Advertisement

ಈ ವರ್ಷದಲ್ಲಿ ಮತ್ತಷ್ಟು ಹೊಸತು

12:23 AM Jan 31, 2020 | Sriram |

ಈ ವರ್ಷ ತಂತ್ರಜ್ಞಾನ ಮತ್ತಷ್ಟು ಕ್ಷೇತ್ರಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲಿದೆ. ಆ ಕುರಿತು ಒಂದು ಚಿಕ್ಕ ಪಟ್ಟಿ ಇಲ್ಲಿದೆ.

Advertisement

ಕೈಗಾರಿಕಾ ಕ್ಷೇತ್ರಗಳಲ್ಲಿ ರೋಬೋಟ್‌
ಬಹು ಆಸಕ್ತಿಯ ವಿಷಯಗಳಲ್ಲಿ ಒಂದಾದ ರೋಬೋಟ್‌ ತಂತ್ರಜ್ಞಾನ ಕೆಲವು ಆಯ್ದ ಕೈಗಾರಿಕ ವಲಯವನ್ನು ಹೊಕ್ಕಲಿದೆ. ಇಲ್ಲಿ ಯಂತ್ರೋಪಕರಣಗಳನ್ನು ರೊಬೋಟ್‌ಗಳೇ ನಿರ್ವಹಿಸಲಿದ್ದು, ಕೆಲವು ಆಯಕಟ್ಟಿನ ಕೆಲಸಗಳಿಗೆ ಕಾರ್ಮಿಕರ ಅಗತ್ಯವಿರುತ್ತದೆ. ಇದು ಭಾರತಕ್ಕೆ ತಡವಾಗಿ ಬಂದರೂ, ವಿದೇಶಗಳಲ್ಲಿ ಹಲವೆಡೆ ಈ ವರ್ಷ ಜಾರಿಗೊಳ್ಳಲಿದೆ.

ಹೆಚ್ಚು ಕೆಮರಾ ಸೆನ್ಸಾರ್‌ಗಳು
ಹೆಚ್ಚು ಕ್ಯಾಮಾರಗಳುಳ್ಳ ಸ್ಮಾರ್ಟ್‌ ಪೋನ್‌ಗಳ ಕಥೆ ಮುಂದುವರಿಯಲಿದೆ. ಈಗಾಗಲೇ 3 ಕೆಮರಾಗಳುಳ್ಳ ಸ್ಮಾರ್ಟ್‌ಫೋನ್‌ಗಳು 2019ರ ವರ್ಷಾಂತ್ಯದಲ್ಲಿ ಬಿಡುಗಡೆ ಯಾಗಿದ್ದವು. ಇನ್ನು 5 ಕೆಮರಾ ಗಳುಳ್ಳ ಪೆಂಟಾ ಕೆಮರಾ ಫೋನ್‌ಗಳು ಬಿಡುಗಡೆಯಾಗಲಿವೆ..

3ಡಿ ಪ್ರಿಟಿಂಗ್‌
ಈಗಾಗಲೇ ಇರುವ 3ಡಿ ಪ್ರಿಟಿಂಗ್‌ ಕ್ಷೇತ್ರದಲ್ಲಿ ಈ ವರ್ಷ ಅಭೂತಪೂರ್ವವಾದ ಬೆಳವಣಿಗೆಗಳು ದಾಖಲಾಗಲಿದೆ. ಉಪಕರಣಗಳ ಮೇಲೆ 3ಡಿ ರೂಪದ ಬರವಣಿಗೆಗಳನ್ನು ನಾವು ಕಾಣಬಹುದು. 3ಡಿ ಜತೆಗೆ “ಎಂಬೋಸ್‌’ ಪ್ರಿಟಿಂಗ್‌ ಸುಲಭವಾಗುವ ಸಾಧ್ಯತೆ ಇದೆ.

ಒಟಿಟಿ ಅಭ್ಯುದಯ
ವೀಡಿಯೋ ಕ್ಷೇತ್ರದಲ್ಲಿ ಭಾರೀ ಪ್ರಮಾಣದ ಬದಲಾವಣೆಗಳು ಆಗಲಿವೆ. ಈಗಾಗಲೇ ನಮ್ಮಲ್ಲಿರುವ ನೆಟ್‌ಫ್ಲಿಕ್ಸ್‌ ಮತ್ತು ಅಮೆಜಾನ್‌ ಪ್ರೋ ನಂತಹ ತಾಣಗಳು ಹೆಚ್ಚು ಸಕ್ರಿಯವಾಗಲಿವೆೆ. ಟಿವಿ ಸೇರಿದಂತೆ ಇನ್ನಿತರ ದೃಶ್ಯಮಾಧ್ಯಮಗಳ ಜಾಗವನ್ನು ಸ್ಮಾರ್ಟ್‌ ಫೋನ್‌ ಮತ್ತು ಟ್ಯಾಬ್‌ಗಳು ಆವರಿಸಿಕೊಳ್ಳಲಿವೆ. ಪ್ರತಿವಾರ ಬಿಡುಗಡೆಗೊಳ್ಳುವ ಸಿನಿಮಾಗಳೂ ಒಟಿಟಿ ಮೂಲಕ ಲಭ್ಯವಾಗಲಿವೆ.

Advertisement

ಗೇಮಿಂಗ್‌ ಕ್ಷೇತ್ರ
ಗೇಮಿಂಗ್‌ ಕ್ಷೇತ್ರವೂ ಒಂದಷ್ಟು ಹೊಸತನವನ್ನು ತನ್ನೊಳಗೆ ಸೇರಿಸಿಕೊಂಡು ಬರಲಿದೆ. ಝೂಮ್‌ ಟೆಕ್ನಾಲಜಿ ಹೆಚ್ಚು ಪ್ರಚಾರಕ್ಕೆ ಬರಲಿದೆ. ಮೊಬೈಲ್‌ ಫೋನ್‌ಗಳಿಗೆ ಸಂಬಂಧಿಸಿದಂತೆ ಗೇಮಿಂಗ್‌ ಆ್ಯಪ್‌ಗ್ಳು ಹೆಚ್ಚು ಬರಲಿವೆ. ಪ್ರೀಮಿಯಂ ಟೆಕ್ನಾಲಜಿಗಳು ದುಬಾರಿ ಮತ್ತು ಅಗ್ಗದ ಫೋನ್‌ಗಳಲ್ಲಿ ಕೆಲಸ ಮಾಡಲಿವೆ.

ಮಡಚುವ ಫೋನ್‌ಗಳು
2019ರ ಅಂತ್ಯದಲ್ಲಿ ಮಾರುಕಟ್ಟೆಗೆ ಬರಲಾರಂಭಿಸಿದ ಮಡಚುವ ಫೋನ್‌ಗಳು ಈ ವರ್ಷ ಹೆಚ್ಚು ಉತ್ಪಾದನೆಯಾಗಲಿವೆ. ಈಗಾಗಲೇ ಸ್ಯಾಮ್‌ಸಂಗ್‌, ಹುವಾಯಿ, ಮೋಟೊರೊಲಾ ಸೇರಿದಂತೆ ಇತರ ಮೊಬೈಲ್‌ ಫೋನ್‌ ತಯಾರಿಕಾ ಸಂಸ್ಥೆಗಳು ಹೆಚ್ಚು ಮೊಬೈಲ್‌ಗ‌ಳನ್ನು ಮಾರುಕಟ್ಟೆಗೆ ಬಿಡಲಿವೆ. ಇದರ ಜತೆಗೆ ಇವೆಲ್ಲವೂ 5ಜಿ ಬೆಂಬಲಿತ ಫೋನ್‌ಗಳು ಎಂಬುದು ಇದರ ಹೆಚ್ಚುಗಾರಿಕೆ.

Advertisement

Udayavani is now on Telegram. Click here to join our channel and stay updated with the latest news.

Next