Advertisement
ಅನರ್ಹತೆಗೊಂಡಿರುವ ಶಾಸಕರಿಗೆ ಟಿಕೆಟ್ ಹಂಚಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಈ ಹಿಂದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆ ಶಾಸಕರೊಂದಿಗೆ ಮಾತನಾಡಿದ ರೀತಿಯಲ್ಲೇ ಟಿಕೆಟ್ ಹಂಚಿಕೆ ಪ್ರಕ್ರಿಯೆ ನಡೆಯಲಿದೆ. ಈ ಬಗ್ಗೆ ಗೊಂದಲಗಳು ಇಲ್ಲ ಎಂದು ಸ್ಪಷ್ಟಪಡಿಸಿದರು.
Related Articles
Advertisement
ಕಾಶ್ಮೀರ ವಿಚಾರದಲ್ಲಿ ನೆಹರು ದೇಶಕ್ಕೆ ವಿಷ ಉಣಿಸಿದರುಬೆಂಗಳೂರು: ಕಾಶ್ಮೀರ ವಿಚಾರದಲ್ಲಿ ನೆಹರು ಅವರು ದೇಶದ ಜನರಿಗೆ ಹಾಲುಣಿಸುವ ಬದಲು ವಿಷ ಉಣಿಸಿದರು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ಅಭಿಪ್ರಾಯ ಪಟ್ಟಿದ್ದಾರೆ. ಬಿಜೆಪಿಯ ಬೆಂಗಳೂರು ನಗರ ಜಿಲ್ಲಾ ಘಟಕದಿಂದ ಶನಿವಾರ ನಡೆದ “370ನೇ ವಿಧಿ ರದ್ದತಿ ಕುರಿತ “ಜನ ಜಾಗರಣ್’ ಸಭೆಯಲ್ಲಿ ಮಾತನಾಡಿ, ಈ ವಿಧಿ ದೇಶದ ಏಕತೆಗೆ ಧಕ್ಕೆ ತರುವಂತಹ ವಿಧಿಯಾಗಿತ್ತು ಎಂದರು. ಶೇಖ್ ಅಬ್ದುಲ್ಲಾ ನೇತೃತ್ವದ ಮುಸ್ಲಿಂ ಕಾನ್ಫರೆನ್ಸ್ ನೀಡುತ್ತಿದ್ದ ತೊಂದರೆಗಳನ್ನು ಸಹಿಸಿಕೊಳ್ಳದೆ ಅಂದಿನ ಕಾಶ್ಮೀರ ರಾಜ ರಾಜಾಹರಿಸಿಂಗ್ ಕಾಶ್ಮೀರವನ್ನು ಭಾರತದ ಆಡಳಿತ ವ್ಯವಸ್ಥೆಯಲ್ಲಿ ವಿಲೀನಗೊಳಿಸಲು ಮುಂದಾದರೂ ಶೇಖ್ ಅಬ್ದುಲ್ಲಾ ಇದಕ್ಕೆ ಅವಕಾಶ ನೀಡಿಲ್ಲ. ಶೇಖ್ ಅಬ್ದುಲ್ಲಾಗೆ ನೆಹರು ಬೆಂಬಲವಾಗಿ ನಿಂತಿದ್ದೇ ಇಷ್ಟಕ್ಕೆಲ್ಲಾ ಕಾರಣ ಎಂದು ಟೀಕಿಸಿದರು. ಜನ ಸಂಘದ ಸಂಸ್ಥಾಪಕ ಶ್ಯಾಮ್ ಪ್ರಕಾಶ್ ಮುಖರ್ಜಿ ಅವರು ಕಾಶ್ಮೀರಕ್ಕೆ ನೀಡ ಲಾಗಿದ್ದ ಪ್ರತ್ಯೇಕ ಧ್ವಜ, ಪ್ರತ್ಯೇಕ ಸಂವಿಧಾನ ವಿರುದ್ಧ ಹೋರಾಟ ನಡೆಸಿದ್ದರು. ಆದರೆ ನಂತರ ದಿನಗಳಲ್ಲಿ ಅನು ಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು. ಅವರ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಅಂದಿನ ಪ್ರಧಾನಿ ನೆಹರು ಅವರನ್ನು ಒತ್ತಾಯಿಸಿದರೂ, ಪ್ರಯೋಜನವಾಗಲಿಲ್ಲ ಎಂದರು. ಕಾಶ್ಮೀರದ ಬಗ್ಗೆ ಅಪಪ್ರಚಾರ: 370ನೇ ವಿಧಿ ರದ್ಧತಿಯ ನಂತರ ಕಾಶ್ಮೀರ ಇದೀಗ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಈ ಬಗ್ಗೆ ಅಪ ಪ್ರಚಾರ ಮಾಡುತ್ತಿವೆ. ದೇಶ ದೋಹಿಗಳನ್ನು ಮಾತ್ರ ಬಂಧನ ದಲ್ಲಿ ಡಲಾಗಿದ್ದು, ಝಡ್ ಪ್ಲಸ್ ಶ್ರೇಣಿ ಭದ್ರತೆ ಯನ್ನು ಹಿಂಪಡೆಯಲಾಗಿದೆ. ಕಾಶ್ಮೀರ ವಿಚಾರದಲ್ಲಿ ಪಾಕಿ ಸ್ತಾನಕ್ಕೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖ ಭಂಗ ವಾ ಗಿದೆ ಎಂದರು. ಕಾಶ್ಮೀರಿ ಪಂಡಿತರು ಈ ಹಿಂದೆ ಸಾಕಷ್ಟು ನೋವು ಅನುಭವಿಸಿದ್ದಾರೆ. ಹೀಗಾಗಿ ಅವರು ಮನೆ ಬಿಟ್ಟು ಹೊರಬಂದಿದ್ದಾರೆ.ಅಂಥಹವರು ಮತ್ತೆ ತಮ್ಮ ಮನೆ ಸೇರಲಿ ದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತ ಒಂದು ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂದರು. ಪಿಒಕೆ ಭಾರತದ ತೆಕ್ಕೆಗೆ ತೆಗೆದುಕೊಳ್ಳುವ ದಿನ ದೂರವಿಲ್ಲ: ಭಯೋತ್ಪಾದನೆ ಮುಕ್ತ ಭಾರತಕ್ಕಾಗಿ ಕೇಂದ್ರ ಸರ್ಕಾರ ಪಣತೊಟ್ಟಿದೆ. ಈಗಾಗಲೇ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ವನ್ನು ರದ್ದು ಮಾಡಿದೆ. ಹೀಗಾಗಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ದಿನ ಬಹಳ ದೂರವಿಲ್ಲ ಎಂದು ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಅಂಬೇಡ್ಕರ್ ವಿರೋಧಿಸಿದ್ದರು: ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡುವ ಕುರಿತಂತೆ ನೆಹರು ನಿರ್ಧಾರವನ್ನು ಅಂದಿನ ಕಾನೂನು ಸಚಿವರಾಗಿದ್ದ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಗೃಹ ಸಚಿವ ಸರ್ದಾರ್ ವಲ್ಲಬಾಯಿ ಪಟೇಲ್ ವಿರೋಧಿಸಿದ್ದರು. ಆದರೂ, ನೆಹರು ಅವರು ಜಾರಿ ಮಾಡಲು ತಿಳಿಸಿದ್ದರು.