Advertisement

ಸೋನಂ –ಅಹುಜಾ ವಿವಾಹ

08:20 AM May 09, 2018 | Team Udayavani |

ಮುಂಬಯಿ: ಬಾಲಿವುಡ್‌ ನಟಿ ಸೋನಂ ಕಪೂರ್‌ ಮತ್ತು ಅವರ ಬಹುದಿನಗಳ ಪ್ರಿಯಕರ, ದಿಲ್ಲಿ ಮೂಲದ ಉದ್ಯಮಿ ಆನಂದ್‌ ಅಹುಜಾ ಮದುವೆ ಇಲ್ಲಿನ ಬಾಂದ್ರಾದಲ್ಲಿ ಪಂಜಾಬಿ ಸಂಪ್ರದಾಯದಂತೆ ಮಂಗಳವಾರ ನೆರವೇರಿತು. ನೆಂಟರು, ಆಪ್ತ ಸ್ನೇಹಿತರಿಗೆ ಮಾತ್ರ ಆಮಂತ್ರಣವಿತ್ತು. ಹಿಂದಿ ಚಿತ್ರರಂಗದ ಗಣ್ಯರೂ ಮದುವೆಯಲ್ಲಿ ಪಾಲ್ಗೊಂಡಿದ್ದರು. ಸೋನಂ ಚಿನ್ನದ ಬಣ್ಣದ ಅಂಚಿರುವ ಕೆಂಪು ಲೆಹೆಂಗಾದಲ್ಲಿ ಕಂಗೊಳಿಸಿದರೆ, ಅಹುಜಾ ಕೆನೆ ಬಣ್ಣದ ಬಂಧ್‌ಗಾಲ ತೊಟ್ಟಿದ್ದರು. ಸಂಜೆ ಉದ್ಯಮದ ಇತರ ಸ್ನೇಹಿತರು ಮತ್ತು ಕುಟುಂಬದವರಿಗಾಗಿ ಮುಂಬೈನ ಹೊಟೇಲ್‌ನಲ್ಲಿ ಆರತಕ್ಷತೆ ಏರ್ಪಡಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next