Advertisement

ಜೆಎನ್‌ಯುನಲ್ಲಿ “ಇಸ್ಲಾಂ ಉಗ್ರವಾದ’ಅಧ್ಯಯನ

06:00 AM May 20, 2018 | |

ಹೊಸದಿಲ್ಲಿ: ಪ್ರತಿಷ್ಠಿತ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ ಸದ್ಯದಲ್ಲೇ ರಾಷ್ಟ್ರೀಯ ಭದ್ರತಾ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲಾಗುತ್ತಿದ್ದು, ಇದರಡಿ “ಇಸ್ಲಾಂ ಉಗ್ರವಾದ’ದವನ್ನು ಅಧ್ಯಯನ ವಿಷಯವಾಗಿ ಸೇರ್ಪಡೆಗೊಳಿಸಲಾಗುತ್ತದೆ. ಇತೀಚೆಗೆ ನಡೆದ ವಿಶ್ವವಿದ್ಯಾಲಯದ ಶೈಕ್ಷಣಿಕ ಕೌನ್ಸಿಲ್‌ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಹೇಳಲಾಗಿದೆ. ಈ ಅಧ್ಯಯನ ಕೇಂದ್ರವನ್ನು ವಿವಿ ಪ್ರಮುಖ ಅಧ್ಯಯನ ಪೀಠಗಳಲ್ಲಿ ಒಂದಾಗಿಸಲು ಕೌನ್ಸಿಲ್‌ ಸಮ್ಮತಿಸಿದ್ದರೂ, ಸ್ವತಂತ್ರ ಅಧ್ಯಯನ ಕೇಂದ್ರವೆಂದು ಪರಿಗಣಿಸಬೇಕೇ ಎಂಬುದಿನ್ನೂ ಸ್ಪಷ್ಟವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next