Advertisement

ಬಿಡುಗಡೆಯಾಯ್ತು “ಚಂಬಲ್‌’ಚಿತ್ರದ ಮೊದಲ ಪೋಸ್ಟರ್‌

02:44 PM Mar 27, 2018 | Team Udayavani |

ಸತೀಶ್‌ ನೀನಾಸಂ “ಚಂಬಲ್‌’ ಎಂಬ ಚಿತ್ರದಲ್ಲಿ ನಟಿಸುತ್ತಿರುವುದು ಹೊಸ ಸುದ್ದಿಯೇನಲ್ಲ. “ಅಯೋಗ್ಯ’ ಮತ್ತು “ಗೋಧ್ರಾ’ಗಿಂಥ ಮುಂಚೆಯೇ ಒಪ್ಪಿಕೊಂಡ ಚಿತ್ರವಿದು. ಆದರೆ, ಅದ್ಯಾಕೋ ಚಿತ್ರದ ನಿರ್ದೇಶಕ ಜೇಕಬ್‌ ವರ್ಗೀಸ್‌, ಇದುವರೆಗೂ ಚಿತ್ರದ ಬಗ್ಗೆ ತುಟಿಕ್‌ ಪಿಟಿಕ್‌ ಎಂದಿರಲಿಲ್ಲ. ಈಗ ಅವರು ಚಿತ್ರದ ಮೊದಲ ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕೆಲಸ ಶುರು ಮಾಡಿದ್ದಾರೆ.

Advertisement

ಹೌದು, “ಚಂಬಲ್‌’ ಚಿತ್ರದ ಮೊದಲ ಪೋಸ್ಟರ್‌ ಬಿಡುಗಡೆ ಆಗಿದೆ. ಹೆಸರು ಕೇಳಿದರೆ, ಇದು ಚಂಬಲ್‌ ಕಣಿವೆಯ ದರೋಡೆಕಾರರ ಕಥೆ ಅಂತ ಭಾವಿಸಬಹುದು. ಆದರೆ, ಪೋಸ್ಟರ್‌ ನೋಡಿದರೆ ನಿಮ್ಮ ಅಂದಾಜು ತಲೆ ಕೆಳಗಾಗುತ್ತದೆ. ಇಲ್ಲೊಂದು ನಗರ ಮತ್ತು ಸೂಟು-ಬೂಟು ತೊಟ್ಟಿರುವ ಸತೀಶ್‌ ನೀನಾಸಂ ಅವರನ್ನು ನೋಡಬಹುದು. ಹಾಗಾದರೆ, ಈ ಚಿತ್ರದ ಮೂಲಕ ನಿರ್ದೇಶಕ ಜೇಕಬ್‌ ವರ್ಗೀಸ್‌ ಏನು ಹೇಳುವುದಕ್ಕೆ ಹೊರಟಿದ್ದಾರೆ ಎಂಬ ಪ್ರಶ್ನೆ ಬರಬಹುದು. ಆ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಉತ್ತರ ಬೇಕಿದ್ದರೆ, ಇನ್ನೂ ಒಂದಿಷ್ಟು ದಿನ ಕಾಯಬೇಕು.

ಅಂದಹಾಗೆ, ಈ ಚಿತ್ರವನ್ನು ದಿನೇಶ್‌ ರಾಜಕುಮಾರ್‌ ಮತ್ತು ಮ್ಯಾಥ್ಯೂ ವರ್ಗೀಸ್‌ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಸತೀಧ್‌ ಜೊತೆಗೆ ಸೋನು ಗೌಡ, ಕಿಶೋರ್‌, ರೋಜರ್‌ ನಾರಾಯಣ್‌, ಅಚ್ಯುತ್‌ ಕುಮಾರ್‌, ಸರ್ದಾರ್‌ ಸತ್ಯ, ಪವನ್‌ ಕುಮಾರ್‌ ಮುಂತಾದ ಪ್ರತಿಭಾವಂತ ಕಲಾವಿದರ ದಂಡೇ ಇದೆ. ಪೂರ್ಣಚಂದ್ರ ತೇಜಸ್ವಿ ಮತ್ತು ಜೂಡಾ ಸ್ಯಾಂಡಿ ಚಿತ್ರಕ್ಕೆ ಸಂಗೀತ ಸಂಯೋಜಿಸಿದರೆ, ಶಶಿಕುಮಾರ್‌ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next