Advertisement

ದೇಶಕ್ಕೆ ಸೋನಿಯಾ ಗಾಂಧಿ ಸೇವೆ ಅವಶ್ಯ: ಪೂಜಾರಿ

12:11 PM Dec 11, 2017 | Team Udayavani |

ಮಹಾನಗರ: ಸೋನಿಯಾ ಗಾಂಧಿ ಬಡವರು, ದುರ್ಬಲವರ್ಗದ ಬಗ್ಗೆ ಆಪಾರ ಪ್ರೀತಿ ಹೊಂದಿದ್ದಾರೆ. ಅವರ ಸೇವೆ ದೇಶಕ್ಕೆ ಅಗತ್ಯವಿದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್‌ ನಾಯಕ ಬಿ.ಜನಾರ್ದನ ಪೂಜಾರಿ ಹೇಳಿದರು. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹುಟ್ಟುಹಬ್ಬದ ಪ್ರಯುಕ್ತ ರವಿವಾರ ನಗರದ ಅನಾಥಾಶ್ರಮ, ವೃದ್ಧಾಶ್ರಮಗಳು ಹಾಗೂ ವಿಶೇಷ ಶಾಲೆಯ ಮಕ್ಕಳಿಗೆ ಹಣ್ಣುಹಂಪಲು ವಿತರಿಸಿ ಮಾತನಾಡಿದರು.

Advertisement

ನೆಹರೂ ಕುಟುಂಬ ಎಲ್ಲ ಜಾತಿ, ಧರ್ಮದವರನ್ನು ಪ್ರೀತಿಸುತ್ತಾ ಬಂದಿದೆ ಮತ್ತು ಅವರ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಇಂದಿರಾ ಗಾಂಧಿ ಗರೀಬಿ ಹಟಾವೋ, 20 ಅಂಶಗಳ ಕಾರ್ಯಕ್ರಮ ಸಹಿತ ಬಡವರ ಉದ್ಧಾರಕ್ಕೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದರು. ನನ್ನನ್ನು ವಿತ್ತ ಸಚಿವನನ್ನಾಗಿ ಮಾಡಿ ಆ ಯೋಜನೆಗಳನ್ನು ಅನುಷ್ಠಾನಗೊಳಿಸುವ ಹೊಣೆಗಾರಿಕೆ ವಹಿಸಿದ್ದರು. ಇದನ್ನು ಸಮರ್ಪಣಾ ಭಾವದಿಂದ ಮಾಡಿದ ಆತ್ಮತೃಪ್ತಿ ನನಗಿದೆ ಎಂದರು. ದೇಶದ ಎಲ್ಲಾ ಜನಪ್ರತಿನಿಧಿಗಳು, ಸರಕಾರಗಳು ಬಡವರು, ದುರ್ಬಲರ ಪರವಾಗಿ ಕಾಳಜಿ ವಹಿಸಿ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು. ಅದು ಅವರಿಗೆ ಸಾರ್ಥಕತೆ ತಂದುಕೊಡುತ್ತದೆ ಎಂದರು.

ಬಂದರಿನಲ್ಲಿರುವ ಯತಿಂಖಾನ, ಜಪ್ಪು ಸೈಂಟ್‌ ಜೋಸೆಫ್‌ ಪ್ರಶಾಂತ್‌ ನಿವಾಸ, ಸೈಂಟ್‌ ಆ್ಯಂಟನಿ ಆಶ್ರಮ, ಅಸೈಗೋಳಿಯ ಅಭಯಾಶ್ರಯ ಹಾಗೂ ಶಕ್ತಿನಗರದ ಸಾನಿಧ್ಯ ವಿಶೇಷ ಮಕ್ಕಳ ಶಾಲೆಗೆ ಭೇಟಿ ಹಣ್ಣು ಹಂಪಲು ವಿತರಿಸಲಾಯಿತು.

ಶಾಸಕ ಜೆ.ಆರ್‌. ಲೋಬೋ, ಮಾಜಿ ಶಾಸಕ ವಿಜಯ ಕುಮಾರ್‌ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಳ್ಳಿಗೆ ತಾರಾನಾಥ ಶೆಟ್ಟಿ, ಮಾಜಿ ಮೇಯರ್‌ಗಳಾದ ಜೇಸಿಂತಾ ವಿಜಯ ಆಲ್ಫ್ರೆಡ್, ಕೆ.ಅಶ್ರಫ್‌, ಮಾಜಿ ಉಪಮೇಯರ್‌ಗಳಾದ ಲ್ಯಾನ್ಸ್‌ ಲಾಟ್‌ ಪಿಂಟೋ, ಪುರುಷೋತ್ತಮ ಚಿತ್ರಾಪುರ, ಕಾರ್ಪೊರೇಟರ್‌ಗಳಾದ ಅಪ್ಪಿ, ಪ್ರತಿಭಾ ಕುಳಾಯಿ, ಶೈಲಜಾ, ಕೆಎಸ್‌ಆರ್‌ಟಿಸಿ ನಿಗಮದ ನಿರ್ದೇಶಕ ಟಿ.ಕೆ.ಸುಧೀರ್‌, ಮುಖಂಡರಾದ ವಿಶ್ವಾಸ್‌ ದಾಸ್‌, ಮೋಹನ ಶೆಟ್ಟಿ, ಕರುಣಾಕರ ಶೆಟ್ಟಿ, ರಮಾನಂದ ಪೂಜಾರಿ, ನೀರಜ್‌ ಪಾಲ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next