ಮಾಗಡಿ: ಪಟ್ಟಣದ ಪ್ರಸಿದ್ಧ ಶ್ರೀ ಸೋಮೇಶ್ವರಸ್ವಾಮಿ ಬ್ರಹ್ಮರಥೋತ್ಸವ ಭಕ್ತಸಾಗರದ ನಡುವೆ ವಿಜೃಂಭಣೆಯಿಂದ ನೆರವೇರಿತು.
ತಾಲೂಕು ಕಚೇರಿ ಶಿರಸ್ತೇದಾರ್ ಜಗದೀಶ್, ಶಾಸಕ ಎ.ಮಂಜುನಾಥ್ ರಥಕ್ಕೆ ಪೂಜೆ ಸಲ್ಲಿಸಿದರು. ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಸೇರಿದಂತೆ ಅನೇಕ ಗಣ್ಯರು, ಭಕ್ತರೊಡಗೂಡಿ ರಥ ಎಳೆಯುವ ಮೂಲಕ ಚಾಲನೆ ನೀಡಿದರು. ಅರ್ಚಕರಾದ ಗೋಪಲ್ ದೀಕ್ಷಿತ್, ಕಿರಣ್ ದೀಕ್ಷಿತ್ ಮತ್ತು ಪ್ರವೀಣ್ ದೀಕ್ಷಿತ್ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಶಾಸ್ತ್ರೋತ್ತವಾಗಿ ನೆರವೇರಿಸಿದರು.
ರೈತರ ಬದುಕು ಹಸನಾಗಲಿ: ಶಾಸಕ ಎ. ಮಂಜುನಾಥ್ ಮಾತನಾಡಿ, ಸೂರ್ಯದೇವ ಹೊಸ ರಥವೇರುವ ಮೂಲಕ ರಥಸಪ್ತಮಿ ದಿನ ತನ್ನ ಪಥ ಬದಲಾಯಿಸುತ್ತಾನೆ. ಸೋಮೇಶ್ವರಸ್ವಾಮಿಆಶೀರ್ವಾದದಿಂದ ತಾಲೂಕಿನ ಆಡಳಿತ ಸುಭದ್ರವಾಗಿಮುನ್ನೆಡೆಯಲಿ. ಉತ್ತಮ ಮಳೆಯಾಗಿ ರೈತರು ಬದುಕು ಹಸನಾಗಬೇಕು. ಮಕ್ಕಳಿಗೆ ಶಿಕ್ಷಣ ಪಡೆದು ವಿದ್ಯಾವಂತರಾಗಿ ರೂಪುಗೊಳ್ಳಬೇಕು. ತಾಲೂಕು ಅಭಿವೃದ್ಧಿ ಪಥದತ್ತ ಸಾಗಬೇಕು ಎಂದು ಹೇಳಿದರು.
ಖರೀದಿ ಭರಾಟೆ: ಸೋಮೇಶ್ವರಸ್ವಾಮಿ ಅರಮಟ್ಟಿಕೆ ಟ್ರಸ್ಟ್‌ನಿಂದ ಅನ್ನಸಂತರ್ಪಣೆ ನೆರೆವೇರಿತು. ವಿವಿಧ ಸಮಾಜದವರು ಅರವಟ್ಟಿಕೆ ಏರ್ಪಡಿಸಿದ್ದರು. ಕೋವಿಡ್ ಸೋಂಕು ನಡುವೆಯೂ ಅಂಗಡಿ ಮುಗ್ಗಟ್ಟುಗಳು, ಕಡ್ಲೆಪುರಿ, ಮಿಠಾಯಿ, ಜೂಸ್, ಬೊಂಬೆ ಅಂಗಡಿಗಳಲ್ಲಿ ಗ್ರಾಹಕರು ಖರೀದಿಗೆ ಮುಗಿ ಬಿದ್ದಿದ್ದರು. ಸೋಮೇಶ್ವರ ಸ್ವಾಮಿಗೆ ಸಾವಿರಾರು ಭಕ್ತರು ಶ್ರದ್ಧಾಭಕ್ತಿಯಿಂದ ಪೂಜೆ ನೆರವೇರಿಸಿದರು. ಭಕ್ತರು ರಥೋತ್ಸವಕ್ಕೆ ಬಾಳೆಹಣ್ಣು, ಧವನ ಎಸೆದು ಭಕ್ತಿ ಸಮರ್ಪಿಸಿದರು. ದೇವರ ದರ್ಶನ ಮಾಡಿದ ಭಕ್ತರುಗಳಿಗೆ ಮಜ್ಜಿಗೆ-ಪಾನಕ, ಹೆಸರುಬೇಳೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಎಂಎಲ್‌ಸಿ ಆ.ದೇವೇಗೌಡ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ಜಿ. ರಂಗಧಾಮಯ್ಯ, ಮಾಜಿ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಪುರಸಭೆ ಅಧ್ಯಕ್ಷೆ ಭಾಗ್ಯಮ್ಮ ನಾರಾಯಣಪ್ಪ, ರಾಮ ನಗರ ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷೆ ಲಕ್ಷ್ಮೀ, ತಾಲೂಕು ಜೆಡಿಎಸ್ ಮಹಿಳಾಧ್ಯಕ್ಷೆ ಶೈಲಜಾ, ಜಿಪಂ ಮಾಜಿ ಅಧ್ಯಕ್ಷ ಎಂ.ಕೆ.ಧನಂಜಯ, ಟಿಎಪಿಸಿಎಂಎಸ್ ಅಧ್ಯಕ್ಷ ರವೀಂದ್ರ, ತಮ್ಮಣ್ಣಗೌಡ, ಶಿಕ್ಷಕರಾದ ಕೆಂಪೇಗೌಡ, ಕೆ.ಎಚ್.ಲೋಕೇಶ್, ಪುರಸಭಾ ಸದಸ್ಯರಾದ ಎಂ.ಎನ್.ಮಂಜುನಾಥ್, ಕೆ.ವಿ.ಬಾಲ ರಘು, ಎಚ್.ಜೆ.ಪುರುಷೋತ್ತಮ್, ಜಯಲಕ್ಷ್ಮೀ ಜಯ ರಾಮ್, ಅನಿಲ್‌ಕುಮಾರ್, ರೇಖಾ, ಹೇಮ ಲತಾ, ಎಚ್.ಆರ್.ಮಂಜುನಾಥ್, ಎಚ್.ಜೆ ಪ್ರವೀಣ್, ರೂಪೇಶ್ ಕುಮಾರ್, ಜಯರಾಮ್, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಚಿಕ್ಕಣ್ಣ, ನರಸಿಂಹಮೂರ್ತಿ, ಎಲ್‌ಐಸಿ ಎಚ್.ಶಿವಕುಮಾರ್, ಗ್ರಾಮ ಪಂಚಾಯ್ತಿ ಸದಸ್ಯ ಹೊಸಹಳ್ಳಿ ರಂಗಣ್ಣಿ, ಮುನಿರಾಜು, ದಂಡಿಗೆಪುರ ಅಶೋಕ್, ಡಿ.ಜಿ.ಕುಮಾರ್, ಗಿರಿಧರ್, ಟಿ.ಎಸ್.ಬಾಲರಾಜು ಇದ್ದರು.
ನಾಡಪ್ರಭು ಕೆಂಪೇಗೌಡರು 15ನೇ ಶತಮಾನದಲ್ಲಿ ಸೋಮೇಶ್ವರ ದೇಗುಲ, ಕಲ್ಯಾಣಿ ನಿರ್ಮಿಸಿದ್ದಾರೆ. ಹಿಂದೆ ಕಲ್ಯಾಣಿಯಲ್ಲಿ ದೇವರ ತೆಪ್ಪೋತ್ಸವ ನಡೆಯುತ್ತಿತ್ತು. ಕಲ್ಯಾಣಿ ಸುತ್ತಲೂ ಮೆಟ್ಟಿಲು ನಿರ್ಮಿಸಿ ಪುನಶ್ಚೇತನಗೊಳಿಸಲಾಗಿದೆ. ತೆಪ್ಪೋತ್ಸವ ಮಾಡುವ ಉದ್ದೇಶದಿಂದ ನೀರು ತುಂಬಿಸಲಾಗುತ್ತಿದೆ. ಸಂಸದ ಡಿ.ಕೆ. ಸುರೇಶ್, ಮಾಜಿ ಸಚಿವ ಎಚ್.ಎಂ. ರೇವಣ್ಣ ಸಹಕಾರದಿಂದ ತಾಲೂಕಿನ ಪುರಾತನ ದೇವಾಲಯ, ಕಲ್ಯಾಣಿಗಳನ್ನು ಪುನಶ್ಚೇತನಗೊಳಿಸಲಾಗುತ್ತಿದೆ.
–ಎ.ಮಂಜುನಾಥ್, ಶಾಸಕ
ನಾನು ಶಾಸಕನಾಗಿದ್ದ ಅವಧಿಯಲ್ಲಿ ಪ್ರವಾಸ್ಯೋದ್ಯಮ ಇಲಾಖೆ ಅನುದಾನದಿಂದ ದೇವಾಲಯಕ್ಕೆಶೇ.60ರಷ್ಟು ಅಭಿವೃದ್ಧಿ ಕೆಲಸ ಮಾಡಿಸಲಾಗಿದೆ. ದೇಗುಲದ ಗೋಪುರಕ್ಕೆ ಕಲಶ ಸ್ಥಾಪಿಸುವ ಕೆಲಸ ಆಗಬೇಕಿದೆ. ಸೋಮೇಶ್ವರಸ್ವಾಮಿ ದಯೆಯಿಂದ ತಾಲೂಕು ಕೋವಿಡ್ ಮುಕ್ತವಾಗಿದೆ. ಈ ಬಾರಿ ಸಕಾಲಕ್ಕೆ ಮಳೆಯಾಗಲಿ. ಸಮೃದ್ಧಬೆಳೆಯಾಗಿ ಜನರು ನೆಮ್ಮದಿ ಜೀವನ ನಡೆಸುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ
–ಎಚ್.ಸಿ.ಬಾಲಕೃಷ್ಣ , ಮಾಜಿ ಶಾಸಕ