Advertisement
ಬರೆ ಕುಸಿತಕ್ಕೆ ಹೆದರಿ ಊರುಬಿಟ್ಟರುಮಾದಾಪುರ ಸಮೀಪದ ಶಿರಂಗಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಗುಡ್ಡ ಕುಸಿಯುತ್ತಿರುವ ಮುನ್ಸೂಚನೆ ಸಿಕ್ಕಿದ ಗ್ರಾಮದ 150ಕ್ಕೂ ಹೆಚ್ಚು ಮಂದಿ, ಕೈಗೆ ಸಿಕ್ಕ ವಸ್ತುಗಳನ್ನು ತೆಗೆದುಕೊಂಡು ಗ್ರಾಮ ತೊರೆದಿದ್ದಾರೆ. ರಸ್ತೆಗೆ ಬರೆ ಕುಸಿದ ಪರಿಣಾಮ ಪಟ್ಟಣಕ್ಕೆ ತಲುಪಲು ಸಾಧ್ಯವಾಗದೆ ಸಹಾಯಕ್ಕಾಗಿ ಅಂಗಲಾಚು ತ್ತಿದ್ದಾರೆ. ಈಗಾಗಲೆ ಅಲ್ಲಿನ ಅಂಚೆ ಕಚೇರಿಯ ಸಮೀಪದ ತಂಗುದಾಣದಲ್ಲಿ ಆಶ್ರಯ ಪಡೆದಿದ್ದಾರೆ.
ಮೂವತ್ತೂಕ್ಲು ಗ್ರಾಮದಲ್ಲಿ ಮನೆ ಮೇಲೆ ಬರೆ ಕುಸಿದ ಪರಿಣಾಮ, ಮನೆಯೊಳಗಿದ್ದ ಪ್ರಕೃತಿ, ಪ್ರೇಮಾ, ಬೋಪಯ್ಯ ಗಾಯಗೊಂಡಿದ್ದಾರೆ. ಗ್ರಾಮಸ್ಥರು ಅವರನ್ನು ರಕ್ಷಣೆ ಮಾಡಿ, ಸುಂಠಿಕೊಪ್ಪ ಆಸ್ಪತ್ರೆಗೆ ಸಾಗಿಸಿದ್ದಾರೆ. ನೂರಾರು ಎಕರೆ
ಕೃಷಿಭೂಮಿ ಜಲಾವೃತ
ಶಾಂತಳ್ಳಿ ಹೋಬಳಿಯ ಬಹುತೇಕ ಗ್ರಾಮಗಳ ನೂರಾರು ಎಕರೆ ಭತ್ತ ಭೂಮಿ ಜಲಾವೃತಗೊಂಡಿದೆ. ಕುಡಿಗಾಣ ಗ್ರಾಮ ಸಂಪರ್ಕ ಕಡಿತಗೊಂಡಿದೆ. ಕಳೆದ ನಾಲ್ಕು ದಿನಗಳಿಂದ ಗ್ರಾಮದ ಸೇತುವೆ ಜಲಾವೃತ ಗೊಂಡಿದ್ದು, ಪಟ್ಟಣಕ್ಕೆ ತಲುಪಲು ಗ್ರಾಮಸ್ಥರು ಇನ್ನೊಂದು ದಾರಿಯನ್ನು ಆಶ್ರಯಿಸಿದ್ದರು. ಆದರೆ ಗುರುವಾರ ಬೆಳಗ್ಗೆ ಆ ರಸ್ತೆ ಮೇಲೆ ಬರೆ ಕುಸಿದ ಪರಿಣಾಮ ಸಂಚಾರ ಸ್ಥಗಿತಗೊಂಡಿದೆ.
Related Articles
ಕಿರಗಂದೂರು ಗ್ರಾ.ಪಂ. ವ್ಯಾಪ್ತಿಯ ಮುರುಗ, ರಾಮು, ಪನ್ನಿರು, ಸುಬ್ರಮಣಿ, ಚಂದ್ರ, ಮಣಿ, ಗಣೇಶ್, ರಾಜೇಂದ್ರ, ಓಡಿ, ಸುಂದರರಾಜು, ಪಾಪಣ್ಣ, ಗಣೇಶ್, ಮುತ್ತಪ್ಪ ಅವವರ ಮನೆಗಳು ಜಲಾವೃತಗೊಂಡಿವೆ. ಇವರನ್ನು ಕಾಜೂರಿನ ಶಾಲೆಯಲ್ಲಿ ತೆರೆಯಲಾಗಿರುವ ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಗ್ರಾಮ ಸಂಪರ್ಕಕ್ಕೆ ತೆಪ್ಪವನ್ನು ಉಪಯೋಗಿಸಲಾಗುತ್ತಿದೆ. ಹರಗ ಗ್ರಾಮದಲ್ಲಿ ಮುಖ್ಯ ರಸ್ತೆಯ ಮೋರಿ ಕುಸಿದ ಪರಿಣಾಮ ಸಂಪರ್ಕ ಕಡಿತದೊಂಡಿದೆ. ಯಡೂರು ಗ್ರಾಮದ ಕೃಷಿ ಭೂಮಿಯ ಸಮೀಪ ಹರಿಯುವ ತೊರೆಯ ಮೇಲೆ ಭೂಕುಸಿತವಾಗಿದ್ದು, ನೀರು ಗದ್ದೆಯ ಮೇಲೆ ಹರಿಯುತ್ತಿದ್ದು, ಬಹಳಷ್ಟು ನಷ್ಟವಾಗಿದೆ.
Advertisement
ಸರಣಿ ಮನೆ ಕುಸಿತಬಜೆಗುಂಡಿ ಕಾಲನಿಯಲ್ಲಿ ಸರಣಿ ಮನೆ ಕುಸಿತವಾಗುತ್ತಿದ್ದು, ಬುಧವಾರ ರಾತ್ರಿ ಮತ್ತೆರಡು ಮನೆಗಳು ಕುಸಿದಿವೆ. ಚೆನ್ನಾ ಮತ್ತು ಪ್ರಿಯಾ ರತೀಶ್ ಅವರ ಮನೆಗಳು ಕುಸಿದಿವೆ. ಕಮಲ ಮತ್ತು ದೇವಕ್ಕಿ ಅವರ ಮನೆ ಪಕ್ಕ ಬರೆ ಕುಸಿದು ಹಾನಿಯಾಗಿದೆ. ಕ್ಯಾತೆ ಗ್ರಾಮದ ಪುಟ್ಟಸ್ವಾಮಿ, ರಾಮೇಗೌಡ, ಮಸಗೋಡು ಗ್ರಾಮದ ಸರೋಜಾ, ಜಾನಕಿ, ಅರೆಯೂರು ಗ್ರಾಮದ ರಮೇಶ್, ಹಾನಗಲ್ಲು ಗ್ರಾಮದ ಚಂದ್ರಕಲಾ, ಕಲ್ಕಂದೂರು ಗ್ರಾಮದ ಉಮಾ ಅವರ ಮನೆಗಳ ಗೋಡೆ ಕುಸಿದು ಹಾನಿಯಾಗಿದೆ. ಕಿರಿಕೊಡ್ಲಿ ಗ್ರಾಮದಲ್ಲಿ ಬರೆ ಕುಸಿದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಐಗೂರಿನ ಶೋಭಾ ಅವರ ಮನೆಯ ಮೇಲೆ ಮರಬಿದ್ದು ಹೆಚ್ಚಿನ ಹಾನಿಯಾಗಿದೆ.