Advertisement

Sonu Gowda: ಕಾರು ಕಲಿಯಲು ಹೋಗಿ ಅವಾಂತರ ಮಾಡಿಕೊಂಡ ಸೋನು ಗೌಡ: ಆಸ್ಪತ್ರೆಗೆ ದಾಖಲು

01:04 PM Feb 04, 2024 | Team Udayavani |

ಬೆಂಗಳೂರು: ಟಿಕ್‌ ಸ್ಟಾರ್‌ ಸೋನು ಗೌಡ ಆಗಾಗ ಸೋಶಿಯಲ್‌ ಮೀಡಿಯಾದಲ್ಲಿ ಸುದ್ದಿಯಲ್ಲಿರುತ್ತಾರೆ. ತನ್ನ ಹಾಟ್‌ ಫೋಟೋಸ್‌ ಹಾಗೂ ರೀಲ್ಸ್‌ ಗಳಿಂದ ಗಮನ ಸೆಳೆಯುವ ಸೋನು ಅವಾಂತರವೊಂದನ್ನು ಮಾಡಿ ಆಸ್ಪತ್ರೆಗೆ ಸೇರಿದ್ದಾರೆ.

Advertisement

ಬಿಗ್‌ ಬಾಸ್‌ ಕಾರ್ಯಕ್ರಮದ ಬಳಿಕ ಸೋನು ಗೌಡ ಅವರು ಸೋಶಿಯಲ್‌ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಮಾಲ್ಡೀವ್ಸ್‌ ನಲ್ಲಿ ಬಿಕಿನಿ ಧರಿಸಿಕೊಂಡು ಫೋಟೋ ಹಂಚಿಕೊಂಡಿದ್ದರು. ಈ ಫೋಟೋ ವೈರಲ್‌ ಆಗುವುದರ ಜೊತೆಗೆ ಸಖತ್‌ ಟ್ರೋಲ್‌ ಆಗಿತ್ತು.

ಇದೀಗ ಸೋನು ಗೌಡ ಅವರ ಕಾರು ಕಲಿಯಲು ಹೋಗಿ ಅವಾಂತರವೊಂದನ್ನು ಮಾಡಿ ಆಸ್ಪತ್ರೆಗೆ ಸೇರಿದ್ದಾರೆ ಎಂದು ವರದಿಯಾಗಿದೆ.

ಮೂಲಗಳ ಪ್ರಕಾರ ಇತ್ತೀಚೆಗೆ ಕಾರು ಕಲಿಯಲು ಸೋನು ಆರಂಭಿಸಿದ್ದರು. ಅಪಾರ್ಟ್‌ ಮೆಂಟ್‌ ನಲ್ಲಿ ಪಾರ್ಕ್‌ ಮಾಡಿದ್ದ ಕಾರನ್ನು ತೆಗೆಯಲು ಹೋಗಿದ್ದಾರೆ. ಈ ವೇಳೆ ಕಾರಿನ ಬ್ರೇಕ್‌ ಬದಲು ಎಕ್ಸಿಲೇಟರ್‌ ತುಳಿದಿದ್ದಾರೆ. ಇದರಿಂದ ಕಾರು ಪಿಲ್ಲರ್‌ ಗೆ ಹೋಗಿ ಗುದ್ದಿದೆ. ಪರಿಣಾಮ ಅವರ ಕಾರು ನಜ್ಜುಗುಜ್ಜಾಗಿದೆ ಎಂದು ವರದಿಯಾಗಿದೆ.

ಸೋನು ಗೌಡ ಅವರ ಕೈ ಹಾಗೂ ಕಾಲಿಗೆ ಏಟಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ವರದಿ ತಿಳಿಸಿದೆ.

Advertisement

ʼಕ್ಯಾಡ್ಬರಿಸ್‌ʼ ಎನ್ನುವ ಸಿನಿಮಾದಲ್ಲೂ ಸೋನು ಗೌಡ ಬಣ್ಣ ಹಚ್ಚಲಿದ್ದಾರೆ. ಈ ಸಿನಿಮಾದಲ್ಲಿ ಧರ್ಮ ಕೀರ್ತಿರಾಜ್‌ ಹಾಗೂ ಅದ್ವಿತಿ ಶೆಟ್ಟಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next