Advertisement

Update: ಸೊನಾಲಿ ಪೋಗಟ್ ಸಾವಿನ ಪ್ರಕರಣ; ಗೋವಾದಲ್ಲಿ ಇಬ್ಬರು ಸಹಾಯಕರು ವಶಕ್ಕೆ

10:58 AM Aug 26, 2022 | Team Udayavani |

ಪಣಜಿ:ಹರ್ಯಾಣದ ಬಿಜೆಪಿ ನಾಯಕಿ ಟಿಕ್ ಟಾಕ್ ಸ್ಟಾರ್ ಸೊನಾಲಿ ಪೋಗಟ್ (42ವರ್ಷ) ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸೊನಾಲಿಯ ಇಬ್ಬರು ಸಹಾಯಕರನ್ನು ಗೋವಾ ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಪ.ಪಂ ಅಧಿಕಾರಿಗಳ ವೈಫಲ್ಯ ; ಹರಿಯುತ್ತಿರುವ ನೀರಿನಲ್ಲೇ ಪೌರಕಾರ್ಮಿಕನಿಂದ ಕಸ ವಿಲೇವಾರಿ

ಸೊನಾಲಿ ದೇಹದಲ್ಲಿ ಹಲವಾರು ಗಾಯದ ಗುರುತುಗಳಿವೆ ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಲ್ಲೇಖಗೊಂಡ ಬೆನ್ನಲ್ಲೇ ಗೋವಾ ಪೊಲೀಸರು ಆಕೆಯ ಇಬ್ಬರು ಸಹಚರರ ಮೇಲೆ ಕೊಲೆ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದಿರುವುದಾಗಿ ವರದಿ ವಿವರಿಸಿದೆ.

ಸೊನಾಲಿ ಪೋಗಟ್ ಸಾವಿನ ಪ್ರಕರಣದಲ್ಲಿ ಆರೋಪಿಗಳಾದ ಸುಧೀರ್ ಸಾಗ್ವಾನ್ ಮತ್ತು ಸುಖ್ ವಿಂದರ್ ವಾಸಿಯನ್ನು ವಶಕ್ಕೆ ಪಡೆಯಲಾಗಿದೆ. ಪೋಗಟ್ ಅವರ ಸಹೋದರ ರಿಂಕು ಧಾಕಾ ಬುಧವಾರ ಅಂಜುನಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಗಳಾದ ಸಾಗ್ವಾನ್ ಮತ್ತು ವಾಸಿ ಹೆಸರನ್ನು ಉಲ್ಲೇಖಿಸಿದ್ದರು.

ಆಗಸ್ಟ್ 22ರಂದು ಗೋವಾಕ್ಕೆ ಪೋಗಟ್ ಆಗಮಿಸಿದ್ದ ವೇಳೆ ಸಾಗ್ವಾನ್ ಮತ್ತು ವಾಸಿ ಆಕೆಯ ಜತೆಗಿದ್ದರು. ಆಗಸ್ಟ್ 23ರಂದು ಪೋಗಟ್ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದರು. ಆದರೆ ಆಕೆಯ ಸಾವಿನ ಬಗ್ಗೆ ಮನೆಯವರು ಸಂಶಯ ವ್ಯಕ್ತಪಡಿಸಿ, ಇದೊಂದು ಕೊಲೆ ಎಂದು ಆರೋಪಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next