Advertisement

ಎಲ್ಲ ರಾಜ್ಯಗಳಲ್ಲೂ ಶೀಘ್ರ ನವಜಾತ ಶಿಶುಗಳಿಗೆ ಆಧಾರ್‌

08:55 PM Oct 15, 2022 | Team Udayavani |

ನವದೆಹಲಿ: ಮುಂದಿನ ಕೆಲವು ತಿಂಗಳಲ್ಲಿ ನವಜಾತು ಶಿಶುಗಳಿಗೆ ಜನನ ಪ್ರಮಾಣ ಪತ್ರದ ಜತೆಗೆ ಆಧಾರ್‌ ನೋಂದಣಿ ವ್ಯವಸ್ಥೆಯು ಎಲ್ಲ ರಾಜ್ಯಗಳಲ್ಲಿ ಆರಂಭವಾಗಲಿದೆ.

Advertisement

ಪ್ರಸ್ತುತ ಆಧಾರ್‌ ಜೋಡಣೆಯೊಂದಿಗೆ ಜನನ ಪ್ರಮಾಣ ಪತ್ರ ನೀಡುವ ವ್ಯವಸ್ಥೆಯು ದೇಶದ 16 ರಾಜ್ಯಗಳಲ್ಲಿ ಲಭ್ಯವಿದೆ. ಇದನ್ನು ಶೀಘ್ರ ಇತರೆ ರಾಜ್ಯಗಳಿಗೂ ವಿಸ್ತರಿಸಲಾಗುತ್ತಿದೆ.

5 ವರ್ಷಗಳವರೆಗಿನ ಮಕ್ಕಳ ಬಯೋಮೆಟ್ರಿಕ್ಸ್‌ ಗುರುತುಗಳನ್ನು ತೆಗೆದುಕೊಳ್ಳಲಾಗುವುದಿಲ್ಲ. ಮಗುವಿನ ಯುಐಡಿಯನ್ನು ಜನಸಂಖ್ಯಾ ಮಾಹಿತಿ ಮತ್ತು ಅವರ ಪೋಷಕರ ಯುಐಡಿಯೊಂದಿಗೆ ಲಿಂಕ್‌ ಮಾಡಲಾದ ಮುಖದ ಛಾಯಾಚಿತ್ರದ ಆಧಾರದ ಮೇಲೆ ಪ್ರಕ್ರಿಯೆ ನಡೆಸಲಾಗುತ್ತದೆ. ಮಗುವಿಗೆ 5 ಮತ್ತು 15 ವರ್ಷ ತುಂಬಿದ ಸಂದರ್ಭದಲ್ಲಿ ಬಯೋಮೆಟ್ರಿಕ್‌ ಅಪ್ಡೆಟ್‌ ಅಗತ್ಯವಿದೆ.

ಸುಮಾರು ಒಂದು ಸಾವಿರಕ್ಕೂ ಹೆಚ್ಚು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಫ‌ಲಾನುಭವ ಪಡೆಯಲು ಆಧಾರ್‌ ಅಗತ್ಯವಿದೆ. ಯೋಜನೆಗಳ ಪ್ರಯೋಜನಗಳ ವರ್ಗಾವಣೆ ಮತ್ತು ಡಿ-ಡುಪ್ಲಿಕೇಶನ್‌ ಖಚಿತಪಡಿಸಿಕೊಳ್ಳಲು ಆಧಾರ್‌ ಬಳಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next