Advertisement

Election Campaign; ನಮ್ಮ ದುಡಿಮೆ ನಿಮ್ಮ ಮಕ್ಕಳಿಗಾಗಿ: ಪ್ರಧಾನಿ ಮೋದಿ

01:09 AM May 06, 2024 | Team Udayavani |

ಲಕ್ನೋ: “ಉತ್ತರ ಪ್ರದೇಶ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ ಅವರಿಗಾಗಲೀ, ನನಗಾಗಲೀ ಮಕ್ಕಳಿಲ್ಲ. ನಾವು ಅವಿರತವಾಗಿ ಶ್ರಮಿಸುತ್ತಿರುವುದೆಲ್ಲವೂ ನಿಮ್ಮ ಮಕ್ಕಳಿಗಾಗಿ. ಆದರೆ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಕಾಂಗ್ರೆಸ್‌ ಅಧಿಕಾರ ಬಯಸುತ್ತಿರುವುದು ಅವರ ಮಕ್ಕಳ ಉದ್ಧಾರಕ್ಕಾಗಿ ಮಾತ್ರ’.

Advertisement

– ಹೀಗೆಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್‌ ಯಾದವ್‌ ಅವರ ತವರೂರು ಉತ್ತರ ಪ್ರದೇಶದ ಇಟಾವಾದಲ್ಲೇ ಪ್ರಧಾನಿ ಮೋದಿ ಕಾಂಗ್ರೆಸ್‌ ಮತ್ತು ಎಸ್‌ಪಿ ವಿರುದ್ಧ ಈ ರೀತಿ ವಾಗ್ಧಾಳಿ ನಡೆಸಿದ್ದಾರೆ.

ಇಟವಾದಲ್ಲಿ ರವಿವಾರ ನಡೆದ ಬಿಜೆಪಿ ಚುನಾವಣೆ ಪ್ರಚಾರ ರ್‍ಯಾಲಿಯಲ್ಲಿ ಮಾತನಾಡಿರುವ ಪ್ರಧಾನಿ, “10 ವರ್ಷಗಳ ಸುದೀರ್ಘ‌ ಸೇವೆಯ ಅನಂತರ ಮತ್ತೆ ಈಗ ನಿಮ್ಮ ಆಶೀರ್ವಾದ ಬಯಸುತ್ತಿದ್ದೇನೆ. ನೀವು ನನ್ನ ಶ್ರಮ ಮತ್ತು ಪ್ರಾಮಾಣಿಕತೆ ಎರಡನ್ನೂ ನೋಡಿದ್ದೀರಿ. ನಾನು ಕೇವಲ ಮುಂದಿನ 5 ವರ್ಷಗಳ ಬಗ್ಗೆ ಚಿಂತಿಸಿ ನಿಮ್ಮ ಮುಂದೆ ನಿಂತಿಲ್ಲ. ಮುಂದಿನ 25 ವರ್ಷಗಳ ಹಾದಿಯನ್ನು ಸುಗಮಗೊಳಿಸಲು, ಭವಿಷ್ಯದ ಸಾವಿರ ವರ್ಷಗಳ ವರೆಗೆ ಭಾರತದ ಶಕ್ತಿಯನ್ನು ನೆಲೆಗೊಳಿಸಲು ಬುನಾದಿಯನ್ನು ಹಾಕಿದ್ದೇನೆ. ಏಕೆ ಗೊತ್ತೇ? ಮೋದಿ ಇರಲಿ, ಇಲ್ಲದಿರಲಿ; ಈ ದೇಶ ಇರಬೇಕು ಎಂಬುದೇ ನನ್ನ ಧ್ಯೇಯ ಎಂದಿದ್ದಾರೆ.

ನಿಮಗಾಗಿ ಅಭಿವೃದ್ಧಿ ಕಾರ್ಯ
ಎಸ್‌ಪಿ ಮತ್ತು ಕಾಂಗ್ರೆಸ್‌ ಏನು ಮಾಡಿವೆ ಎಂದು ಮೋದಿ ಪ್ರಶ್ನಿಸಿದರು. ಅವರು ಚುನಾ ವಣೆಗೆ ಸ್ಪರ್ಧಿಸುವುದು ಅವರಿಗಾಗಿ ಮತ್ತು ಅವರ ಮಕ್ಕಳಿಗಾಗಿ ಮಾತ್ರ. ಆದರೆ ನನಗೆ ಯಾರೂ ಇಲ್ಲ, ಸಿಎಂ ಯೋಗಿಗೂ ಇಲ್ಲ. ಆದರೂ ನಾವು ದುಡಿ ಯುತ್ತಿರುವುದು ನಿಮ್ಮ ಮಕ್ಕಳಿಗಾಗಿ. ವಿಕಸಿತ ಭಾರತ ಅನ್ನುವುದು ಕೇವಲ ಪದಗಳಲ್ಲ, ಈ ಪದಗಳಲ್ಲಿ ನಿಮ್ಮ ಮಕ್ಕಳ ಭವಿಷ್ಯ, ಸಮೃದ್ಧ ಜೀವನವೂ ಸೇರಿದೆ ಎಂದಿದ್ದಾರೆ.

ವಂಶಾಡಳಿತದ
ಪದ್ಧತಿ ಮುರಿದೆ
ರಾಜನ ಮಗ ರಾಜನೇ ಆಗಬೇಕು ಎಂಬ ಪದ್ಧತಿಯನ್ನೇ ನಾನು ಮುರಿದು ಒಬ್ಬ ಚಾಯ್‌ವಾಲಾ ಮುಖ್ಯಮಂತ್ರಿ ಸಿಎಂ ಆಗಬಹುದು, ಪ್ರಧಾನಿ ಆಗಬಹುದು ಎಂಬುದನ್ನು ನಿರೂಪಿಸಿದ್ದೇನೆ. ವಂಶಾಡಳಿತದಲ್ಲಿ ಕಾರು, ಬಂಗಲೆಗಳು ಅಧಿಕಾರ, ರಾಜಕೀಯ ಪರಂಪರೆಯ ಕುರುಹು ಆಗಿದೆ. ಆದರೆ ಮೋದಿ ಪರಂಪರೆ ಬಡವರಿಗೆ ಪಕ್ಕಾ ಮನೆ, ಅಕ್ಕ-ತಂಗಿಯರಿಗೆ ಶೌಚಾಲಯ, ದಲಿತರು ಮತ್ತು ಹಿಂದುಳಿದವರಿಗೆ ವಿದ್ಯುತ್‌, ಗ್ಯಾಸ್‌, ನೀರಿನ ಸೌಲಭ್ಯ, ಉಚಿತ ಪಡಿತರ, ಶಿಕ್ಷಣ ನೀತಿ, ಆರೋಗ್ಯ ಸೌಲಭ್ಯ ರೂಪಿಸಿಕೊಡುವುದಾಗಿದೆ. ಮೋದಿಯ ಪರಂಪರೆ ಎಲ್ಲರಿಗಾಗಿ, ಎಲ್ಲರದ್ದೂ ಆಗಿರುವ ಪರಂಪರೆ ಎಂದಿದ್ದಾರೆ.

Advertisement

ಕಾರ್ಯಕರ್ತರಿಗೆ
ಮಣೆ ಹಾಕಿದ್ದೇವೆ: ಮೋದಿ
ಸಮಾಜವಾದಿ ಪಕ್ಷವು ಕುಟುಂಬ ರಾಜ ಕಾರಣಕ್ಕೆ ಮಣೆ ಹಾಕಿದೆ. ಇಡೀ ರಾಜ್ಯದಲ್ಲಿ ಇದು ವರೆಗೆ ತಮ್ಮ ಕುಟುಂಬದ ಹೊರತಾಗಿ ಯಾದವ ಸಮುದಾಯದಿಂದ ಯಾವೊಬ್ಬ ಅಭ್ಯರ್ಥಿಯನ್ನೂ ಪಕ್ಷ ಕಣಕ್ಕಿಳಿಸಿಲ್ಲ. ಆದರೆ ಬಿಜೆಪಿಯಲ್ಲಿ ಕಾರ್ಯ ಕರ್ತನೂ ಕೂಡ ದೊಡ್ಡ ಮಟ್ಟವನ್ನೂ ತಲುಪಬಹು ದಾಗಿದೆ ಎಂದು ಪಿಎಂ ಚಾಟಿ ಬೀಸಿದ್ದಾರೆ.

ಎಸ್‌ಪಿಯವರು ನಿಜವಾಗಲೂ ಯದುವಂಶೀಯರೇ?
ಕಳೆದ ಬಾರಿ ಚುನಾವಣೆ ಸಂದರ್ಭ ಕಾಂಗ್ರೆಸ್‌ನ ರಾಜಕುಮಾರ ದೇವಾಲಯ ಸುತ್ತಿ, ಪವಿತ್ರ ದಾರ ಗಳನ್ನು ಕೈಗೆ ಸುತ್ತಿಕೊಂಡಿದ್ದರು. ಆದರೆ ಈ ಬಾರಿ ಆ ಗಿಮಿಕ್‌ ನಿಂತಿದೆ. ದೇಶದ ಐತಿಹಾಸಿಕ ರಾಮ ಮಂದಿರ ಉದ್ಘಾಟನೆಗೆ ದೇಶವೇ ಸಂತಸ ಪಟ್ಟಿತ್ತು. ಆದರೆ ಅವರು ಆಹ್ವಾನ ನಿರಾಕರಿಸಿದರು. ದ್ವಾರಕೆಯ ಸಮುದ್ರಕ್ಕೆ ತೆರಳಿ ಕೃಷ್ಣನಿಗೆ ನಾನು ನಮಿಸಿದ್ದೂ ರಾಜಕುಮಾರನಿಗೆ ಸಮಸ್ಯೆಯಾಯಿತು. ಅಂಥವ ರೊಂದಿಗೆ ಎಸ್‌ಪಿ ಸ್ನೇಹ ಬೆಳೆಸಿದೆ. ಕೃಷ್ಣನನ್ನು ಪೂಜಿಸಿದ್ದಕ್ಕೂ ಕೊಂಕು ನುಡಿಯುವವರನ್ನು ಸ್ನೇಹಿತರು ಎನ್ನುತ್ತಿರುವ ಎಸ್‌ಪಿಯವರು ನಿಜ ವಾಗಿಯೂ ಯದುವಂಶೀಯರೇ ಎಂದು ನಾನು ಕೇಳಬೇಕಿದೆ ಎಂದು ಮೋದಿ ಆಕ್ಷೇಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next