Advertisement

ಪಾಕ್‌ನ ಮಾಜಿ ಕ್ರಿಕೆಟಿಗನ ಪುತ್ರ ಆತ್ಮಹತ್ಯೆ

06:30 AM Feb 21, 2018 | Team Udayavani |

ಇಸ್ಲಾಮಾಬಾದ್‌: ಪಾಕಿಸ್ಥಾನದ ಮಾಜಿ ಕ್ರಿಕೆಟಿಗ ಅಮೀರ್‌ ಹನೀಫ್ ಪುತ್ರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಅಮೀರ್‌ ಅವರ ಪುತ್ರನ ಹೆಸರು ಮೊಹಮ್ಮದ್‌ ಝರಿಯಾಬ್‌. 19 ವರ್ಷ ವಯೋಮಿತಿಯೊಳಗಿನ ತಂಡದಲ್ಲಿ ಈತನಿಗೆ ಸ್ಥಾನ ಸಿಗದಿರುವ ಬೇಸರದಿಂದ ಈತ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಜನವರಿಯಲ್ಲಿ ಲಾಹೋರ್‌ನಲ್ಲಿ ನಡೆದ 19 ವರ್ಷ ವಯೋಮಿತಿಯೊಳಗಿನ ಕೂಟವೊಂದರಲ್ಲಿ ಝರಿಯಾಬ್‌ ಕರಾಚಿ ತಂಡವನ್ನು ಪ್ರತಿನಿಧಿಸಲು ಬಂದಿದ್ದರು. ಈ ವೇಳೆ ಅವರನ್ನು ತಂಡದಲ್ಲಿ ಸ್ಥಾನ ನೀಡದೆ ಗಾಯದ ಕಾರಣದಿಂದ ಮನೆಗೆ ಕಳುಹಿಸಲಾಗಿತ್ತು. ಇದೇ ವೇಳೆ ಗಾಯವಾಸಿ ಮಾಡಿಕೊಂಡು ತಂಡಕ್ಕೆ ಬಾ ಮತ್ತೆ ತಂಡಕ್ಕೆ ಆಯ್ಕೆ ಮಾಡುವುದಾಗಿಯೂ ಭರವಸೆ ನೀಡಲಾಗಿತ್ತು ಎನ್ನಲಾಗಿದೆ. ಆದರೆ ನಂತರ ಬಂದ ಅವರಿಗೆ ವಯೋಮಿತಿ ಮೀರಿದ ಆಟಗಾರ. ಹೀಗಾಗಿ ತಂಡದಲ್ಲಿ ಸ್ಥಾನ ನೀಡಲಾಗುವುದಿಲ್ಲ ಎಂದು ಸೂಚಿಸಿಲಾಗಿತ್ತು. ಇದರಿಂದ ನೊಂದು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೋಚ್‌ಗಳು ಕಿರುಕುಳ ನೀಡಿ ಬಲವಂತದಿಂದ ಆತ್ಮಹತ್ಯೆಗೆ ಮಾಡಿಕೊಳ್ಳುವಂತೆ ಮಾಡಿದ್ದಾರೆ. ಇಂತಹ ಸ್ಥಿತಿಯಲ್ಲಿ ಇತರೆ ಆಟಗಾರರಿಗೆ ಆಗಬಾರದು ಎಂದು ಮೊಹಮ್ಮದ್‌ ಝರಿಯಾಬ್‌ ಅವರ ತಂದೆ ಮಾಜಿ ಕ್ರಿಕೆಟಿಗ ಅಮೀರ್‌ ಹನೀಫ್ ತಿಳಿಸಿದ್ದಾರೆ. ಹನೀಫ್ ಅವರು 1990ರಲ್ಲಿ ಪಾಕಿಸ್ತಾನ ತಂಡದ ಪರ ಐದು ಏಕದಿನ ಕ್ರಿಕೆಟ್‌ ಪಂದ್ಯವನ್ನಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next