ಬರೇಲಿ:ಗೋವುಗಳ ಸೆಗಣಿ ಬಳಕೆ ಮಾಡಿ ಸಿಎನ್‌ಜಿ ಉತ್ಪಾದಿಸುವ ಘಟಕ ಶೀಘ್ರವೇ ಶುರುವಾಗಲಿದೆ ಎಂದು ಉತ್ತರ ಪ್ರದೇಶದ ಸಚಿವ ಧರ್ಮಪಾಲ್ ಸಿಂಗ್ ಹೇಳಿದ್ದಾರೆ.
ಅದಕ್ಕಾಗಿ ಪ್ರತಿ ಕೆಜಿ ಸೆಗಣಿಗೆ 150 ರೂ. ನೀಡಿ ಖರೀದಿಸುವ ಯೋಜನೆಯೂ ಇದೆ ಎಂದು ಅವರು ಹೇಳಿದ್ದಾರೆ.
ಬರೇಲಿಯಲ್ಲಿ ಸೋಮವಾರ ಮಾತನಾಡಿದ ಅವರು, ಈ ಯೋಜನೆಯ ಜಿಲ್ಲೆಯಲ್ಲಿಯೇ ಶುರುವಾಗಲಿದೆ ಎಂದಿದ್ದಾರೆ.
ಜಿಲ್ಲೆಯಲ್ಲಿ ಹಾಗೂ ಉತ್ತರ ಪ್ರದೇಶದ ವಿವಿಧ ಸ್ಥಳಗಳಲ್ಲಿ ಸಮಸ್ಯೆ ಯಾಗಿ ಕಾಡುತ್ತಿರುವ ಬೀಡಾಡಿ ದನಗಳ ಸಮಸ್ಯೆಗೂ ಇದ ರಿಂದ ಮುಕ್ತಿ ಸಿಗಲಿದೆ ಎಂದು ಅವರು ಹೇಳಿಕೊಂಡಿ ದ್ದಾರೆ.
ಅವುಗಳನ್ನು ಗೋ ಶಾಲೆಗಳಿಗೆ ಸಾಗಿಸುವುದ ರಿಂದ ರೈತರ ಜಮೀನುಗಳಿಗೆ ಪ್ರವೇಶ ಮಾಡುವ ಸಮಸ್ಯೆಯೂ ದೂರವಾಗಲಿದೆ ಎಂದು ಹೇಳಿದ್ದಾರೆ.
ಈ ನಿಟ್ಟಿನಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಗೋ ಶಾಲೆ, ಗೋ ಅಭಯಾರಣ್ಯಗಳ ನಿರ್ಮಾಣ ಬಿರುಸಿನಿಂದ ಸಾಗಿದೆ ಎಂದು ಹೇಳಿದ್ದಾರೆ.