Advertisement
ಉಡುಪಿ,ಮಣಿಪಾಲಕ್ಕೆ ಹತ್ತಿರದ ರಸ್ತೆನಂದಳಿಕೆ ಗ್ರಾಮದಿಂದ ಸೂಡ ಮಾರ್ಗವಾಗಿ ಉಡುಪಿ, ಮಂಚಕಲ್, ಪಳ್ಳಿ, ಮೂಡುಬೆಳ್ಳೆ ಮಣಿಪಾಲ ತಲುಪಲು ಬಹು ಹತ್ತಿರದ ರಸ್ತೆ ಇದಾಗಿದೆ. ಅದರೆ ಇದೀಗ ಹೊಂಡ ಗುಂಡಿ ತುಂಬಿದ ಪರಿಣಾಮ ವಾಹನ ಸವಾರರು ಸುಮಾರು 7 -8 ಕಿ.ಮೀ. ಸುತ್ತಿ ಬಳಸಿ ಸಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕೆಲ ವರ್ಷಗಳ ಹಿಂದೆ ಈ ರಸ್ತೆ ಡಾಮರೀಕರಣಗೊಂಡರೂ ಕೆಲವೇ ತಿಂಗಳಲ್ಲಿ ಎಲ್ಲವೂ ಕಿತ್ತು ಹೋಗಿದೆ.
ಈ ರಸ್ತೆಯಲ್ಲಿ ಘನ ವಾಹನಗಳು ಸಂಚರಿಸಬಾರದು ಎಂಬ ಎಚ್ಚರಿಕೆ ಫಲಕ ಅಳವಡಿಸಿದರೂ ಸಂಚಾರ ನಡೆಸುವ ಘನ ವಾಹನಗಳ ಸಂಖ್ಯೆ ಮಾತ್ರ ಕಡಿಮೆ ಯಾಗಿಲ್ಲ. ಸೂಡ ನಂದಳಿಕೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ಕಲ್ಲಿನ ಕೋರೆಗಳಿರುವ ಕಾರಣ ಜಲ್ಲಿ ಕಲ್ಲುಗಳನ್ನು ತುಂಬಿದ ಲಾರಿ, ಟಿಪ್ಪರ್ ನಂತಹ ಘನ ವಾಹನಗಳು ಉಡುಪಿ, ಮಣಿಪಾಲವನ್ನು ತಲುಪಲು ಈ ಮಾರ್ಗವನ್ನೇ ಅವಲಂಬಿಸಿವೆ.
ರಾತ್ರಿ ಸಂದರ್ಭ ಬಾಡಿಗೆ ವಾಹನಗಳು ಈ ರಸ್ತೆಯಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಿರುವ ಪರಿಣಾಮ ಸ್ಥಳೀಯರಿಗೆ ಬಹಳ ಸಮಸ್ಯೆಯಾಗುತ್ತಿದೆ. ರಸ್ತೆ ಇಷ್ಟು ಹದಗೆಟ್ಟಿದ್ದರೂ ಸಮಬಂಧಿಸಿದ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಂಡಿಲ್ಲ ಎಂಬುದು ಗ್ರಾಮಸ್ಥರ ಆರೋಪ.
Related Articles
Advertisement
ಮಳೆಗಾಲಕ್ಕೆ ತಾತ್ಕಾಲಿಕ ದುರಸ್ತಿ
ಪಂಚಾಯತ್ ಅನುದಾನದಲ್ಲಿ ರಸ್ತೆ ದುರಸ್ತಿ ಕಷ್ಟಸಾಧ್ಯ. ಜಿ.ಪಂ. ಅಥವಾ ಶಾಸಕರ ಅನುದಾನಕ್ಕೆ ಪ್ರಯತ್ನಿಸಲಾಗುವುದು. ಮಳೆಗಾಲಕ್ಕೂ ಮುನ್ನ ತಾತ್ಕಾಲಿಕ ರಸ್ತೆ ದುರಸ್ತಿ ಮಾಡಲಾಗುವುದು.
-ಪ್ರಕಾಶ್, ಪಿಡಿಒ, ಬೆಳ್ಮಣ್ ಗ್ರಾ.ಪಂ. ಕ್ರಮ ಕೈಗೊಳ್ಳಿ
ರಸ್ತೆಯುದ್ದಕ್ಕೂ ಬೃಹತ್ ಗಾತ್ರದ ಹೊಂಡ ಗುಂಡಿಗಳಿರುವ ಪರಿಣಾಮ ಸಣ್ಣ ಪುಟ್ಟ ವಾಹನಗಳ ಸಂಚಾರವೂ ಕಷ್ಟ ಸಾಧ್ಯ. ರಸ್ತೆ ದುರಸ್ತಿ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕು.
-ಅವಿನಾಶ್,ಸ್ಥಳೀಯರು -ಶರತ್ ಶೆಟ್ಟಿ ಮುಂಡ್ಕೂರು