Advertisement

Sonu gowda: ಕಾರು ಅಪಘಾತ; “ನನಗೇನೂ ಆಗಿಲ್ಲ, ಐ ಆಮ್ ಫೈನ್” ಎಂದು ವಿಡಿಯೋ ಹಂಚಿಕೊಂಡ ಸೋನು

03:21 PM Feb 05, 2024 | Team Udayavani |

ಬೆಂಗಳೂರು: ಬಿಗ್‌ ಬಾಸ್‌ ಖ್ಯಾತಿಯ ನಟಿ ಸೋನು ಶ್ರೀನಿವಾಸ್‌ ಗೌಡ ಅವರ ಕಾರು ಅಪಘಾತವಾಗಿದೆ ಎನ್ನುವ ಸುದ್ದಿ ಭಾನುವಾರ(ಫೆ.4 ರಂದು) ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿತ್ತು. ಆದರೆ ಈ ಬಗ್ಗೆ ಸೋನು ಅವರೇ ಸ್ಪಷ್ಟನೆ ನೀಡಿದ್ದಾರೆ.

Advertisement

ರೀಲ್ಸ್‌ ಸ್ಟಾರ್‌ ಸೋನು ಗೌಡ ಆಗಾಗ ಸೋಶಿಯಲ್‌ ಮೀಡಿಯಾದಲ್ಲಿ ತನ್ನ ಫೋಟೋ ಹಾಗೂ ರೀಲ್ಸ್‌ ಅಪ್ಲೋಡ್ ಮಾಡಿ ಸುದ್ದಿಯಾಗುತ್ತಾರೆ. ಅವರ ಫೋಟೋ ಹಾಗೂ ರೀಲ್ಸ್‌  ಕೆಲವೊಂದು ಸಲಿ ಟ್ರೋಲ್‌ ಕೂಡ ಆಗುತ್ತದೆ. ಇತ್ತೀಚೆಗೆ ಮಾಲ್ಡೀವ್ಸ್‌ ನಲ್ಲಿನ ಅವರ ಬಿಕಿನಿ ಫೋಟೋ ವೈರಲ್ ಆಗಿತ್ತು.

ಕಾರು ಅಪಘಾತ ಸುದ್ದಿ: ಸ್ಪಷ್ಟನೆ ಕೊಟ್ಟ ಸೋನು: ಇತ್ತೀಚೆಗೆ ಕಾರು ಕಲಿಯಲು ಸೋನು ಆರಂಭಿಸಿದ್ದರು. ಅಪಾರ್ಟ್‌ ಮೆಂಟ್‌ ನಲ್ಲಿ ಪಾರ್ಕ್‌ ಮಾಡಿದ್ದ ಕಾರನ್ನು ತೆಗೆಯಲು ಹೋಗಿದ್ದಾರೆ. ಈ ವೇಳೆ ಕಾರಿನ ಬ್ರೇಕ್‌ ಬದಲು ಎಕ್ಸಿಲೇಟರ್‌ ತುಳಿದಿದ್ದಾರೆ. ಇದರಿಂದ ಕಾರು ಪಿಲ್ಲರ್‌ ಗೆ ಹೋಗಿ ಗುದ್ದಿದೆ. ಪರಿಣಾಮ ಅವರ ಕಾರು ನಜ್ಜುಗುಜ್ಜಾಗಿತ್ತು. ಇದರಿಂದ ಸೋನು ಅವರ ಕಾಲು ಹಾಗೂ ಕೈಗೆ ಗಾಯವಾಗಿತ್ತು ಎಂದು ವರದಿಯಾಗಿತ್ತು.

ಇದನ್ನೂ ಓದಿ: Tollywood: ʼಹನುಮಾನ್‌ʼ ಗಾಗಿ 75 ಸಿನಿಮಾಗಳನ್ನು ತಿರಸ್ಕರಿಸಿದ್ದೆ; ನಟ ತೇಜ ಸಜ್ಜ

ಅಪಘಾತವಾದ ಕಾರಿನ ಫೋಟೋ ಕೂಡ ವೈರಲ್‌ ಆಗಿತ್ತು.  ಆದರೆ ಈ ಬಗ್ಗೆ ಸೋನು ಅವರೇ ಸ್ಪಷ್ಟನೆ ನೀಡಿದ್ದಾರೆ.

Advertisement

“ನನಗೇನೂ ಆಗಿಲ್ಲ. ಐ ಆಮ್ ಫೈನ್. ನನಗೆ ಆಕ್ಸಿಡೆಂಟ್ ಆಗಿದೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಬರ್ತಿರೋದೆಲ್ಲಾ ಸುಳ್ಳು. ನಾನು ಚೆನ್ನಾಗಿದ್ದೀನಿ. ನಾನು ಆರಾಮಾಗಿದ್ದೀನಿ. ಈಗ ಜಿಮ್‌ಗೆ ಹೋಗ್ತಿದ್ದೀನಿ’ʼ ಎಂದು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

ʼಕ್ಯಾಡ್ಬರಿಸ್‌ʼ ಎನ್ನುವ ಸಿನಿಮಾದಲ್ಲೂ ಸೋನು ಗೌಡ ಬಣ್ಣ ಹಚ್ಚಲಿದ್ದಾರೆ. ಈ ಸಿನಿಮಾದಲ್ಲಿ ಧರ್ಮ ಕೀರ್ತಿರಾಜ್‌ ಹಾಗೂ ಅದ್ವಿತಿ ಶೆಟ್ಟಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next