Advertisement

ಮಹಿಳಾ ಮೀಸಲಾತಿ ಬೇಗನೆ ಪಾಸು ಮಾಡಿ: ಮೋದಿಗೆ ಸೋನಿಯಾ

03:58 PM Sep 21, 2017 | Team Udayavani |

ಹೊಸದಿಲ್ಲಿ : 2010ರಲ್ಲೇ ರಾಜ್ಯಸಭೆಯಲ್ಲಿ ಪಾಸಾಗಿ ಒಂದಲ್ಲ ಒಂದು ಕಾರಣಕ್ಕೆ  ಈ ತನಕವೂ ನನೆಗುದಿಗೆ ಬಿದ್ದಿರುವ, ಮಹಿಳೆಯರಿಗೆ ಶೇ.33ರ ಮೀಸಲಾತಿಯನ್ನು ಖಾತರಿಪಡಿಸುವ, ಮಹಿಳಾ ಮೀಸಲಾತಿ ಮಸೂದೆಯನ್ನು ಇನ್ನಾದರೂ ವಿಳಂಬವಿಲ್ಲದೆ ಲೋಕಸಭೆಯಲ್ಲಿ ಪಾಸು ಮಾಡಿಸುವಂತೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. 

Advertisement

“ಲೋಕಸಭೆಯಲ್ಲಿ ನಿಮಗಿರುವ ಬಹುಮತದ ಲಾಭವನ್ನು ಎತ್ತಿಕೊಂಡು ಮಹಿಳಾ ಮೀಸಲಾತಿ ಮಸೂದೆಯನ್ನು ಇನ್ನಾದರೂ ವಿಳಂಬವಿಲ್ಲದೆ ಪಾಸು ಮಾಡಿಸಿ’ ಎಂದು ಸೋನಿಯಾ ಪತ್ರದಲ್ಲಿ ಒತ್ತಾಯಿಸಿದ್ದಾರೆ. 

ಮಹಿಳೆಯರಿಗೆ ಆಡಳಿತೆಯಲ್ಲಿ ಮೀಸಲಾತಿಯನ್ನು ಕಲ್ಪಿಸುವ ಮೂಲ ಪರಿಕಲ್ಪನೆ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರದ್ದು. ಅಂತೆಯೇ ಪಂಚಾಯತ್‌ ಮತ್ತು ನಗರಪಾಲಿಕೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಒದಗಿಸುವ ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಕಾಂಗ್ರೆಸ್‌ ತಂದಿತ್ತು.

ಆದರೆ 1989ರಲ್ಲಿ ರಾಜ್ಯಸಭೆಯಲ್ಲಿ ವಿಪಕ್ಷಗಳು ಅದನ್ನು ನಿರಸನಗೊಳಿಸಿದ್ದವು.  ಅನಂತರ 1993ರಲ್ಲಿ ಲೋಕಸಭೆಯಲ್ಲಿ ಅವು 73ನೇ ಮತ್ತು 74ನೇ ಸಂವಿಧಾನ ತಿದ್ದುಪಡಿಗಳಾಗಿ ಪಾಸಾದವು ಎಂದು ಸೋನಿಯಾ ತಮ್ಮ ಪತ್ರದಲ್ಲಿ ಮಹಿಳಾ ಮೀಸಲಾತಿಯ ಹಿನ್ನೆಲೆಯನ್ನು ವಿವರಿಸಿದ್ದಾರೆ. 

ಪ್ರಕೃತ 543 ಸದಸ್ಯ ಬಲದ ಲೋಕಸಭೆಯಲ್ಲಿ  ಕೇವಲ 62 ಮಹಿಳೆಯರು ಇದ್ದಾರೆ. ನನಗುದಿಗೆ ಬಿದ್ದಿರುವ ಮಹಿಳಾ ಮೀಸಲಾತಿ ಮಸೂದೆಯು ಒಂದೊಮ್ಮೆ ಲೋಕಸಭೆಯಲ್ಲಿ  ಪಾಸಾದರೆ ಸಂಸತ್ತಿನಲ್ಲಿ ಮುಂದೆ 150 ಮಹಿಳಾ ಸದಸ್ಯರು ಇರುವಂತಾಗುತ್ತದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next