ನವದೆಹಲಿ : ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಲಕ್ಷಾಂತರ ಮಂದಿ ಭಾರತೀಯರಿಗೆ ಸಹಾಯ ಮಾಡಿದ, ವಿದೇಶದಲ್ಲಿದ್ದ ಭಾರತೀಯರನ್ನು ತಮ್ಮ ಮನೆಗಳಿಗೆ ಸೇರುವಂತೆ ಮಾಡಿದ್ದ ನಟ ಸೋನು ಸೂದ್ ಅವರಿಗೆ ಸ್ಪೈಸ್ ಜೆಟ್ ಸಂಸ್ಥೆಯು ವಿಶೇಷ ಗೌರವ ಸಲ್ಲಿಸಿದ್ದು, ತಮ್ಮ 737 ಸಂಖ್ಯೆಯ ವಿಮಾನ ಒಂದರ ಮೇಲೆ ಅವರ ಭಾವ ಚಿತ್ರ ಹಾಕಿ ಗೌರವ ಸಲ್ಲಿಸಿದೆ.
ಕೋವಿಡ್ ತುರ್ತು ಸಂದರ್ಭದಲ್ಲಿ ಸ್ಪೈಸ್ ಜೆಟ್ ಸಂಸ್ಥೆ ಜೊತೆ ಸೇರಿಕೊಂಡು, ವಿದೇಶಕ್ಕೆ ಕೆಲಸಕ್ಕೆ ಹೋಗಿದ್ದ ಲಕ್ಷಾಂತರ ಜನರನ್ನು ತಮ್ಮ ಕುಟುಂಬಗಳಿಗೆ ಸೇರಿಸುವ ಕೆಲಸವನ್ನು ಸೋನು ಸೂದ್ ಮಾಡಿದ್ದರು. ಕಿರ್ಗಿಸ್ಥಾನ್ ನಲ್ಲಿ ಇದ್ದ 1500 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ರಷ್ಯಾ, ಉಜ್ಬೇಕಿಸ್ಥಾನ್, ಮನಿಲಾ, ಅಲ್ಮಾಟಿಗಳಲ್ಲಿ ಸಿಲುಕಿದ್ದ ನೂರಾರು ಭಾರತೀಯ ಪ್ರಜೆಗಳನ್ನು ಭಾರತಕ್ಕೆ ವಾಪಸ್ ಕರೆಸುಕೊಳ್ಳುವಲ್ಲಿ ಸೋನು ಸೂದ್ ಶ್ರಮ ವಹಿಸಿದ್ದರು.
ಸ್ಪೈಸ್ ಜೆಟ್ ಮುಖ್ಯಸ್ಥರಾದ ಅಜಯ್ ಸಿಂಗ್ ಈ ಬಗ್ಗೆ ಮಾತನಾಡಿದ್ದು, ಈ ಗೌರವ ನೀಡುತ್ತಿರುವುದು ನಮಗೆ ಹೆಮ್ಮೆ ತಂದಿದೆ. ನಮ್ಮ ಜೊತೆ ಕೈ ಜೋಡಿಸಿ ಲಕ್ಷಾಂತರ ಮಂದಿಗೆ ಕೊರೊನಾ ಸಮಯದಲ್ಲಿ ಸಹಾಯ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಎಂದಿದ್ದಾರೆ.