Advertisement

ಸಂತ್ರಸ್ತರಿಗೆ ಶೀಘ್ರ ಪೂರ್ಣ ಪರಿಹಾರ

02:34 PM Jan 26, 2020 | Suhan S |

ಚಿಕ್ಕೋಡಿ: ನೆರೆ ಸಂದರ್ಭದಲ್ಲಾದ ಹಾನಿ ಪರಿಹಾರವನ್ನು ರಾಜ್ಯ ಸರ್ಕಾರ ಈಗಾಗಲೇ ಒದಗಿಸಿದೆ. ಇನ್ನೂ ಕೆಲ ಹಂತಗಳಲ್ಲಿ ಪೂರ್ಣ ಪ್ರಮಾಣದ ಪರಿಹಾರ ಸಿಗಲಿದೆ. ಕೆಲವೆಡೆ ಉಂಟಾದ ತಾಂತ್ರಿಕ ತೊಂದರೆ ನಿವಾರಿಸಿ ಕೂಡಲೇ ಮತ್ತಷ್ಟು ವೇಗವಾಗಿ ಸರ್ಕಾರ ಪರಿಹಾರ ಕಾರ್ಯ ನಡೆಸಲಿದೆ ಎಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ನೆರೆ ಸಂತ್ರಸ್ತರಿಗೆ ಅಭಯ ನೀಡಿದರು.

Advertisement

ತಾಲೂಕಿನ ಯಡೂರ ವೀರಭದ್ರೇಶ್ವರ ವಿಶಾಳಿ ಜಾತ್ರೆ ಅಂಗವಾಗಿ ಶನಿವಾರ ಹಮ್ಮಿಕೊಂಡ ನೆರೆ ಸಂತ್ರಸ್ತರ ಗೃಹ ನಿರ್ಮಾಣ ಕಾಮಗಾರಿಗೆ ಚಾಲನೆ, ಗೋಕೈಲಾಸ ಉದ್ಘಾಟನೆ, ನೂತನ ಯಾತ್ರಿ ನಿವಾಸ ಅಡಿಗಲ್ಲು ಹಾಗೂ ವಿಶ್ವಚೇತನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ರಾಜ್ಯದೆಲ್ಲೆಡೆ ನಿರಂತರ ಪ್ರವಾಸ ಮಾಡಿ, ರೈತರು, ಸಂತ್ರಸ್ತರು ಹಾಗೂ ಬಡವರ ಸಮಸ್ಯೆ ಪರಿಹರಿಸಿದ್ದಾರೆ. ಪರಿಹಾರ ಒದಗಿಸಲು ಸರ್ಕಾರವನ್ನೇ ಅರ್ಹರ ಮನೆ ಬಾಗಿಲಿಗೆ ತಂದು ನಡೆದಾಡುವ ಸರ್ಕಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಧಾರ್ಮಿಕ ಆಚರಣೆ ಜತೆಗೆ ಸಾಂಸ್ಕೃತಿಕ ಆಚಾರ-ವಿಚಾರಗಳನ್ನು ಅನೇಕ ದಶಕಗಳಿಂದಲೂ ಪಸರಿಸುತ್ತಲೇ ಬಂದಿದ್ದಾರೆ. ಈ ಯಡೂರು ಮಠದ ಕಾರ್ಯ ಇತರ ಎಲ್ಲ ಮಠಮಾನ್ಯಗಳಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀಶೈಲ-ಯಡೂರ ಜಗದ್ಗುರು ಡಾ| ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ವಿಆರ್‌ಎಲ್‌ ಸಮೂಹ ಸಂಸ್ಥೆಯ ಚೇರಮನ್‌ ವಿಜಯ ಸಂಕೇಶ್ವರ ದಂಪತಿಗೆ ಪ್ರಸಕ್ತ ಸಾಲಿನ ವಿಶ್ವಚೇತನ ಪ್ರಶಸ್ತಿ ನೀಡಿದರು. ರಾಜ್ಯಸಭೆ ಸದಸ್ಯ ಡಾ| ಪ್ರಭಾಕರ ಕೋರೆ, ಸಂಸದ ಅಣ್ಣಾಸಾಹೇಬ ಜೊಲ್ಲೆ, ವಿಧಾನ ಪರಿಷತ್‌ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next