ಮುಂಬೈ: ಖ್ಯಾತ ಬಾಲಿವುಡ್ ನಟ ಸೋನು ಸೂದ್ ಇತ್ತೀಚಿನ ದಿನಗಳಲ್ಲಿ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದು, ಈ ನಡುವೆ ಮಹಾ ಶಿವರಾತ್ರಿ ಆಚರಣೆ ಹಾಗೂ ಸಮಾಜ ಸೇವೆಯನ್ನು ತಳುಕು ಹಾಕಿ ಮಾತನಾಡಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
ಮಹಾ ಶಿವರಾತ್ರಿಯ ಆಚರಣೆ ಕುರಿತಾಗಿ ಟ್ವೀಟ್ ಮಾಡಿರುವ ನಟ ಸೋನು ಸೂದ್ ಮಹಾ ಶಿವರಾತ್ರಿಯ ಪ್ರಯುಕ್ತ ಶಿವನ ಚಿತ್ರಗಳನ್ನು ಪಾರ್ವರ್ಡ್ ಮಾಡುವ ಬದಲು ಅಗತ್ಯವಿರುವ ಯಾರಿಗಾಗದರೂ ಸಹಾಯ ಮಾಡಿ ಎಂದಿದ್ದಾರೆ.
ಆದರೆ ಇವರ ಈ ಸಂದೇಶ ಹಲವರಲ್ಲಿ ಅಸಮಾಧಾನವನ್ನು ಉಂಟುಮಾಡಿದ್ದು, ವಿವಿಧ ರೀತಿಯಲ್ಲಿ ಟ್ರೋಲ್ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ನಟನ ಈ ಸಂದೇಶಕ್ಕೆ ಪ್ರತಿಕ್ರಿಯೆ ನೀಡಿದ್ದು, “ನಮ್ಮ ಹಬ್ಬ ನಮ್ಮ ಇಷ್ಟ” ಎಂಬುದಾಗಿ ಹೇಳಿದ್ದಾರೆ.
ಇದನ್ನೂ ಓದಿ:ನಿರಪರಾಧಿಗಳಿಗೆ ಆರ್ಥಿಕ ಪರಿಹಾರ: ಮಾರ್ಗಸೂಚಿಗಾಗಿ ಸುಪ್ರೀಂಗೆ ಮನವಿ
ಇನ್ನೊಬ್ಬ ವ್ಯಕ್ತಿ ಇವರ ಸಂದೇಶಕ್ಕೆ ಟ್ವೀಟ್ ಮೂಲಕ ಪ್ರತ್ರಿಕ್ರಿಯೆ ನೀಡಿದ್ದು, ನಮಗೆಲ್ಲರಿಗೂ ನಾವು ಹೇಗೆ ನಮ್ಮ ಹಬ್ಬವನ್ನು ಆಚರಣೆ ಮಾಡಬೇಕು ಎಂದು ಚೆನ್ನಾಗಿ ತಿಳಿದಿದೆ. ನೀವು ನಮಗೆ ಬುದ್ಧಿವಾದ ಹೇಳುವ ಅವಶ್ಯಕತೆ ಇಲ್ಲ, ಹಿಂದುಗಳ ಹಬ್ಬ ಎಂದು ಬಂದಾಗ ಇಂತಹ ಒಂದಲ್ಲಾ ಒಂದು ಕಿರಿಕಿರಿ ಕಂಡುಬರುತ್ತದೆ . ಆದರೆ ಇನ್ನುಳಿದ ಯಾವುದೇ ಧರ್ಮದ ಆಚರಣೆಗಳಲ್ಲಿ ಇದು ಕಂಡುಬರುವುದಿಲ್ಲ ಏಕೆ… ಏಕೆ.. ಏಕೆ.. ಎಂಬುದಾಗಿ ತಮ್ಮ ಬೇಸರವನ್ನು ಹೊರಹಾಕಿದ್ದಾರೆ.
ಹಲವಾರು ಜನರು ನಟನ ವಿರುದ್ಧ ತಮ್ಮ ಬೇಸರನ್ನು ಹೊರಹಾಕಿದ ಬಳಿಕ ನಟ ಸೋನೂ ಸೂದ್ ತಾವೂ ಕೂಡ ತಮ್ಮ ಟ್ವೀಟರ್ ನಲ್ಲಿ ಶಿವನ ಚಿತ್ರವನ್ನು ಒಳಗೊಂಡ ಮಹಾ ಶಿವರಾತ್ರಿಯ ಶುಭಾಷಯವನ್ನು ಕೋರುವ ಪೋಸ್ಟ್ ಒಂದನ್ನು ಹಾಕಿದ್ದಾರೆ.
ಕೋವಿಡ್ ಲಾಕ್ ಡೌನ್ ನಮಯದಲ್ಲಿ ನಟ ಸೋನು ಸೂದ್ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಕೊಂಡಿದ್ದು, ಲಾಕ್ ಡೌನ್ ನಲ್ಲಿ ಸಿಲುಕಿಕೊಂಡಿದ್ದ ಸಾವಿರಾರು ಜನರಿಗೆ ವೈದ್ಯಕೀಯ ಸಹಾಯದ ಜೊತೆ ಜೊತೆಗೆ, ಅವರು ತಮ್ಮ ಮನೆಗಳಿಗೆ ಮರಳಲು ಬೇಕಾದ ಎಲ್ಲಾ ವಿಧದ ಸಹಾಯವನ್ನು ಮಾಡಿದ್ದರು.