ಹೊಸದಿಲ್ಲಿ: ಇಲ್ಲಿನ ಗುರುಗ್ರಾಮದ ಅಪಾರ್ಟ್ ಮೆಂಟ್ ಒಂದರಲ್ಲಿ ಮಾಜಿ ಏಮ್ಸ್ ವೈದ್ಯೆಯೊಬ್ಬರು ಶವವಾಗಿ ಪತ್ತೆಯಾದ ಘಟನೆ ನಡೆದಿದೆ.
ಮೃತಪಟ್ಟೆ ವೈದ್ಯಯನ್ನು ಶೋನಮ್ ಮೋತಿಸ್ ಎಂದು ಗುರುತಿಸಲಾಗಿದೆ.
ಸೋಮವಾರ ಬೆಳಿಗ್ಗೆ ಶೋನಮ್ ಗೆ ಕರೆ ಮಾಡಿದ ಆಕೆಯ ತಂದೆ ಓಕಾರ್ ಲಾಲ್ ಆಕೆ ಕರೆ ಸ್ವೀಕರಿಸದ ಕಾರಣ ಅಪಾರ್ಟ್ ಮೆಂಟ್ ಗೆ ಹುಡುಕಿ ಬಂದಿದ್ದರು. ಆದರೆ ಅಲ್ಲಿ ಅವರಿಗೆ ಮಗಳ ಮೃತದೇಹ ಎದುರಾಗಿತ್ತು.
ಮಾಧ್ಯಮಗಳಿಗೆ ಮಾಹಿತಿ ನೀಡಿದ ಓಂಕಾರ್ ಲಾಲ್, ತನ್ನ ಅಳಿಯ ಶಿಖರ್ ಮೋರ್ ಮಾದಕ ವ್ಯವಸಿಯಾಗಿದ್ದು, ಪತ್ನಿ ಶೋನಮ್ ಗೂ ಒತ್ತಾಯಿಸುತ್ತಿದ್ದ. ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿ ನಡುವೆ ವರದಕ್ಷಿಣೆ ವಿಚಾರವಾಗಿ ಜಗಳವಾಗುತ್ತಿತ್ತು. ಒಮ್ಮೆ ಶಿಖರ್ ಪತ್ನಿಯ ಕಾಲು ಮುರಿದಿದ್ದ, ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದ ಎಂದು ಆರೋಪಿಸಿದ್ದಾರೆ.
ಈ ಹಿಂದೆ ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದ ಶೊನಮ್, ನಂತರ ಅಲ್ಲಿ ರಾಜೀನಾಮೆ ನೀಡಿ ಗುರುಗ್ರಾಮದ ಆಸ್ಪತ್ರೆ ಸೇರಿದ್ದರು. ಆಕೆ ಗುರುಗ್ರಾಮದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.