Advertisement

Rumoured ; ಜಹೀರ್ ಇಕ್ಬಾಲ್ ಜತೆ ಕಾಣಿಸಿಕೊಂಡ ನಟಿ ಸೋನಾಕ್ಷಿ ಸಿನ್ಹಾ: ಅಫೇರ್ ಬಗ್ಗೆ ಚರ್ಚೆ

04:30 PM Sep 04, 2023 | Team Udayavani |

ಮುಂಬಯಿ: ನಟಿ ಸೋನಾಕ್ಷಿ ಸಿನ್ಹಾ  ನಟ ಜಹೀರ್ ಇಕ್ಬಾಲ್ ಅವರೊಂದಿಗೆ ರೋಮ್ಯಾಂಟಿಕ್ ಆಗಿ ತಡರಾತ್ರಿ ಔತಣಕೂಟವೊಂದರಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ. ಅಫೇರ್ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಇಬ್ಬರು ಜತೆಯಾಗಿ ಕಾಣಿಸಿಕೊಂಡಿದ್ದಾರೆ.

Advertisement

‘ದಿ ನೋಟ್ ಬುಕ್ ‘ಚಿತ್ರದ ನಟ ಜಹೀರ್ ಇಕ್ಬಾಲ್ ಅವರೊಂದಿಗೆ ಪ್ರೇಮ ಸಂಬಂಧ ಹೊಂದಿರುವ ವಿಚಾರಕ್ಕಾಗಿ ಸೋನಾಕ್ಷಿ ಇತ್ತೀಚಿಗೆ ಸುದ್ದಿಯಾಗುತ್ತಿದ್ದಾರೆ.

ಜಹೀರ್- ಸೋನಾಕ್ಷಿ ಜೋಡಿ ರೋಮ್ಯಾಂಟಿಕ್ ಆಗಿ ಕೈ-ಕೈ ಹಿಡಿದುಕೊಂಡು ಸುತ್ತಾಡಿದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ತಾಣದಲ್ಲಿ ವ್ಯಾಪಕವಾಗಿ ಹರಿದಾಡಿ ಬಾಲಿವುಡ್ ರಂಗದ ಬಿಸಿ ಸುದ್ದಿಯಾಗಿದೆ.

ಸೋನಾಕ್ಷಿ ಮತ್ತು ಜಹೀರ್ ಡಬಲ್ ಎಕ್ಸ್ ಎಲ್ ಎಂಬ (Double XL)ಚಿತ್ರದಲ್ಲಿ ಜತೆಯಾಗಿ ನಟಿಸಿದ್ದರು. ಇಬ್ಬರ ಪ್ರೇಮ ಸಂಬಂಧ ಬಹಿರಂಗವಾಗುವ ಮುನ್ನ ಬ್ಲಾಕ್ ಬಸ್ಟರ್ ಎಂಬ ಹಾಡೊಂದರಲ್ಲಿಯೂ ಜತೆಯಾಗಿ ಕಾಣಿಸಿಕೊಂಡಿದ್ದರು.

36 ರ ಹರೆಯದ ಸೋನಾಕ್ಷಿ ಸಿನ್ಹಾ ಅವರು ಸಂಜಯ್ ಲೀಲಾ ಬನ್ಸಾಲಿ ಅವರ ಮುಂಬರಲಿರುವ ವೆಬ್ ಸೀರೀಸ್ ‘ಹೀರಾಮಂಡಿ’ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಾತ್ರವಲ್ಲದೆ ‘ಕಾಕುಡ’ ಎಂಬ ಹಾರರ್-ಕಾಮಿಡಿ ಚಲನಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ರಿತೇಶ್ ದೇಶಮುಖ್ ಮತ್ತು ಸಾಕಿಬ್ ಸಲೀಮ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ನಟಿಸುತ್ತಿರುವ ‘ಬಡೇ ಮಿಯಾನ್ ಚೋಟೆ ಮಿಯಾನ್’ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ.

Advertisement

33 ರ ಹರೆಯದ ಜಹೀರ್ ಇಕ್ಬಾಲ್ ರತಾನ್ಸಿ ಉದ್ಯಮಿಯೂ ಆಗಿದ್ದು ‘ನೋಟ್ ಬುಕ್’ಚಿತ್ರದ ಕಬೀರ್ ಪಾತ್ರದ ಮೂಲಕ ಬಾಲಿವುಡ್ ನಲ್ಲಿ ಮುನ್ನೆಲೆಗೆ ಬಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next