Advertisement

ಸೋನಿಯಾಗೆ ಕಾಂಗ್ರೆಸ್‌ ವಿದ್ಯಮಾನ ತಿಳಿಸುವೆ

12:43 PM Mar 26, 2017 | Team Udayavani |

ಮೈಸೂರು: “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೀವು ಸರ್ಕಾರವನ್ನು ಹೇಗೆ ಬೇಕಾದರೂ ಹಾಳು ಮಾಡಿ. ಆದರೆ, 130 ವರ್ಷದ ಇತಿಹಾಸ ವಿರುವ ಕಾಂಗ್ರೆಸ್‌ ಪಕ್ಷವನ್ನು ಹಾಳು ಮಾಡಬೇಡಿ’ ಎಂದು ಮುಖ್ಯಮಂತ್ರಿ ವಿರುದ್ಧ ಮಾಜಿ ಸಂಸದ ಎಚ್‌.ವಿಶ್ವನಾಥ್‌ ವಾಗ್ಧಾಳಿ ನಡೆಸಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೀಘ್ರವೇ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ, ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್‌ ಪಕ್ಷದೊಳಗೆ ಆಗುತ್ತಿರುವ ಬೆಳವಣಿಗೆ ಗಳನ್ನು ಅವರ ಗಮನಕ್ಕೆ ತರುತ್ತೇನೆ. ಈ ಎಲ್ಲಾ ವಿಷಯಗಳನ್ನು ಕೇಳುವುದು ಅಥವಾ ಬಿಡುವುದು ಅವರ ವಿವೇಚನೆಗೆ ಬಿಟ್ಟಿದ್ದು. ಆದರೆ, ಪಕ್ಷದ ಹಿರಿಯರ ಮುಂದೆ ನಿವೇದನೆ ಮಾಡಿಕೊಳ್ಳುವುದು ತಮ್ಮ ಕರ್ತವ್ಯ ಎಂದರು.

ತಮ್ಮ ಸ್ವಾರ್ಥ ಸಾಧನೆಗಾಗಿ ಪಕ್ಷದ ಹಿತವನ್ನು ಬಲಿ ಕೊಡುತ್ತಿರುವ ರಾಜ್ಯ ಕಾಂಗ್ರೆಸ್‌ ಮುಖಂಡರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಂಡರೆ ಭಯಪಡುತ್ತಿದ್ದಾರೆ ಎಂದು ಟೀಕಿಸಿದರು. ಸಿದ್ದರಾಮಯ್ಯ ವಿರುದ್ಧ ಮಾತನಾಡಿದರೆ ಎಲ್ಲಿ ಅವರ ಅವಕೃಪೆಗೆ ಒಳಗಾಗುತ್ತೇವೋ ಎಂಬ ಭಯದಿಂದ

-ಸ್ವಹಿತಾಸಕ್ತಿಗಾಗಿ ಸಿದ್ದರಾಮಯ್ಯ ಅವರ ಓಲೈಕೆಯಲ್ಲಿ ತೊಡಗಿರುವ ರಾಜ್ಯ ಕಾಂಗ್ರೆಸ್‌ ನಾಯಕರ ಜತೆಗೆ ದೆಹಲಿಯಲ್ಲಿರುವ ರಾಜ್ಯದ ಹಿರಿಯ ಕಾಂಗ್ರೆಸ್ಸಿಗರು ಸಹ ಸಿಎಂ ಸಿದ್ದರಾಮಯ್ಯ ಅವರಿಗೆ ಹೆದರುತ್ತಿದ್ದಾರೆ. ಇದರ ಪರಿಣಾಮ ಕರ್ನಾಟಕದಲ್ಲಿ ಏನೇ ಆದರೂ ಯಾರೂ ಮಾತನಾಡದೆ ಮೌನವಹಿಸಿರುವುದು ದುರ್ದೆçವ ಎಂದು ಹರಿಹಾಯ್ದರು.

ಈಡುಗಾಯಿ ಒಡೆದು ಬರ್ತೇನೆ: ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಯ ಪ್ರಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಪುಟ ಸಚಿವರು ಇರಬೇಕಾದರೆ ನಾವೆಲ್ಲ ಯಾವ ಲೆಕ್ಕ. ಹೀಗಿದ್ದರೂ ತಮ್ಮ ಸಂಬಂಧಿ ಕರಿಗೆ ದೂರವಾಣಿ ಕರೆ ಮಾಡಿ ಕಾಂಗ್ರೆಸ್‌ಗೆ ಮತಹಾಕುವಂತೆ ಮನವಿ ಮಾಡಿ ದ್ದೇನೆ.

Advertisement

ಶೀಘ್ರವೇ ಎರಡೂ ಕ್ಷೇತ್ರಗಳಿಗೂ ಭೇಟಿ ನೀಡಿ ನಂಜುಂಡೇಶ್ವರ ಹಾಗೂ ಗೋಪಾಲ ಸ್ವಾಮಿ ಬಳಿಯೂ ಪಕ್ಷ ಉಳಿಸುವಂತೆ ನಿವೇದನೆ ಮಾಡಿ ಕೊಳ್ಳುತ್ತೇನೆ. ನಂಜನಗೂಡಿನ ನಂಜುಂಡೇಶ್ವರನ ಬಳಿ ಕಾಂಗ್ರೆಸ್‌ ಪಕ್ಷವನ್ನು ಉಳಿಸುವಂತೆ ಸಾಷ್ಟಾಂಗ ನಮಸ್ಕಾರ ಹಾಕಿ ಈಡುಗಾಯಿ ಒಡೆದು ಬರುತ್ತೇನೆ ಎಂದು ವಿಶ್ವನಾಥ್‌ ತಿಳಿಸಿದರು.

ಅಧ್ಯಕ್ಷರ ಬದಲಾವಣೆಗೆ ಕಿಡಿ: ಮೈಸೂರು ನಗರ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಟಿ.ಎಸ್‌.ರವಿಶಂಕರ್‌ ಅವರನ್ನು ದಿಢೀರ್‌ ಪದಚ್ಯುತಿಗೊಳಿಸಿ ಆರ್‌.ಮೂರ್ತಿ ಅವರನ್ನು ನೇಮಕ ಮಾಡಿರುವ ಕ್ರಮ ಸರಿಯಲ್ಲ. ನಂಜನಗೂಡು ಹಾಗೂ ಗುಂಡ್ಲುಪೇಟೆ ಚುನಾವಣೆ ಹೊಸ್ತಿಲಲ್ಲಿ ನಗರ ಕಾಂಗ್ರೆಸ್‌ ಅಧ್ಯಕ್ಷರ ಪದಚ್ಯುತಿಗೊಳಿಸಿ ಹೊಸಬರನ್ನು ನೇಮಿಸಿರುವುದು ಖಂಡನೀಯ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ ಅವರನ್ನು ಕೇಳಿದರೆ ಮೈಸೂರು ಜಿಲ್ಲೆಯ ವಿಚಾರ ನನಗೆ ಕೇಳಬೇಡಿ ಎನ್ನುತ್ತಾರೆ.

ಇದನ್ನು ಗಮನಿಸಿದರೆ ಈ ಎಲ್ಲಾ ಬೆಳವಣಿಗೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅಣತಿಯಂತೆ ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿದ್ದು, ಇವರೇನು ಪಕ್ಷ ಕಟ್ಟುತ್ತಿದ್ದಾರೋ ಅಥವಾ ಒಡೆದು ಹಾಕುತ್ತಿದ್ದಾರೋ ಎಂದು ಪ್ರಶ್ನಿಸಿದ ಅವರು, ರವಿಶಂಕರ್‌ ತನ್ನೊಂದಿಗೆ ಓಡಾಡಿದರು ಎಂಬ ದ್ವೇಷದಿಂದ ಅವರನ್ನು ನಗರಾಧ್ಯಕ್ಷ ಸ್ಥಾನದಿಂದ ತೆಗೆದಿರಬಹುದು ಎಂದು ವಿಶ್ವನಾಥ್‌ ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next