ವಾಷಿಂಗ್ ಟನ್: ಅಮೇರಿಕಾದ ಅಧ್ಯಕ್ಷ ಇಂದು ಮುಂಜಾನೆ ಟ್ವೀಟ್ ಒಂದನ್ನು ಮಾಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. “ ಅತ್ಯಂತ ಮಹತ್ತರವಾದ ಘಟನೆ ಈಗಷ್ಟೆ ಘಟಿಸಿದೆ” ಎಂಬ ಟ್ವೀಟ್ ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.
ಅಧ್ಯಕ್ಷ ಟ್ರಂಪ್ ಭಾನುವಾರ ಮುಂಜಾನೆ 9 ಗಂಟೆಗೆ (13.00GMT) ಮಹತ್ತರ ಹೇಳಿಕೆ ನೀಡಲಿದ್ದಾರೆ ಎಂದು ಶನಿವಾರವೇ ಅಮೇರಿಕಾದ ಶ್ವೇತ ಭವನ ಪ್ರಕಟನೆ ಹೊರಡಿಸಿತ್ತು. ಈ ಹಿನ್ನಲೆಯಲ್ಲಿ ಟ್ರಂಪ್ ಅವರ ಟ್ವೀಟ್ ಭಾರೀ ಕುತೂಹಲ ಕೆರಳಿಸಿದೆ.
ಇತ್ತೀಚಿಗಷ್ಟೆ ಇಸ್ಲಾಮಿಕ್ ಸ್ಟೇಟ್ ಉಗ್ರ ನಾಯಕ ಅಬುಬಕರ್ ಅಲ್ ಬಾಗ್ದಾದಿಯನ್ನು ಗುರಿಯಾಗಿರಿಸಿ ಅಮೇರಿಕಾ ಸೇನೆ ನಡೆಸಲು ಉದ್ದೇಶಿಸಿದ್ದ ವಿಶೇಷ ಕಾರ್ಯಾಚರಣೆಗೆ ಟ್ರಂಪ್ ಅನುಮತಿ ನೀಡಿದ್ದರು ಎಂದು ಅಮೇರಿಕಾ ನಿಯತಕಾಲಿಕೆ ನ್ಯೂಸ್ ವೀಕ್ ವರದಿ ಮಾಡಿತ್ತು.
ಈ ಹಿನ್ನಲೆಯಲ್ಲಿ ಟ್ರಂಪ್ ಮಾಡಿದ ಟ್ವೀಟ್ ಜಗತ್ತಿನಾದ್ಯಂತ ಭಾರೀ ಚರ್ಚೆಗೆ ಒಳಪಟ್ಟಿದೆ.