Advertisement

ಹತ್ಯೆ ಪ್ರಕರಣ :ಸೋನಾಲಿ ಪೋಗಟ್ ಹಿಸಾರ್ ನಿವಾಸದಲ್ಲಿ ಪರಿಶೀಲನೆ

01:52 PM Sep 01, 2022 | Team Udayavani |

ಹಿಸಾರ್ : ಬಿಜೆಪಿ ನಾಯಕಿ, ಟಿಕ್ ಟಾಕ್ ಸ್ಟಾರ್ ಸೋನಾಲಿ ಪೋಗಟ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಗೋವಾ ಪೊಲೀಸರ ತಂಡವು ತನಿಖೆಯ ಭಾಗವಾಗಿ ಹರಿಯಾಣದ ಹಿಸಾರ್‌ನಲ್ಲಿರುವ ಸೋನಾಲಿ ಫೋಗಟ್ ಅವರ ನಿವಾಸಕ್ಕೆ ಗುರುವಾರ ತೆರಳಿ ಪರಿಶೀಲನೆ ನಡೆಸಿದೆ.

Advertisement

”ತನಿಖೆ ಹಾದಿಯಲ್ಲಿದೆ. ನಾವು ಹರ್ಯಾಣಕ್ಕೆ ಹೋದ ವಿಶೇಷ ತಂಡವನ್ನು ರಚಿಸಿದ್ದೇವೆ. ಹರಿಯಾಣದಲ್ಲಿ ತಂಡವು ತನಿಖೆ ನಡೆಸುತ್ತಿದ್ದು, ಇದುವರೆಗೆ ಫಲಪ್ರದವಾಗಿದ್ದು, ನಿರ್ಣಾಯಕ ಸಂಗತಿಗಳು ಬೆಳಕಿಗೆ ಬಂದಿದ್ದು, ಅವರಿಂದ ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ” ಎಂದು ಉತ್ತರ ಗೋವಾ ಎಸ್ಪಿ ಶೋಬಿತ್ ಸಕ್ಸೇನಾ ತಿಳಿಸಿದ್ದಾರೆ.

ಅಂಜುನಾದ ಕರ್ಲೀಸ್ ರೆಸ್ಟೊರೆಂಟ್‌ನಲ್ಲಿ ಕೆಲವು ಡ್ರಗ್ಸ್ ಇದ್ದ ಒಂದು ಬಾಟಲಿಯನ್ನು ನಾವು ವಶಪಡಿಸಿಕೊಂಡಿದ್ದೇವೆ. ಡಿಎಂ ಸೂಕ್ತ ಕ್ರಮ ಕೈಗೊಂಡಿದ್ದಾರೆ. ನಾವು ಎಲ್ಲಾ ಕೋನಗಳಿಂದ ಎಲ್ಲಾ ರೀತಿಯ ಪಿತೂರಿಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ ಎಂದು ಶೋಬಿತ್ ಸಕ್ಸೇನಾ ತಿಳಿಸಿದ್ದಾರೆ.

”ಅವರು ತನಿಖೆಗಾಗಿ ಮಾತ್ರ ಇಲ್ಲಿಗೆ ಬಂದಿದ್ದಾರೆ. ಕೊಲೆಯ ಮುಖ್ಯ ಉದ್ದೇಶ ಇನ್ನೂ ಬೆಳಕಿಗೆ ಬಂದಿಲ್ಲ, ರಾಜಕೀಯ ಪಿತೂರಿಯ ಒಂದು ಸಾಧ್ಯತೆ ಇರಬಹುದು. ಗೋವಾ ಪೊಲೀಸರು ಏನನ್ನೂ ಹೇಳಿಲ್ಲ. ಸಮಯ ಕಳೆಯುವುದು ಔಪಚಾರಿಕವಾಗಿ ತೋರುತ್ತದೆ” ಎಂದು ಸೋನಾಲಿ ಫೋಗಟ್ ಅವರ ಸಹೋದರ ರಿಂಕು ಢಾಕಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next