Advertisement

ಸಲ್ಮಾನ್ ಖಾನ್ ಜತೆಗಿನ ವೈರಲ್ ಫೋಟೋ: ಮೌನ ಮುರಿದ ಸೋನಾಕ್ಷಿ ಸಿನ್ಹಾ

12:54 PM Mar 05, 2022 | Team Udayavani |

ಮುಂಬಯಿ : ಬಾಲಿವುಡ್ ನಟ ಸಲ್ಮಾನ್ ಖಾನ್ ಜತೆಗಿನ ಫೋಟೋ ಶಾಪ್ ಮಾಡಿದ ಮದುವೆಯ ವೈರಲ್ ಫೋಟೋ ಕುರಿತು ಸೋನಾಕ್ಷಿ ಸಿನ್ಹಾ ಮೌನ ಮುರಿದಿದ್ದಾರೆ.

Advertisement

ಇತ್ತೀಚೆಗೆ ಸಲ್ಮಾನ್ ಖಾನ್ ಮತ್ತು ಸೋನಾಕ್ಷಿ ಸಿನ್ಹಾ ರಹಸ್ಯವಾಗಿ ಮದುವೆಯಾಗುತ್ತಿದ್ದಾರೆ ಎಂದು ಫೋಟೋವೊಂದು ವೈರಲ್ ಆಗಿತ್ತು. ಅದು ಸ್ಪಷ್ಟವಾಗಿ ನಕಲಿ ಮತ್ತು ಹೆಚ್ಚು ಫೋಟೋಶಾಪ್ ಮಾಡಲಾಗಿದೆ ಎಂದು ಇಂಟರ್ನೆಟ್ ಬಳಕೆದಾರರು ತ್ವರಿತವಾಗಿ ಪ್ರತಿಕ್ರಿಯಿಸಿದ್ದರು. ಸಿನ್ಹಾ ಈಗ ಫೋಟೋವನ್ನು ಪೋಸ್ಟ್ ಮಾಡಿದ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕಾಮೆಂಟ್ ಬರೆಯುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಸೋನಾಕ್ಷಿ ಸಿನ್ಹಾ, “ನಿಜವಾದ ಮತ್ತು ಮಾರ್ಫ್ ಮಾಡಿದ ಚಿತ್ರಗಳ ನಡುವಿನ ವ್ಯತ್ಯಾಸವನ್ನು ನೀವು ತಿಳಿಯಲು ಸಾಧ್ಯವಿಲ್ಲವೇ??” ಎಂದು ನಗುವ ಎಮೋಜಿಗಳನ್ನೂ ಸೇರಿಸಿದ್ದಾರೆ.

ಫೋಟೋದಲ್ಲಿ ಸಲ್ಮಾನ್ ಅವರು ಸೋನಾಕ್ಷಿ ಬೆರಳಿಗೆ ಉಂಗುರ ತೊಡುವಂತೆ ಕಾಣಿಸಲಾಗಿತ್ತು. ಸೋನಾಕ್ಷಿ ಸಿನ್ಹಾ ಕೆಂಪು ಸೀರೆಯಲ್ಲಿ ಭಾರೀ ಆಭರಣಗಳು ಮತ್ತು ಸಿಂಧೂರವನ್ನು ಧರಿಸಿದ್ದು, ಅವರು ವಧುವಿನಂತೆ ಕಾಣುತ್ತಿದ್ದರು.. ಆದರೆ, ಸೂಕ್ಷ್ಮವಾಗಿ ನೋಡಿದಾಗ ಚಿತ್ರವು ಫೋಟೋಶಾಪ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next