Advertisement
ಸೋನಿ ಫ್ಲೋಟ್ ರನ್ ಡಬ್ಲ್ಯುಐ–ಒಇ610 (Sony Float Run WI-OE610), ಇದು ಹೊಸ ಹೆಡ್ ಫೋನ್ ಶೈಲಿಯಾಗಿದ್ದು ಅದು ಸ್ಪೀಕರ್ ಅನ್ನು ಕಿವಿ ಹತ್ತಿರದಲ್ಲಿ ಇರಿಸುತ್ತದೆ. ಆದರೆ ಹೊರ ಕಿವಿಯಿಂದ ಮಧ್ಯದ ಕಿವಿವರೆಗೆ ಸಾಗುವ ಮಾರ್ಗವನ್ನು (ಕಿವಿ ಕಾಲುವೆ) ಸ್ಪರ್ಶಿಸದೆ, ಸಮೃದ್ಧ ಧ್ವನಿ ಅನುಭವ ನೀಡುತ್ತದೆ. ಕಿವಿಯನ್ನು ಸುರಕ್ಷಿತವಾಗಿ ತೆರೆದಿಡುತ್ತದೆ. ಫ್ಲೋಟ್ ರನ್, ಓಟಗಾರರು ಅಥವಾ ಅಥ್ಲೀಟ್ಗಳಿಗೆ ಹಲವಾರು ಮಹತ್ವದ ಸೌಲಭ್ಯಗಳನ್ನು ನೀಡುತ್ತದೆ. ಕ್ರೀಡಾಪಟುಗಳು ಓಡುವಾಗ ಜಾರಿ ಬೀಳದಂತೆ ಕೊರಳಪಟ್ಟಿಗೆ ಹೊಂದಿಕೊಳ್ಳುವ ಅನುಕೂಲತೆ, ಕಡಿಮೆ ತೂಕದ ವಿನ್ಯಾಸ ಮತ್ತು ಕಿವಿ ಮೇಲೆ ಕುಳಿತುಕೊಳ್ಳುವ ಒತ್ತಡ ರಹಿತ ವಿನ್ಯಾಸ ಹೊಂದಿರಲಿದೆ. ಹೀಗಾಗಿ ಹೆಡ್ ಫೋನ್ ಧರಿಸಿದವರು ಯಾವುದೇ ಅಡಚಣೆಯಿಲ್ಲದೆ ಆರಾಮವಾಗಿ ಆಲಿಸಬಹುದು.
Related Articles
Advertisement
16ಎಂಎಂ ಡ್ರೈವರ್ಗಳು ಮತ್ತು ನಿಖರವಾದ ಶ್ರುತಿಯು ಆಫ್-ಇಯರ್ ಶೈಲಿಯೊಂದಿಗೆ ಸಂಯೋಜಿಸಿ ಹೆಚ್ಚು ಸಹಜ ಮತ್ತು ವಿಶಾಲ ಧ್ವನಿ ಅನುಭವ ನೀಡಲಿರುವುದರಿಂದ ಧ್ವನಿ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಫ್ಲೋಟ್ ರನ್ ಹೆಡ್ ಫೋನ್ ಗಳು ತೆರೆದ-ಮಾದರಿಯ ವಿನ್ಯಾಸ ಹೊಂದಿವೆ. ಈ ಹೆಡ್ ಫೋನ್ ಗಳನ್ನು ಬಳಕೆದಾರರ ಕಿವಿಗಳನ್ನು ಪೂರ್ಣವಾಗಿ ಆವರಿಸುವಂತೆ ವಿನ್ಯಾಸಗೊಳಿಸಲಾಗಿದ್ದರೂ, ಇದು ಕಿವಿಗಳನ್ನು ಮುಚ್ಚುವುದಿಲ್ಲ. ಹೀಗಾಗಿ ಈ ಹೆಡ್ ಫೋನ್ ಧರಿಸಿದವರು ತಮ್ಮ ಸುತ್ತಮುತ್ತಲಿನ ಆಗುಹೋಗುಗಳನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಓಟಗಾರರು ಅಥವಾ ಅಥ್ಲೀಟ್ ಗಳು ನಿರ್ವಹಿಸುತ್ತಿರುವ ಯಾವುದೇ ಚಟುವಟಿಕೆಯಲ್ಲಿ ಗರಿಷ್ಠ ಕಾರ್ಯಕ್ಷಮತೆ ಸಾಧಿಸುವುದಕ್ಕೆ ಕಿವಿಗಳು ಅಡಚಣೆಯಾಗದಂತೆ ನೋಡಿಕೊಳ್ಳುತ್ತವೆ. ಐಪಿಎಕ್ಸ್4 (IPX4) ಸ್ಪ್ಲಾಷ್ಪ್ರೂಫ್ ರೇಟಿಂಗ್ ನೊಂದಿಗೆ, ಬೆವರ ಹನಿ ಅಥವಾ ಮಳೆಯಿಂದ ರಕ್ಷಣೆ ನೀಡುತ್ತದೆ.
ಸಂಪೂರ್ಣವಾಗಿ ಚಾರ್ಜ್ ಮಾಡಿದಾಗ, ದೀರ್ಘ ಬ್ಯಾಟರಿ ಬಾಳಿಕೆ ಮತ್ತು 10 ಗಂಟೆಗಳವರೆಗೆ ಕಾರ್ಯನಿರ್ವಹಿಸುತ್ತದೆ. 10 ನಿಮಿಷಗಳ ತ್ವರಿತ ಚಾರ್ಜ್ ಒಂದು ಗಂಟೆಯವರೆಗೆ ಕಾರ್ಯನಿರ್ವಹಿಸುತ್ತದೆ. ಉತ್ತಮ ಗುಣಮಟ್ಟದ ಅಂತರ್ನಿರ್ಮಿತ ಮೈಕ್ರೊಫೋನ್ ಹೊಂದಿದ್ದು, ಕರೆ ಮಾಡಲು ಸೂಕ್ತವಾಗಿವೆ. ಇದನ್ನು ಯುಎಸ್ಬಿ–ಸಿ (USB-C) ಬಳಸಿ ಚಾರ್ಜ್ ಮಾಡಬಹುದು. ಫ್ಲೋಟ್ ರನ್ ಹೆಡ್ ಫೋನ್ ಸೋನಿ ರಿಟೇಲ್ ಮಳಿಗೆಗಳಲ್ಲಿ (ಸೋನಿ ಸೆಂಟರ್ ಮತ್ತು ಸೋನಿ ಎಕ್ಸ್ಕ್ಲೂಸಿವ್), ಅಂತರ್ಜಾಲ ತಾಣ, www.ShopatSC.com, ಪ್ರಮುಖ ಎಲೆಕ್ಟ್ರಾನಿಕ್ ಮಳಿಗೆಗಳು ಮತ್ತು ಭಾರತದಲ್ಲಿನ ಇತರ ಇ-ಕಾಮರ್ಸ್ ಅಂತರ್ಜಾಲ ತಾಣಗಳಲ್ಲಿ 2024ರ ಜನವರಿ 4 ರಿಂದ ಖರೀದಿಗೆ ಲಭ್ಯವಿದೆ. ಇದು ಕಪ್ಪು ಬಣ್ಣದಲ್ಲಿ ಲಭ್ಯವಿದ್ದು, 10,990 ರೂ. ದರ ಹೊಂದಿದೆ.