Advertisement

ಅಕ್ರಮವಾಗಿ ಮಗು ದತ್ತು ಪಡೆದ ಪ್ರಕರಣ: ಸೋನು ಶ್ರೀನಿವಾಸ್‌ ಗೌಡಗೆ ಜಾಮೀನು ಮಂಜೂರು

07:05 PM Apr 04, 2024 | Team Udayavani |

ಬೆಂಗಳೂರು:  ಅಕ್ರಮವಾಗಿ ಮಗುವನ್ನು ದತ್ತು ಪಡೆದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಬಿಗ್‌ ಬಾಸ್‌ ಸ್ಪರ್ಧಿ ಸೋನು ಶ್ರೀನಿವಾಸ್‌ ಗೌಡ ಅವರಿಗೆ ಜಾಮೀನು ಮಂಜೂರು ಆಗಿದೆ.

Advertisement

ಗುರುವಾರ(ಏ.4 ರಂದು) ಬೆಂಗಳೂರು ಗ್ರಾಮಾಂತರ  ಪ್ರಧಾನ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಇಂದು ಅಥವಾ ನಾಳೆ ಸೋನು ಶ್ರೀನಿವಾಸ್‌ ಗೌಡ ಜೈಲಿನಿಂದ ಹೊರಬರುವ ಸಾಧ್ಯತೆಯಿದೆ ಎನ್ನಲಾಗಿದೆ.

ಏನಿದು ಪ್ರಕರಣ: ಸೋನು ಗೌಡ ಇತ್ತೀಚೆಗೆ ಚಿಕ್ಕ ಬಾಲಕಿಯನ್ನು ದತ್ತು ಪಡೆದಿರುವುದಾಗಿ ಹೇಳಿಕೊಂಡಿದ್ದರು. ಆದರೆ, ದತ್ತು ಪಡೆದಿರುವ ರೀತಿ ನಿಯಮದ ಅನುಸಾರವಾಗಿಲ್ಲ ಎಂಬ ಕಾರಣಕ್ಕೆ ಆಕೆಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಲ್ಲದೇ, ಸೋನು ಗೌಡರನ್ನು ಪೊಲೀಸರು ಬಂಧಿಸಿದ್ದರು. ಸೋನು ಗೌಡ ಇತ್ತೀಚೆಗೆ ಚಿಕ್ಕ ಬಾಲಕಿಯನ್ನು ದತ್ತು ಪಡೆದಿರುವುದಾಗಿ ಹೇಳಿಕೊಂಡಿದ್ದರು. ಆದರೆ, ದತ್ತು ಪಡೆದಿರುವ ರೀತಿ ನಿಯಮದ ಅನುಸಾರವಾಗಿಲ್ಲ ಎಂಬ ಕಾರಣಕ್ಕೆ ಆಕೆಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಲ್ಲದೇ, ಸೋನು ಗೌಡರನ್ನು ಪೊಲೀಸರು ಬಂಧಿಸಿದ್ದರು. ಆ ಬಳಿಕ ಶ್ರೀನಿವಾಸ್‌ ಗೌಡ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಸಿಜೆಎಂ ನ್ಯಾಯಾಲಯ ಆದೇಶ ಹೊರಡಿಸಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next