Advertisement

BʼTown: ಪ್ರಿಯಕರ ಜಹೀರ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾದ ಸೋನಾಕ್ಷಿ ಸಿನ್ಹಾ

10:59 AM Jun 10, 2024 | Team Udayavani |

ಮುಂಬಯಿ: ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ತನ್ನ ದೀರ್ಘಕಾಲದ ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ದರಾಗಿದ್ದಾರೆ.

Advertisement

ಕಳೆದ ಕೆಲ ಸಮಯದಿಂದ ಸೋನಾಕ್ಷಿ ನಟ ಜಹೀರ್ ಇಕ್ಬಾಲ್ ಅವರೊಂದಿಗೆ ಪ್ರೀತಿಯ ಬಂಧದಲ್ಲಿದ್ದಾರೆ. ಜೊತೆಯಾಗಿ ಅನೇಕ ಸೋಶಿಯಲ್‌ ಪೋಸ್ಟ್‌ ಗಳನ್ನು ಇಬ್ಬರು ಹಂಚಿಕೊಂಡಿದ್ದಾರೆ. ಪಾರ್ಟಿಗಳಲ್ಲಿ ಭಾಗಿಯಾಗಿದ್ದರೂ ಎಲ್ಲೂ ಕೂಡ ತನ್ನ ಪ್ರೀತಿಯ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿಲ್ಲ.

ಇತ್ತೀಚೆಗಷ್ಟೇ ಸೋನಾಕ್ಷಿ ಹುಟ್ಟುಹಬ್ಬಕ್ಕೆ ಜಹೀರ್‌ ಮುದ್ದಾದ ಫೋಟೋಗಳ್ಳುಳ ಪೋಸ್ಟ್‌ ಹಾಕಿ ಪ್ರಿಯತಮೆಗೆ ವಿಶ್‌ ಮಾಡಿದ್ದರು. ಇದೀಗ ಇಬ್ಬರು ದಾಂಪತ್ಯಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿಯೊಂದು ಹೊರಬಿದ್ದಿದೆ.

ಜೂನ್‌.23 ರಂದು ಕೆಲವೇ ಕೆಲ ಸಂಬಂಧಿಕರು ಹಾಗೂ ಗೆಳೆಯರ ಸಮ್ಮುಖದಲ್ಲಿ ಸೋನಾಕ್ಷಿ – ಜಹೀರ್‌ ವಿವಾಹವಾಗಲಿದ್ದಾರೆ ಎಂದು ʼಇಂಡಿಯಾ ಟುಡೇʼ ವರದಿ ಮಾಡಿದೆ.

ಅವರ ಆಪ್ತರು ಮತ್ತು ಕುಟುಂಬ ಸದಸ್ಯರನ್ನು ಹೊರತುಪಡಿಸಿ, ʼಹೀರಾಮಂಡಿʼಯ ಸಂಪೂರ್ಣ ಚಿತ್ರತಂಡವನ್ನು ಮದುವೆಗೆ ಆಹ್ವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ನಟ ಜಹೀರ್‌ 2019 ರಲ್ಲಿ ʼನೋಟ್‌ ಬುಕ್‌ʼ ಸಿನಿಮಾದ ಮೂಲಕ ಬಿಟೌನ್‌ ಗೆ ಎಂಟ್ರಿ ಆಗಿದ್ದರು. ಈ ಸಿನಿಮಾವನ್ನು ಸಲ್ಮಾನ್‌ ಖಾನ್‌ ನಿರ್ಮಾಣ ಮಾಡಿದ್ದರು. ಸಲ್ಮಾನ್‌ ಖಾನ್‌ ಮೂಲಕ ಜಹೀರ್‌ ಅವರನ್ನು ಸೋನಾಕ್ಷಿ ಭೇಟಿ ಆಗಿದ್ದರು. ಈ ಭೇಟಿ ಆತ್ಮೀಯತೆಗೆ ತಿರುಗಿ ಅಲ್ಲಿಂದ ಪ್ರೇಮ ಬಂಧಕ್ಕೆ ತಿರುಗಿತು.

ಜಹೀರ್‌ ಹಾಗೂ ಸೋನಾಕ್ಷಿ 2022 ರಲ್ಲಿ ಬಂದ ʼಡಬಲ್‌ ಎಕ್ಸ್‌ ಎಲ್‌ʼ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು.

ಈ ಹಿಂದೆ ನಟ ಜಹೀರ್‌ ನಟಿ ದೀಕ್ಷಾ ಸೇಠ್ ಹಾಗೂ ಸನಾ ಸಯೀದ್ ಅವರೊಂದಿಗೆ ಡೇಟಿಂಗ್ ನಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next