದರಲ್ಲಿ ಒಂದು ರೂ. ನಾಣ್ಯವನ್ನು ಹೋಲುವ ಚಿತ್ರವನ್ನು ಮುದ್ರಿಸಲಾಗಿದೆ. ಮಾತ್ರವಲ್ಲದೆ ಅದರಲ್ಲಿ ಸತ್ಯಮೇವ ಜಯತೆ ಎಂಬ ವಾಕ್ಯವನ್ನು ಸೇರಿಸಲಾಗಿದೆ.
– ಈ ಹಿಂದಿನ ನೋಟಿನಲ್ಲಿ ಇದ್ದ ಹಾಗೆ ಬೆಳೆಗಳ ಚಿತ್ರವನ್ನು ಮುದ್ರಿಸಲಾಗಿದೆ. ಈ ದೇಶದಲ್ಲಿ ಕೃಷಿಯ ಮಹತ್ವವನ್ನು ವಿವರಿಸುತ್ತದೆ. ನೋಟಿನ ಇನ್ನೊಂದು ಬದಿಯ ಸುತ್ತಮುತ್ತಲಿನ ವಿನ್ಯಾಸವು “ಸಾಗರ್ ಸಾಮ್ರಾಟ್’ ತೈಲ ಪರಿಶೋಧನ ವೇದಿಕೆಯ ಚಿತ್ರವನ್ನು ಒಳಗೊಂಡಿರುತ್ತದೆ.
– ಈ ಪುಟ್ಟ ನೋಟಿನಲ್ಲಿ ಹಲವು ವಾಟರ್ ಮಾರ್ಕ್‌ಗಳಿರಲಿವೆ. ಅಶೋಕ ಸ್ತಂಭವೂ ಇರಲಿದೆ. ಇನ್ನು ವಾಟರ್ ಮಾರ್ಕ್ ರೂಪದಲ್ಲಿ “1 ರೂ.’ ಎಂದು ಬರೆಯಲಾಗಿದೆ. ಜತೆಗೆ “ಭಾರತ್’ ಎಂದು ಬಲ ಬದಿಯಲ್ಲಿ ಲಂಬವಾಗಿ ಬರೆಯಲಾಗಿದೆ.
Related Articles
ಹೊಸ ನೋಟು 9.7ಗಿ6.3 ಸೆಂ.ಮೀ. ನ ಆಯತಾಕಾರದಲ್ಲಿರಲಿದೆ. “ಪಿಂಕ್ ಗ್ರೀನ್’ ಬಣ್ಣವನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಇದು ಶೇ. 100ರಷ್ಟು ಹತ್ತಿ ಉಪಯೋಗಿಸಿ ಈ ನೋಟನ್ನು ಮುದ್ರಿಸಲಾಗಿದೆ. ಮಾತ್ರವಲ್ಲದೆ 110 ಮೈಕ್ರೊನ್ ತೆಳುವಾಗಿದ್ದು, 90 ಜಿ.ಎಸ್.ಎಂ. ಹೊಂದಿದೆ.
Advertisement