Advertisement

ತನ್ನ ಹೆಣ್ಣುಮಕ್ಕಳ ಆನ್ ಲೈನ್ ಶಿಕ್ಷಣಕ್ಕಾಗಿ ಹಸು ಮಾರಿದ ವ್ಯಕಿಗೆ ಸೋನು ಸೂದ್ ನೆರವು !

02:47 PM Jul 25, 2020 | Mithun PG |

ಮುಂಬೈ: ಕೋವಿಡ್ -19 ಲಾಕ್ ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ, ಕೋವಿಡ್ ವಾರಿಯರ್ಸ್ ಗೆ ಸಹಾಯ ಹಸ್ತ ಚಾಚಿ ಸಮಸ್ತ ಜನರ ಮನಗೆದ್ದಿರುವ ರಿಯಲ್ ಹೀರೋ ಸೋನು ಸೂದ್ ಇದೀಗ ಮತ್ತೊಂದು ಮಹತ್ಕಾರ್ಯ ಕೈಗೊಂಡ ಪರಿಣಾಮ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Advertisement

ಹೌದು. ಇಂದು ದೇಶದೆಲ್ಲಡೆ ಕೋವಿಡ್ ಕಾರಣದಿಂದ ಶಾಲಾ-ಕಾಲೇಜುಗಳು ಮುಚ್ಚಲ್ಪಟ್ಟಿವೆ. ಆನ್ ಲೈನ್ ಶಿಕ್ಷಣ ವ್ಯವಸ್ಥೆ ಮುನ್ನೆಲೆಗೆ ಬಂದಿದೆ.  ಆದರೇ ಬಡ ಕುಟುಂಬಗಳಿಗೆ ಆನ್ ಲೈನ್ ತರಗತಿಗಳು ಹೊಡೆತ ನೀಡಿರುವುದು ಸುಳ್ಳಳ್ಳ. ಇಲ್ಲೊಬ್ಬ ವ್ಯಕ್ತಿ ತನ್ನ ಹೆಣ್ಣುಮಕ್ಕಳ ಆನ್ ಲೈನ್ ಶಿಕ್ಞಣಕ್ಕಾಗಿ ಮೊಬೈಲ್ ಕೊಳ್ಳುವುದಕ್ಕೆ ಸಾಕಿದ ಹಸುವನ್ನೇ ಮಾರಿದ್ದರು. ಇದು ಸೋನು ಸೂದ್ ಅವರ ಗಮನಕ್ಕೆ ಬಂದು ಹಸು ಮಾರಿದ ವ್ಯಕ್ತಿಗೆ ಸಹಾಯ ಹಸ್ತ ಚಾಚಿದ್ದಾರೆ.
ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ಗಮ್ಮರ್‌ ಗ್ರಾಮದಲ್ಲಿ ನಲೆಸಿರುವ ಕುಲ್ದೀಪ್‌ ಕುಮಾರ್‌ ಎಂಬ ವ್ಯಕ್ತಿಯೇ ಹಸು ಮಾರಿದವರು. ತನ್ನ ಹೆಣ್ಣು ಮಕ್ಕಳಾದ ನಾಲ್ಕು ಹಾಗೂ ಆರನೇ ತರಗತಿಯಲ್ಲಿ ಕಲಿಯುತ್ತಿರುವ ಅನು, ವಂಶ ಅವರ ಆನ್‌ಲೈನ್‌ ಶಿಕ್ಷಣಕ್ಕಾಗಿ ಮೊಬೈಲ್‌ ಬೇಕಾಗಿದ್ದರಿಂದ  ಹಣಕ್ಕಾಗಿ ಅಲೆಡಾಡಿದ್ದರು.

ಸ್ಥಳೀಯ ಹಣಕಾಸು ಸಂಸ್ಥೆಯಲ್ಲಿ ಮತ್ತು ಬ್ಯಾಂಕ್ ನಲ್ಲಿ  ಈ ಕುರಿತು ಪ್ರಸ್ತಾಪಿಸಿದ್ದರೂ ನೆರವು ದೊರೆತಿರಲಿಲ್ಲ. ಬೇರೆ ದಾರಿ ಕಾಣದೆ ಸಾಕಿದ ಹಸುವನ್ನೇ 6000 ರೂ. ಗೆ ಮಾರಿ ಮಕ್ಕಳಿಗೆ ಮೊಬೈಲ್‌ ಖರೀದಿಸಿದ್ದರು. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಅದಕ್ಕೆ ಸ್ಪಂದಿಸಿರುವ ಸೂದ್‌, ”ರೈತನ ಸಂಪರ್ಕ ವಿವರ ಇದ್ದರೆ ಕೊಡಿ. ಅವರಿಗೆ ಹಸುವನ್ನು ವಾಪಸ್‌ ಕೊಡಿಸುವ ಜತೆಗೆ ಸಹಾಯ ಮಾಡಬೇಕಿದೆ,” ಎಂದು ಬರೆದುಕೊಂಡಿದ್ದಾರೆ.

Advertisement

ಕುಲ್ದೀಪ್ ಕುಮಾರ್ ಅವರಿಗೆ ಜೀವನ ನಿರ್ವಹಣೆಗೆ ಹಸುವೇ ಆಧಾರವಾಗಿದ್ದು ಹಾಲು ಮಾರಾಟ ಮಾಡುವ ಮೂಲಕ ಹಣ ಸಂಪಾದಿಸುತ್ತಿದ್ದರು. ಹೆಂಡತಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next