Advertisement

“ರಾಬರ್ಟ್‌’ತಂಡದಲ್ಲಿ ಸೋನಾಲ್‌

09:53 AM Jan 01, 2020 | Lakshmi GovindaRaj |

ದರ್ಶನ್‌ ನಾಯಕರಾಗಿರುವ “ರಾಬರ್ಟ್‌’ ಚಿತ್ರಕ್ಕೆ ದಿನದಿಂದ ದಿನಕ್ಕೆ ಹೊಸ ಕಲಾವಿದರು ಸೇರಿಕೊಳ್ಳುತ್ತಲೇ ಇದ್ದಾರೆ. ಈಗಾಗಲೇ ವಿನೋದ್‌ ಪ್ರಭಾಕರ್‌, ತೇಜಸ್ವಿನಿ ಸೇರಿರುವ ಸುದ್ದಿಯನ್ನು ನೀವು ಓದಿರಬಹುದು. ಈಗ ಸೋನಾಲ್‌ ಮೊಂತೆರೋ ಸರದಿ. ಯಾವ ಸೋನಾಲ್‌ ಮೊಂತೆರೋ ಎಂದರೆ “ಪಂಚತಂತ್ರ’ ಸಿನಿಮಾ ಬಗ್ಗೆ ಹೇಳಬೇಕು. ಯೋಗರಾಜ್‌ ಭಟ್‌ ನಿರ್ದೇಶನದ “ಪಂಚತಂತ್ರ’ ಚಿತ್ರದಲ್ಲಿ ಬೋಲ್ಡ್‌ ಆಗಿ ನಟಿಸಿದ ಸೋನಾಲ್‌ಗೆ “ರಾಬರ್ಟ್‌’ ಚಿತ್ರದಿಂದಲೂ ಅವಕಾಶ ಸಿಕ್ಕಿದೆ.

Advertisement

ಹಾಗಂತ ನಾಯಕಿಯಾಗಿಯಲ್ಲ, ಪ್ರಮುಖ ಪಾತ್ರವೊಂದರದಲ್ಲಿ. ಈಗಾಗಲೇ ಸೋನಾಲ್‌ ನಟಿಸಿರುವ ದೃಶ್ಯಗಳನ್ನು ನಿರ್ದೇಶಕ ತರುಣ್‌ ಸುಧೀರ್‌ ಚಿತ್ರೀಕರಿಸಿಕೊಂಡಿದ್ದಾರೆ. ಸಿನಿಮಾ ಆರಂಭವಾದ ಕೆಲವೇ ದಿನಗಳಲ್ಲಿ ಸೋನಾಲ್‌ ಅವರ ದೃಶ್ಯ ಚಿತ್ರೀಕರಿಸಿಕೊಂಡಿರುವ ತರುಣ್‌, ಈ ವಿಷಯವನ್ನು ಈಗಲೇ ಎಲ್ಲೂ ಹಂಚಿಕೊಳ್ಳಬೇಡಿ ಎಂದಿದ್ದರಂತೆ. ಅದೇ ಕಾರಣದಿಂದ ಸೋನಾಲ್‌ ಆ ಬಗ್ಗೆ ಮಾತನಾಡಿರಲಿಲ್ಲ.

ಈಗ “ರಾಬರ್ಟ್‌’ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ಬೆಂಗಳೂರು, ವಾರಾಣಾಸಿ ಸೇರಿದಂತೆ ಹಲವು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿಕ್ಕದಲ್ಲಿ ಸೋನಾಲ್‌ ಅವರ ಪಾತ್ರಕ್ಕೆ ಪ್ರಾಮುಖ್ಯತೆ ಇದೆಯಂತೆ. ಮಂಗಳೂರು ಮೂಲದ ಸೋನಾಲ್‌ ತುಳು ಸೇರಿದಂತೆ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಉಪೇಂದ್ರ ನಾಯಕರಾಗಿರುವ “ಬುದ್ಧಿವಂತ-2′ ಚಿತ್ರಕ್ಕೂ ಸೋನಾಲ್‌ ನಾಯಕಿ.

Advertisement

Udayavani is now on Telegram. Click here to join our channel and stay updated with the latest news.

Next