Advertisement

ಕಂಪೆನಿಗಳಿಂದಲೇ ನಂಬರ್‌ ಪ್ಲೇಟ್‌ 

07:12 AM Apr 02, 2018 | |

ಹೊಸದಿಲ್ಲಿ: ದೇಶಾದ್ಯಂತ ಕಾರುಗಳ ನಂಬರ್‌ ಪ್ಲೇಟ್‌ಗಳು ಏಕರೂಪವಾಗಿರಬೇಕು ಎಂಬ ದೃಷ್ಟಿ ಯಿಂದ ಕೇಂದ್ರ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಕಾರು ಉತ್ಪಾದಕ ಕಂಪೆನಿಗಳೇ ನಂಬರ್‌ ಪ್ಲೇಟ್‌ಗಳನ್ನೂ ಕಾರುಗಳಿಗೆ ಅಳವಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿವೆ.

Advertisement

ಪ್ರಸ್ತುತ ವಾಹನ ಡೀಲರ್‌ಗಳು ನಂಬರ್‌ ಪ್ಲೇಟ್‌ಗಳನ್ನು ಅಳವಡಿಸಿ, ನೋಂದಣಿ ಸಂಖ್ಯೆಯನ್ನು ಬರೆಯುತ್ತವೆ. ಆದರೆ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ನಂಬರ್‌ ಪ್ಲೇಟ್‌ ಇರುತ್ತವೆ.  ಏಕರೂಪತೆ ಕಾಯ್ದುಕೊಳ್ಳಲು ಈ ನಿರ್ಧಾರ ಮಾಡಲಾಗಿದೆ. ಇದರಿಂದಾಗಿ ನಂಬರ್‌ ಪ್ಲೇಟ್‌ನ ವೆಚ್ಚವನ್ನು ಉತ್ಪಾದಕ ಸಂಸ್ಥೆ ಭರಿಸಬೇಕಾಗುತ್ತದೆ. ಸುಧಾರಿತ ರೂಪದ ತಂತ್ರಜ್ಞಾನದ ನಂಬರ್‌ ಪ್ಲೇಟ್‌ಗಳನ್ನು ಸಾರಿಗೆ ಸಚಿವಾಲಯ ಪರಿಚಯಿಸಲು ನಿರ್ಧರಿಸಿದೆ ಎಂದು ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. ಪ್ರಸ್ತುತ ನಂಬರ್‌ ಪ್ಲೇಟ್‌ಗಳಿಗೆ 800 ರೂ. ನಿಂದ 40 ಸಾವಿರ ರೂ.ವರೆಗೆ ವೆಚ್ಚ ತಗಲುತ್ತದೆ. ಈಗಿನಂತೆಯೇ ನೋಂದಣಿ ವೇಳೆ ನಂಬರ್‌ ನೀಡುವ ಪ್ರಕ್ರಿಯೆ ಮುಂದುವರಿಯಲಿದೆ. ನಂತರ ಪ್ಲೇಟ್‌ಗಳ ಮೇಲೆ ಮುದ್ರಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next