ಉದಯಪುರ: ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯು ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಸಿ, ಮಹಾತ್ಮ ಗಾಂಧಿಯನ್ನು ಕೊಂದರವರನ್ನು ವೈಭವೀಕರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಚಿಂತನ ಶಿಬಿರದಲ್ಲಿ ಮಾತನಾಡಿದ ಅವರು, “ಪ್ರಧಾನಿ ಮೋದಿ ಮತ್ತು ಅವರ ಸಹೋದ್ಯೋಗಿಗಳ ‘ಗರಿಷ್ಠ ಆಡಳಿತ, ಕನಿಷ್ಠ ಸರ್ಕಾರ’ ಎಂಬ ಘೋಷಣೆಯ ಅರ್ಥವೇನೆಂಬುದು ಈಗ ಸ್ಪಷ್ಟವಾಗಿದೆ” ಎಂದರು.
ಇದರರ್ಥ “ದೇಶವನ್ನು ಧ್ರುವೀಕರಣದ ಶಾಶ್ವತ ಸ್ಥಿತಿಯಲ್ಲಿ ಇಡುವುದು, ನಿರಂತರ ಭಯ ಮತ್ತು ಅಭದ್ರತೆಯ ಸ್ಥಿತಿಯಲ್ಲಿ ಬದುಕಲು ಜನರನ್ನು ಒತ್ತಾಯಿಸುವುದು, ನಮ್ಮ ಸಮಾಜದ ಅವಿಭಾಜ್ಯ ಅಂಗವಾಗಿರುವ ಮತ್ತು ನಮ್ಮ ಗಣರಾಜ್ಯದ ಅಲ್ಪಸಂಖ್ಯಾತರನ್ನು ಬಲಿಪಶು ಮಾಡುವುದು ಮತ್ತು ಆಗಾಗ್ಗೆ ಕ್ರೂರವಾಗಿ ಹಿಂಸೆಗೆ ಗುರಿಪಡಿಸುವುದಾಗಿದೆ” ಎಂದು ಅವರು ಹೇಳಿದರು.
ಇದನ್ನೂ ಓದಿ:ಅಂತರ್ಧಾನ ಸ್ಥಿತಿಯಲ್ಲಿದ್ದ ರಮ್ಯಾ ಹಠಾತ್ ಪ್ರತ್ಯಕ್ಷಕ್ಕೆ ಮೀರ್ ಸಾದಿಕ್ ಕೈವಾಡ: ಬಿಜೆಪಿ
ಬಿಜೆಪಿ, ಆರೆಸ್ಸೆಸ್ ಮತ್ತು ಅದರ ಅಂಗಸಂಸ್ಥೆಗಳ ನೀತಿಗಳ ಪರಿಣಾಮವಾಗಿ ದೇಶ ಎದುರಿಸುತ್ತಿರುವ ಹಲವಾರು ಸವಾಲುಗಳನ್ನು ನಮ್ಮ ನಡುವೆ ಚರ್ಚಿಸಲು ‘ನವ ಸಂಕಲ್ಪ ಚಿಂತನ ಶಿಬಿರ’ ನಮಗೆ ಅವಕಾಶವನ್ನು ನೀಡುತ್ತದೆ ಎಂದು ಸೋನಿಯಾ ಗಾಂಧಿ ಹೇಳಿದರು