Advertisement
ಅಧಿರಸಮ್ಬೇಕಾಗುವ ಸಾಮಗ್ರಿಗಳು
ಅಕ್ಕಿ: ಎರಡು ಕಪ್
ಬೆಲ್ಲ: ಎರಡು ಕಪ್
ಎಣ್ಣೆ: ಕರಿಯಲು ಬೇಕಾದಷ್ಟು
ಗಸಗಸೆ : ಕಾಲು ಕಪ್
ಬಿಳಿ ಎಳ್ಳು : ಕಾಲು ಕಪ್
ಏಲಕ್ಕಿ ಪುಡಿ : ಕಾಲು ಕಪ್
ಗೋಧಿಹಿಟ್ಟು: ಕಾಲು ಕಪ್
ಹಾಲು: ಸ್ವಲ್ಪ
ಅಕ್ಕಿಯನ್ನು ರಾತ್ರಿ ನೆನೆಸಿಟ್ಟು ಅದು ನೆನೆದು ನೀರು ಬಸಿದ ಬಳಿಕ ಅದನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಅನಂತರ ಇನ್ನೊಂದು ಬಾಣಲೆಯಲ್ಲಿ ಅಕ್ಕಿ ತೆಗೆದುಕೊಂಡಷ್ಟೇ ಬೆಲ್ಲ ತೆಗೆದುಕೊಂಡು ಅದನ್ನು ಚೆನ್ನಾಗಿ ಪಾಕ ಬರಿಸಿಕೊಳ್ಳಿ ಅದಕ್ಕೆ ಎಳ್ಳು, ಹುರಿದುಕೊಂಡ ಗಸಗಸೆ ಮತ್ತು ಏಲಕ್ಕಿ ಹಾಗೂ ರುಬ್ಬಿಟ್ಟುಕೊಂಡ ಅಕ್ಕಿ ಹಿಟ್ಟು ಹಾಕಿ ಮೆತ್ತಗೆ ಕಲಸಿಕೊಳ್ಳಿ, ಅದು ನುಣ್ಣನೆಯ ಹದಕ್ಕೆ ಬಂದ ಅನಂತರ ಅದನ್ನು ಸ್ವಲ್ಪ ಹಾಲಿನಲ್ಲಿ ತಟ್ಟಿ ಅದನ್ನು ಎಣ್ಣೆಯಲ್ಲಿ ಸಣ್ಣಗೆ ಕರಿದರೆ ಬಿಸಿ ಬಿಸಿಯಾದ ಅಧಿರಸಮ್ ಸವಿಯಲು ಸಿದ್ಧ. ಬಾದಷಾ
ಬೇಕಾಗುವ ಸಾಮಗ್ರಿಗಳು
ಮೈದಾ -250 ಗ್ರಾಂ
ಸಕ್ಕರೆ -200 ಗ್ರಾಂ
ಏಲಕ್ಕಿ – 2ರಿಂದ 3
ತುಪ್ಪ -ಅರ್ಧಕಪ್
ಮೊಸರು- ಅರ್ಧ
ಲಿಂಬೆ ರಸ – 2ರಿಂದ 3 ಚಮಚ
Related Articles
Advertisement
ಅನಾನಸ್ಹಲ್ವಾಬೇಕಾಗುವ ಸಾಮಗ್ರಿ
ಅನಾನಸ್: ಒಂದು ಕಪ್
ತುಪ್ಪ: ಸ್ವಲ್ಪ
ಗೋಡಂಬಿ, ದ್ರಾಕ್ಷಿ: ಸ್ವಲ್ಪ
ಸಕ್ಕರೆ: ಎರಡು ಕಪ್ ಮಾಡುವ ವಿಧಾನ
ಬಾಣಲೆಗೆ ತುಪ್ಪ ಹಾಕಿ ಅದಕ್ಕೆ ದ್ರಾಕ್ಷಿ, ಗೋಡಂಬಿ ಹಾಕಿ ಅದನ್ನು ಸ್ವಲ್ಪ ಹುರಿದುಕೊಳ್ಳಿ ಅನಂತರ ಒಂದು ಕಪ್ ಪೈನಾಪಲ್ ಹಣ್ಣನ್ನು ಸಣ್ಣದಾಗಿ ತುಂಡರಿಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. ಒಂದು ಪಾತ್ರೆಗೆ ಈ ಅನಾನಸ್‌ನ್ನು ಹಾಕಿ ನೀರಿನ ಅಂಶ ಹೋಗುವವರೆಗೆ ಕೈ ಆಡಿಸಿ ಇದಕ್ಕೆ 2 ಕಪ್ ಸಕ್ಕರೆ, ಕೇಸರಿ ಏಲಕ್ಕಿ ಪುಡಿ ಹಾಕಿದ ಅನಂತರ ಬೇಕಾದಲ್ಲಿ ಕೊವಾ ಹಾಕಿ. ಪಾಕ ಬರುವರೆಗೆ ಕೈಯಾಡಿಸಿದರೆ ಅನಾನಸು ಹಲ್ವಾ ರೆಡಿ. ಕಾಜುಬರ್ಫಿ
ಬೇಕಾಗುವ ಸಾಮಗ್ರಿ
ಗೋಡಂಬಿ: ಒಂದು ಕಪ್
ಸಕ್ಕರೆ : ಅರ್ಧಕಪ್
ತುಪ್ಪ: ಸ್ವಲ್ಪ ಮೊದಲು ಗೋಡಂಬಿಯನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಅನಂತರ ಒಂದು ಪಾತ್ರೆಯಲ್ಲಿ ಸಕ್ಕರೆ ಪಾಕವನ್ನು ಮಾಡಿ ಇದಕ್ಕೆ ಗೋಡಂಬಿ ಪುಡಿಯನ್ನು ಹಾಕುತ್ತ ಕೈ ಆಡಿಸಿಕೊಳ್ಳಿ ನಡು ನಡುವೆ ತುಪ್ಪ ಹಾಕಿ. ಪಾಕ ಬರುವವರೆಗೂ ಕೈ ಆಡಿಸಿ, ಪಾಕ ಬಂದ ಮೇಲೆ ಬೇರೆ ಪಾತ್ರೆಗೆ ಹಾಕಿ ನಿಮಗೆ ಬೇಕಾದ ಶೇಪ್‌ಗೆ ಕತ್ತರಿಸಿ. ಹೇಸರು ಬೇಳೆ ಹಲ್ವಾ
ಬೇಕಾಗುವ ಸಾಮಗ್ರಿ
ಹೆಸರು ಬೇಳೆ: ಒಂದು ಕಪ್
ಸಕ್ಕರೆ: ಒಂದು ಕಪ್
ಹಾಲು: ಒಂದು ಕಪ್
ತುಪ್ಪ, ಗೋಡಂಬಿ, ದ್ರಾಕ್ಷಿ, ಏಲಕ್ಕಿ ಪುಡಿ: ಸ್ವಲ್ಪ ಮಾಡುವ ವಿಧಾನ:
ಬಾಣಲೆಗೆ ತುಪ್ಪ ಹಾಕಿ ಹೆಸರು ಬೇಳೆಯನ್ನು 5-6 ನಿಮಿಷಗಳ ಕಾಲ ಹುರಿದುಕೊಳ್ಳಿ. ತಣಿದ ಅನಂತರ ಮಿಕ್ಸಿಗೆ ಹಾಕಿ ಪುಡಿ ಮಾಡಿ ( ತುಂಬಾ ನುಣ್ಣಗೆ ಬೇಕಾಗಿಲ್ಲ, ಹದವಾಗಿ ಹುಡಿ ಮಾಡಿ) ಮತ್ತೆ ಬಾಣಲೆಗೆ ತುಪ್ಪ ಹಾಕಿ ಹೆಸರು ಬೇಳೆ ಪುಡಿಯನ್ನು ಹುರಿಯಿರಿ. ಇದಕ್ಕೆ ಒಂದು ಕಪ್ ಹಾಲು ಹಾಕಿ ಚೆನ್ನಾಗಿ ಕಲಸಿ ಗಟ್ಟಿಯಾಗದಂತೆ ನೋಡಿಕೊಳ್ಳಿ. ಇದಕ್ಕೆ ತುಪ್ಪ ಮತ್ತು 1 ಕಪ್ ಸಕ್ಕರೆ ಹಾಕಿ ಮತ್ತೆ ಕಲಸಿ ರುಚಿಗೆ ಏಲಕ್ಕಿ, ಗೋಡಂಬಿ, ದ್ರಾಕ್ಷಿ ಹಾಕಿದರೆ ಹೇಸರು ಬೇಳೆ ಹಲ್ವಾ ಸವಿಯಲು ಸಿದ್ಧ. ಸಂಗಮ್ ಬರ್ಫಿ
ಬೇಕಾಗುವ ಸಾಮಗ್ರಿಗಳು
ಸಕ್ಕರೆ ಒಂದು ಕಪ್
ಮೈದಾ- ಮುಕ್ಕಾಲು ಕಪ್
ತುಪ್ಪ :ಅರ್ಧ ಕಪ್
ಟುಟಿಫ್ರುಟಿ -ಕಾಲು ಕಪ್
ರೋಸ್ ಎಸೆನ್ಸ್ -ಸ್ವಲ್ಪ
ಹಾಲಿನ ಪುಡಿ -ಕಾಲು ಕಪ್ ಮಾಡುವ ವಿಧಾನ:
ಒಂದು ಬಾಣಲೆಗೆ ತುಪ್ಪವನ್ನು ಹಾಕಿ ಅದು ಬಿಸಿಯಾಗುತ್ತಿದ್ದಂತೆ ಅದಕ್ಕೆ ಮೈದಾ ಹಾಕಿ ಸಣ್ಣ ಉರಿಯಲ್ಲಿಟ್ಟು ಚೆನ್ನಾಗಿ ಕಲಸಿಕೊಳ್ಳಿ ಎಷ್ಟು ಹುರಿದುಕೊಳ್ಳುತ್ತಿರೋ ಅಷ್ಟು ಒಳ್ಳೆಯದು ಅನಂತರ ಅದನ್ನು ಒಂದು ಪ್ಲೇಟ್‌ಗೆ ಹಾಕಿ ಇನ್ನೊಂದು ಬಾಣಲೆಯಲ್ಲಿ ಒಂದು ಕಪ್ ಸಕ್ಕರೆ ಹಾಕಿ ಅರ್ಧ ಕಪ್‌ನಷ್ಟು ನೀರು ಹಾಕಿ ಒಂದೆಳೆ ಪಾಕ ಮಾಡಿಕೊಳ್ಳಿ. ಅನಂತರ ಪ್ಲೇಟ್‌ಗೆ ಹಾಕಿಟ್ಟ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ಕಲಸಿಕೊಳ್ಳಿ ನಂತರ ಅದನ್ನು ಗ್ಯಾಸ್ ಮೇಲಿಟ್ಟು ಸಣ್ಣ ಉರಿಯಲ್ಲಿ ಆ ಮಿಶ್ರಣವನ್ನು ಕಲಸಿಕೊಳ್ಳಿ. ಅನಂತರ ಅದಕ್ಕೆ 2-3 ಹನಿ ರೋಸ್Õ ಎಸೆನ್ಸ್ ಹಾಕಿ ಕಲಸಿಕೊಳ್ಳಿ ಅದು ಸ್ವಲ್ಪ ಗಟ್ಟಿಯಾಗುತ್ತಿದ್ದಂತೆ ಹಾಲಿನ ಪುಡಿಯನ್ನು ಸೇರಿಸಿ ಅದಕ್ಕೆ ಟುಟಿಫ್ರುಟಿ ಹಾಕಿ ಕಲಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ, ಒಂದು ಪ್ಲೇಟ್‌ಗೆ ತುಪ್ಪ ಸವರಿಕೊಂಡು ಈ ಮಿಶ್ರಣವನ್ನು ಪ್ಲೇಟ್‌ಗೆ ಹಾಕಿ ಆದಷ್ಟು ಬೇಗ ಅದನ್ನು ಬರ್ಫಿಯ ರೀತಿಯಲ್ಲಿ ಕಟ್ ಮಾಡಿಕೊಂಡರೆ ಸಂಗಮ್ ಬರ್ಪಿ ಸವಿಯಲು ಸಿದ್ಧ. ಗುಜಿಯಾಸ್
ಬೇಕಾಗುವ ಸಾಮಗ್ರಿಗಳು:
ಮೈದಾ ಅಥವಾ ಗೋಧಿ ಹಿಟ್ಟು: ಒಂದು ಕಪ್
ಉಪ್ಪು: ಸ್ವಲ್ಪ
ತುಪ್ಪ: ನಾಲ್ಕು ಕಪ್
ಗೋಡಂಬಿ, ದ್ರಾಕ್ಷಿ, ಬಾದಾಮಿ, ಪಿಸ್ತಾ: ಅರ್ಧಕಪ್
ಏಲಕ್ಕಿ ಪುಡಿ: ಸ್ವಲ್ಪ ಒಂದು ಕಪ್ ನಲ್ಲಿ ಗೋಧಿ ಹಿಟ್ಟು ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಚಪಾತಿ ಹಿಟ್ಟಿ ನಂತೆ ಮಾಡಿಡಬೇಕು. ಹೂರಣ ಮಾಡಲು ಇನ್ನೊಂದು ಪ್ಯಾನ್ ಬಿಸಿ ಮಾಡಿ, ಅದಕ್ಕೆ ಸ್ವಲ್ಪ ತುಪ್ಪ ಹಾಕಿ ಬಿಸಿ ಯಾದ ಬಳಿಕ ಕೋವಾ, ಒಣ ದ್ರಾಕ್ಷಿ, ಗೋಡಂಬಿ, ಬಾದಾಮಿ ಮತ್ತು ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ತೆಗೆದಿಟ್ಟುಕೊಳ್ಳಿ ಬಳಿಕ ಇದನ್ನು ಸಣ್ಣ ಸಣ್ಣ ಉಂಡೆ ಮಾಡಿ ಇಡಿ. ಗೋಧಿ ಹಿಟ್ಟಿನಿಂದ ತಯಾರಿಸಿದ ಹಿಟ್ಟನ್ನು ಚಪಾತಿ ಲಟ್ಟಿಸಿದಂತೆ ಲಟ್ಟಿಸಿ ಅದರ ಮೇಲೆ ತಯಾರಿಸಿದ ಹೂರಣವನ್ನು ಇಟ್ಟು ಗುಜಿಯಾಸ್ ಆಕಾರ ಮಾಡಿ ಎಣ್ಣೆಯಲ್ಲಿ ಫ್ರೈ ಮಾಡಿದರೆ ರುಚಿ ರುಚಿಯಾದ ಗರಿಗರಿ ಗುಜಿಯಾಸ್ ಸವಿಯಲು ಸಿದ್ಧ. ಕಲಾಕಂದ್
ಬೇಕಾಗುವ ಸಾಮಗ್ರಿಗಳು:
ಹಾಲು: ಒಂದು ಲೀ.
ಕೋವಾ: ಒಂದು ಬಾರ್
ಮಿಲ್ಕ್ ಮೇಡ್: ಒಂದೂವರೆ ಕಪ್
ಬಾದಾಮಿ ಮತ್ತು ಗೋಡಂಬಿ ಸ್ವಲ್ಪ, ಒಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಕಡಿಮೆ ಉರಿಯಲ್ಲಿ ಕಾಯಿಸಿ ಬಳಿಕ ಕೋವಾ ಹಾಕಿ ಚೆನ್ನಾಗಿ ಮಿಶ್ರಣ ಮಾಡುತ್ತಾ ಬನ್ನಿ ಜತೆಗೆ ಮಿಲ್ಕ್ ಮೇಡ್ ಹಾಕಿ ಚೆನ್ನಾಗಿ ತಿರುಗಿಸುತ್ತಾ ಬನ್ನಿ, ಅದಕ್ಕೆ ಗೋಡಂಬಿ, ಬಾದಾಮಿ, ದ್ರಾಕ್ಷಿಯನ್ನು ಸೇರಿಸಿ ಬಳಿಕ ಈ ಮಿಶ್ರಣ ವನ್ನು 425 ಡಿಗ್ರಿ ಶಾಖದಲ್ಲಿ ಓವನ್‌ನಲ್ಲಿಟ್ಟು ಕಾಯಿಸಿ. ಅರ್ಧ ಗಂಟೆ ಬಳಿಕ ಹೊರತೆಗೆದು ನಿಮಗೆ ಬೇಕಾದ ರೂಪಕ್ಕೆ ಕತ್ತರಿಸಿದರೆ ರುಚಿ ರುಚಿ ಯಾದ ಕಲಾಂಕದ್ ಸವಿಯಲು ಸಿದ್ಧ. ಕೀರ್‌ಕಡಮ್
ಬೇಕಾಗುವ ಸಾಮಗ್ರಿಗಳು
ಜೋಳದ ಹಿಟ್ಟು- 1 ಕಿ. ಲೋ.
ಕೇಸರಿ-ಎರಡು ಚಮಚ
ಸಕ್ಕರೆ-ಒಂದು ಕೆ.ಜಿ.
ತುರಿದ ತೆಂಗಿನಕಾಯಿ: ಸ್ವಲ್ಪ
ಆಹಾರದ ಬಣ್ಣ: ಸ್ವಲ್ಪ
ಹಾಲು: ಎರಡು ಲೀ.
ಏಲಕ್ಕಿ: ಅಗತ್ಯವಿದ್ದಷ್ಟು ಮಾಡುವ ವಿಧಾನ
ಒಂದು ಪ್ಯಾನ್ ತೆಗೆದುಕೊಂಡು ಅದನ್ನು ಬಿಸಿ ಮಾಡಿಕೊಳ್ಳಿ. ಅದಕ್ಕೆ ಹಾಲು ಹಾಕಿ ಬಿಸಿ ಮಾಡಿ, ಅದು ಚೆನ್ನಾಗಿ ಕುದಿದ ಮೇಲೆ ಅದಕ್ಕೆ ಸ್ವಲ್ಪ ವಿನೇಗರ್ ಹಾಕಿ. ಈಗ ಹಾಲು ಗಟ್ಟಿಯಾಗುತ್ತದೆ. ಗಟ್ಟಿಯಾದ ಹಾಲನ್ನು ಬಟ್ಟೆಯಲ್ಲಿ ಹಾಕಿ ಅದನ್ನು ಹಿಂಡಿ ನೀರಿನ ಅಂಶವನ್ನು ತೆಗೆಯಿರಿ. ಈಗ ಸಿಕ್ಕಿದ ಗಟ್ಟಿಗೆ ನೀರು ಹಾಕಿ ಅದನ್ನು ಹಿಂಡಿ ತೆಗೆಯಿರಿ. ಈಗ ಚೆನ್ನಾ ರೆಡಿ. ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ನೀರು ಹಾಕಿ ಅನಂತರ ಸಕ್ಕರೆ ಹಾಕಿ ಕುದಿಸಿಕೊಳ್ಳಿ. ಇನ್ನೊಂದು ಬದಿಯಲ್ಲಿ ಚೆನ್ನಾ ಗಟ್ಟಿಯಾಗದಂತೆ ಅದನ್ನು ಕೈಯಲ್ಲಿ ಪುಡಿಮಾಡಿಕೊಳ್ಳಿ. ಅನಂತರ ಅದಕ್ಕೆ ಜೋಳದ ಹಿಟ್ಟನ್ನು ಸೇರಿಸಿ, ಸ್ವಲ್ಪ ಕೇಸರಿ ಬಣ್ಣವನ್ನು ಸೇರಿಸಿ. ಅನಂತರ ಅರಶಿನವನ್ನು ಹಾಕಿ. ಈಗ ಇದನ್ನು ಸಣ್ಣ ಉಂಡೆಯನ್ನಾಗಿ ಮಾಡಿಕೊಳ್ಳಿ. ಕುದಿಯುತ್ತಿರುವ ಸಕ್ಕರೆ ಪಾಕಕ್ಕೆ ಸಣ್ಣ ಸಣ್ಣ ಉಂಡೆಗಳನ್ನು ಹಾಕಿ ಕುಕ್ಕರ್‌ನಲ್ಲಿ ಹಾಕಿ ಒಂದು ವಿಷಲ್‌ವರೆಗೆ ಕುದಿಸಿ. ಅನಂತರ ಸಣ್ಣ ಉರಿಯಲ್ಲಿ 8ರಿಂದ 10 ನಿಮಿಷ ಕುದಿಸಿ. ಗಿಣ್ಣು ತೆಗೆದುಕೊಂಡು ಅದನ್ನು ಸಣ್ಣ ಉರಿಯಲ್ಲಿ ಫ್ರೈ ಮಾಡಿಕೊಳ್ಳಿ. ಗೋಲ್ಡನ್ ಬಣ್ಣ ಬರುವವರೆಗೆ ಅದನ್ನು ಫ್ರೈ ಮಾಡಿ. ಮೊದಲೇ ತಯಾರಾದ ರಸಗುಲ್ಲಾವನ್ನು ಒಂದು ಬೌಲ್‌ಗೆ ಹಾಕಿ. ಅದನ್ನು 2 ಗಂಟೆಗಳವರೆಗೆ ಹಾಗೇ ಬಿಡಿ. 2 ಗಂಟೆಯಾದ ಅನಂತರ ಉಂಡೆಯನ್ನು ನೀರಿನಿಂದ ಬೇರ್ಪಡಿಸಿ. ಮಾವಾ ಮತ್ತು ಸಕ್ಕರೆ ಪುಡಿಯನ್ನು ಚೆನ್ನಾಗಿ ಬೆರೆಸಿಕೊಳ್ಳಿ. ಅನಂತರ ಉಂಡೆಯನ್ನಾಗಿ ಮಾಡಿಕೊಳ್ಳಿ. ಅನಂತರ ಅದರ ಮಧ್ಯ ಮೊದಲೇ ತಯಾರಿಸಿದ ರಸಗುಲ್ಲಾವನ್ನು ಇಟ್ಟು ಉಂಡೆ ಮಾಡಿಕೊಳ್ಳಿ, ಆ ಬಳಿಕ ಅದನ್ನು ಮೊದಲೇ ಹುರಿದ ಗಿಣ್ಣುವಿನಲ್ಲಿ ಅದ್ದಿ. ಈಗ ಕೀರ್‌ಕಡಮ್ ಸವಿಯಲು ಸಿದ್ಧ. ರಸಬಲಿ
ಸಾಮಗ್ರಿಗಳು
ಪನ್ನೀರ್: ಒಂದು ಕಪ್
ರವಾ: ಎರಡು ಚಮಚ
ಏಲಕ್ಕಿ : ಸ್ವಲ್ಪ
ಸಕ್ಕರೆ: ಒಂದು ಕಪ್
ಹಾಲು:ಒಂದು ಕಪ್
ಕೇಸರಿ
ಎಣ್ಣೆ
ವಿನೇಗರ್
ಮೈದಾ ಮಾಡುವ ವಿಧಾನ
ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಹಾಲು ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. ಅನಂತರ ಅದಕ್ಕೆ ವಿನೇಗರ್ ಹಾಕಿ. ಹಾಲು ಗಟ್ಟಿಯಾದ ಅನಂತರ ಅದರಿಂದ ಚೆನ್ನಾ ತಯಾರಿಸಿಕೊಳ್ಳಿ. ಗಟ್ಟಿಯಾದ ಚೆನ್ನಾವನ್ನು ಕೈಯಿಂದ ಪುಡಿ ಮಾಡಿಕೊಳ್ಳಿ. ಅದಕ್ಕೆ ಮೈದಾ ಮತ್ತು ಸಕ್ಕರೆ ಸೇರಿಸಿಕೊಳ್ಳಿ. ಸ್ವಲ್ಪ ಏಲಕ್ಕಿಯನ್ನೂ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಅನಂತರ ಅದಕ್ಕೆ ಸ್ವಲ್ಪ ಸೋಡಾ ಪುಡಿ ಸೇರಿಸಿಕೊಂಡು ಸಣ್ಣ ಸಣ್ಣ ಉಂಡೆಯನ್ನಾಗಿ ಮಾಡಿಕೊಳ್ಳಿ. ಅದನ್ನು ಸ್ವಲ್ಪ ತಟ್ಟಿ. ಮಧ್ಯ ತೂತು ಮಾಡಿಕೊಳ್ಳಿ.
ಒಂದು ಪ್ಯಾನ್‌ನಲ್ಲಿ ಎಣ್ಣೆ ಕುದಿಸಿ ಅದರಲ್ಲಿ ಈ ಉಂಡೆಯನ್ನು ಹಾಕಿ ಫ್ರೈ ಮಾಡಿಕೊಳ್ಳಿ. ಇನ್ನೊಂದು ಬದಿಯಲ್ಲಿ ಹಾಲನ್ನು ಬಿಸಿ ಮಾಡಿಕೊಳ್ಳಿ. ಹಾಲು ಸ್ವಲ್ಪ ಕುದಿದ ಅನಂತರ ಅದಕ್ಕೆ ಸಕ್ಕರೆ ಹಾಕಿ. ನಂತರ ಅದಕ್ಕೆ ಪ್ರೈ ಮಾಡಿದ ಚೆನ್ನಾವನ್ನು ಇದಕ್ಕೆ ಹಾಕಿ. ಚೆನ್ನಾಗಿ ಹಾಲು ಕುದಿದು ಗಟ್ಟಿಯಾದ ಅನಂತರ ಅದನ್ನು ತೆಗೆದರೆ. ರಸಬಲಿ ತಿನ್ನಲು ಸಿದ್ಧ. ಕೊಬ್ಬರಿ ಬರ್ಫಿ
ಬೇಕಾಗುವ ಸಾಮಗ್ರಿಗಳು
ಕೊಬ್ಬರಿ: ಎರಡು ಕಪ್
ತುಪ್ಪ: ಎರಡು ಚಮಚ
ಸಕ್ಕರೆ: ಒಂದು ಕಪ್
ಏಲಕ್ಕಿ: ಸ್ವಲ್ಪ ಮಾಡುವ ವಿಧಾನ
ಮೊದಲು ಕೊಬ್ಬರಿಯನ್ನು ಎರಡು ಗಂಟೆ ನೀರಿನಲ್ಲಿ ನೆನೆಸಿಟ್ಟು ಸಿಪ್ಪೆ ತೆಗೆದುಕೊಳ್ಳಬೇಕು. ಅದನ್ನು ಮಿಕ್ಸಿ ಜಾರಿಗೆ ಹಾಕಿ ನೀರು ಸೇರಿಸದೆ ಚೆನ್ನಾಗಿ ಹುಡಿ ಮಾಡಿಟ್ಟುಕೊಳ್ಳಬೇಕು. ಒಂದು ಪ್ಯಾನ್‌ಗೆ ತುಪ್ಪ ಹಾಕಿ ಅದಕ್ಕೆ ಹುಡಿ ಕೊಬ್ಬರಿಯನ್ನು ಹಾಕಬೇಕು. ಒಂದು ನಿಮಿಷ ಚೆನ್ನಾಗಿ ಮಿಶ್ರ ಮಾಡಬೇಕು. ಅನಂತರ ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಹುಡಿ ಮಾಡಬೇಕು. ಸಕ್ಕರೆ ಪಾಕದಲ್ಲಿ ಕೊಬ್ಬರಿ ತುರಿ ಸಣ್ಣ ಉರಿಯಲ್ಲಿ ಬೇಯಿಸುತ್ತಾ ತಳವೂರದಂತೆ ಕದಡುತ್ತಿರಬೇಕು. 20 ನಿಮಿಷ ಬೇಯಿಸಿ ಏಲಕ್ಕಿ ಪುಡಿ ಸೇರಿಸಿ ಅದನ್ನು ಒಂದು ತುಪ್ಪ ಸವರಿದ ಪ್ಲೇಟಿಗೆ ಹಾಕಿ ಮೂರು ಗಂಟೆ ಆರಲು ಬಿಟ್ಟರೆ ಕೊಬ್ಬರಿ ಬರ್ಫಿ ಸವಿಯಲು ಸಿದ್ಧವಾಗುತ್ತದೆ. ಸಂಗ್ರಹ: ಪ್ರೀತಿ ಭಟ್ ಗುಣವಂತೆ, ಧನ್ಯಶ್ರೀ ಬೋಳಿಯಾರ್, ವಿಜಿತಾ ಬಂಟ್ವಾಳ, ರಂಜಿನಿ ಮಿತ್ತಡ್ಕ.