Advertisement

ಮೆಡಿಕಲ್ ಕಾಲೇಜಿಗೆ ಶೀಘ್ರ 100 ಕೋಟಿ ಅನುದಾನ

02:56 PM Aug 16, 2019 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಸ್ಪಂದಿಸುವ ವಿಶ್ವಾಸ ಇದ್ದು, ರಾಜ್ಯದಲ್ಲಿ ನೂತನ ಸಚಿವ ಸಂಪುಟ ರಚನೆಯಾದ ಮೊದಲ ಸಂಪುಟ ಸಭೆಯಲ್ಲಿ ಜಿಲ್ಲೆಯ ವೈದ್ಯ ಕೀಯ ಕಾಲೇಜು ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿ ಯೂರಪ್ಪ 100 ಕೋಟಿ ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ಕೆ.ಸುಧಾಕರ್‌ ತಿಳಿಸಿದರು.

Advertisement

ತಾಲೂಕಿನ ಅಗಲಗುರ್ಕಿಯಲ್ಲಿ ಗುರುವಾರ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ರಾಜೀವ್‌ಗಾಂಧಿ ಸೇವಾ ಕೇಂದ್ರದ ನೂತನ ಕಟ್ಟಡ ಉದ್ಘಾ ಟಿಸಿ ಮಾತನಾಡಿದ ಅವರು, ಸಿದ್ದ ರಾಮಯ್ಯ ಸರ್ಕಾರದಲ್ಲಿ ಮಂಜೂರಾದ ಮೆಡಿಕಲ್ ಕಾಲೇಜಿಗೆ ಹಿಂದಿನ ಮೈತ್ರಿ ಸರ್ಕಾರದಲ್ಲಿ ಬಿಡಿಗಾಸು ಕೂಡ ಒದಗಿಸಲಿಲ್ಲ ಎಂದು ಸುಧಾಕರ್‌ ಅಸಮಾದಾನ ವ್ಯಕ್ತಪಡಿಸಿದರು.

ಸಿಎಂ ಭರವಸೆ: ಈ ಭಾಗದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಮೆಡಿಕಲ್ ಕಾಲೇಜು ಆಗಬೇಕಿದ್ದು, ಇದಕ್ಕಾಗಿ ಸಿಎಂ ಯಡಿಯೂರಪ್ಪ ಮೊದಲ ಸಂಪುಟ ಸಭೆ ಯಲ್ಲಿ ನಿರ್ಧರಿಸಿ 100 ಕೋಟಿ ಅನು ದಾನ ನೀಡುವುದಾಗಿ ಭರವಸೆ ನೀಡಿ ದ್ದಾರೆ ಎಂದು ತಿಳಿಸಿದರು.

ನೀರಿಲ್ಲದೇ ಕೈಗಾರಿಕೆ ಬರಲ್ಲ: ಸಂಸದ ಬಿ.ಎನ್‌.ಬಚ್ಚೇಗೌಡ ಮಾತನಾಡಿ, ಈ ಭಾಗಕ್ಕೆ ಶಾಶ್ವತ ನೀರಾವರಿ ಕಲ್ಪಿಸ ಬೇಕೆಂಬುದು ಜನರ ಒತ್ತಾಸೆಯಾಗಿದೆ. ಅದಕ್ಕೆ ಪೂರಕವಾಗಿ ನಾವು ಕೂಡ ಮುಂದಿನ ದಿನಗಳಲ್ಲಿ ಜನರ ಬೇಡಿಕೆ ಯಾಗಿರುವ ನೀರಾವರಿ ಯೋಜನೆ ಗಳನ್ನು ಜಾರಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.

ಹೇಮಾವತಿ ನೀರು ಈ ಭಾಗಕ್ಕೆ ತರ ಬೇಕೆಂಬುದು ನನ್ನ ಬಯಕೆ. ಸರ್ಕಾರದ ಮೇಲೆ ಒತ್ತಡ ತರುವ ಕೆಲಸ ಮಾಡು ತ್ತೇವೆ. ನೀರಾವರಿ ಇಲ್ಲದೇ ಈ ಭಾಗಕ್ಕೆ ಯಾವುದೇ ಕೈಗಾರಿಕೆಗಳು ಬರುವುದಿಲ್ಲ. ಕೈಗಾರಿಕೆಗಳು ಬಂದರೆ ಮಾತ್ರ ಈ ಭಾಗದ ಯುವಕರಿಗೆ ಉದ್ಯೋಗಾ ವಕಾಶಗಳು ಸಿಗುತ್ತವೆ.

Advertisement

ರೇಷ್ಮ ಬೆಳೆಗಾರರ ಪರ ಧ್ವನಿ: ಹಾಲು ಹಾಗೂ ರೇಷ್ಮೆ ಉತ್ಪಾದನೆಗೆ ಹೆಸರಾಗಿ ರುವ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರನ್ನು ಉಳಿಸುವ ಕೆಲಸ ಮಾಡುತ್ತೇವೆ. ಕೇಂದ್ರ ಸರ್ಕಾರ ನನ್ನನ್ನು ಕೇಂದ್ರೀಯ ರೇಷ್ಮೆ ಮಂಡಳಿಗೆ ಸದಸ್ಯರ ನ್ನಾಗಿ ಮಾಡಿದೆ. ಅಲ್ಲಿ ಜಿಲ್ಲೆಯ ರೇಷ್ಮ ಬೆಳೆಗಾರರ ಪರ ಧ್ವನಿ ಎತ್ತುತ್ತೇನೆ ಎಂದರು.

ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಪಿ.ಎನ್‌.ಕೇಶವರೆಡ್ಡಿ, ತಾಲೂಕು ಪಂಚಾಯ್ತಿ ಅಧ್ಯಕ್ಷ ಬಿ.ಎಂ.ರಾಮುಸ್ವಾಮಿ, ಕೋಚಿಮುಲ್ ಮಾಜಿ ನಿರ್ದೇಶಕ ಕೆ.ವಿ.ನಾಗರಾಜ್‌, ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಸಿ.ರಾಜಾಕಾಂತ್‌, ಗ್ರಾಪಂ ಅಧ್ಯಕ್ಷೆ ಸ್ವಾತಿ, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ನಾಗೇಶ್‌, ತಾಲೂಕು ಪಂಚಾಯ್ತಿಸದಸ್ಯರಾದ ಸತೀಶ್‌, ಅವಲಗುರ್ಕಿ ರಾಜಣ್ಣ, ಶ್ರೀನಿವಾಸ್‌, ಮಂಜುನಾಥ, ಜಯರಾಮ್‌, ಪಾಪಿ ರೆಡ್ಡಿ ಇದ್ದರು.

ವೇದಿಕೆ ಹಂಚಿಕೊಂಡ ಸುಧಾಕರ್‌,ಬಚ್ಚೇಗೌಡ:

ಕಳೆದ ಲೋಕಸಭಾ ಚುನಾವಣೆ ಮುಗಿದ ಬಳಿಕ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಆಯ್ಕೆಗೊಂಡಿರುವ ಸಂಸದ ಬಿ.ಎನ್‌.ಬಚ್ಚೇಗೌಡ ಜೊತೆ ಕಾಂಗ್ರೆಸ್‌ ಪಕ್ಷದ ಅನರ್ಹ ಶಾಸಕರಾಗಿರುವ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ಕೆ.ಸುಧಾಕರ್‌ ಕಾಣಿಸಿಕೊಂಡು ಚರ್ಚೆಗೆ ಗ್ರಾಸವಾದರು. ನಾವು ಇಬ್ಬರು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುತ್ತೇವೆ ಎಂದು ಇಬ್ಬರು ನಾಯಕರು ಕಾರ್ಯಕ್ರಮದಲ್ಲಿ ನೆರೆದಿದ್ದ ಜನತೆಗೆ ಅಭಯ ನೀಡಿದರು.
Advertisement

Udayavani is now on Telegram. Click here to join our channel and stay updated with the latest news.

Next